Breaking News

ಪೆರಾಬೆ ಗ್ರಾ.ಪಂ.ಸಾಮಾನ್ಯ ಸಭೆ: ಕೊಳವೆ ಬಾವಿ ಕೊರೆಯಲು ಅನುಮತಿ ಕೋರಿ ನಿರ್ಣಯ

Puttur_Advt_NewsUnder_1
Puttur_Advt_NewsUnder_1

kolaveಪೆರಾಬೆ: ಪೆರಾಬೆ ಗ್ರಾ.ಪಂ.ನ ಸಾಮಾನ್ಯ ಸಭೆ ಗ್ರಾ.ಪಂ.ಅಧ್ಯಕ್ಷೆ ಬೇಬಿ ಸಿ ಪಾಟಾಳಿಯವರ ಅಧ್ಯಕ್ಷತೆಯಲ್ಲಿ ಅ.೧೯ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಪೆರಾಬೆ ಗ್ರಾ.ಪಂ.ವ್ಯಾಪ್ತಿಯ ಕುಂತೂರು ಹಾಗೂ ಪೆರಾಬೆ ಗ್ರಾಮಗಳಲ್ಲಿ ಶೇ.೯೦ರಷ್ಟು ಕೃಷಿಕರು ಇರುವುದರಿಂದ ಅನುಮತಿ ಇಲ್ಲದೇ ಕೃಷಿಕರು ಕೊಳವೆ ಬಾವಿ ಕೊರೆದಿದ್ದಲ್ಲಿ ಗ್ರಾ.ಪಂ.ನಿಂದ ಎನ್‌ಒಸಿ ನೀಡಲು ಅನುಮತಿ ನೀಡುವಂತೆ ಹಾಗೂ ಕೊಳವೆ ಬಾವಿ ಕೊರೆಯಲು ಕೃಷಿಕರಿಗೆ ಅನುಮತಿ ನೀಡಬೇಕೆಂದು ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಕಜೆ ಎಂಬಲ್ಲಿ ಹಸಿಮೀನು ಮಾರುಕಟ್ಟೆ ರಚಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಸುವರ್ಣ ಗ್ರಾಮ ಯೋಜನೆಯ ೧.೮೦ ಲಕ್ಷ ರೂ. ಅನುದಾನದಲ್ಲಿ ಅಗಲು,ಗೇಟು ಹಾಗೂ ತಡೆಗೋಡೆ ರಚನೆಗೆ ೧.೫೦ ಲಕ್ಷ ರೂ., ಹಾಗೂ ಘನತ್ಯಾಜ್ಯ ಮತ್ತು ಕಸವಿಲೇವಾರಿಗೆ ೩೦ ಸಾವಿರ ರೂ.ನ ಕ್ರಿಯಾಯೋಜನೆ ತಯಾರಿಸಲಾಯಿತು. ೨೦೧೫-೧೬ನೇ ಸಾಲಿನ ಬದಲಿ ಕ್ರಿಯಾಯೋಜನೆ ತಯಾರಿಸಲಾಯಿತು. ವಸತಿ ಫಲಾನುಭವಿಗಳ ಆಯ್ಕೆ, ನಿವೇಶನ ಫಲಾನುಭವಿಗಳ ಆಯ್ಕೆ,ಉಚಿತ ಗ್ಯಾಸ್ ವಿತರಣೆಗೆ ಸಂಬಂಧಿಸಿದಂತೆ ಎಸ್‌ಸಿ,ಎಸ್‌ಟಿ ಫಲಾನುಭವಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸಲಾಯಿತು.
ಉಪಾಧ್ಯಕ್ಷ ಜನಾರ್ದನ ಶೆಟ್ಟಿ, ಸದಸ್ಯರುಗಳಾದ ಚಂದ್ರಶೇಖರ ರೈ, ಮಧುರಾ ಸಿ., ಸುಗುಣ, ಬಾಬು ಗೌಡ ಕೆ.ಎಸ್., ಭುವನೇಶ್ವರ ಕೆ., ಗೀತಾ, ಹರಿಣಾಕ್ಷಿ, ವನಜ, ಅಮೃತ ಜೆ.ರೈ, ಮಹಮ್ಮದ್ ಹನೀಸ್, ಗಂಗಾರತ್ನ ವಸಂತ್, ದಿನೇಶ್ ಎ., ಕೆ.ಎಸ್.ಚೆನ್ನಪ್ಪ ಗೌಡ ಉಪಸ್ಥಿತರಿದ್ದರು. ಕಾರ‍್ಯದರ್ಶಿ ಲಲಿತಾ ಜಿ.ಡಿ.,ಸ್ವಾಗತಿಸಿ ವರದಿ, ಸಾರ್ವಜನಿಕ ಅರ್ಜಿ ಹಾಗೂ ಸರಕಾರದ ಸುತ್ತೋಲೆಯನ್ನು ಸಭೆಗೆ ಮಂಡಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.