ಕರೋಪಾಡಿ: ಕಾಡುಪ್ರಾಣಿ ಬೇಟೆಗಿಟ್ಟ ಸ್ಪೋಟಕ ಸಿಡಿದು ದನ ಮೃತಪಟ್ಟ ಪ್ರಕರಣ ಓರ್ವನ ಸೆರೆ

Puttur_Advt_NewsUnder_1
Puttur_Advt_NewsUnder_1

7ವಿಟ್ಲ: ಕರೋಪಾಡಿ ಗ್ರಾಮದ ಚೆಲ್ಲಂಗಾರು ಗುಡ್ಡ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಗೆಂದು ಸ್ಪೋಟಕವಿಟ್ಟು ದನವೊಂದರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವರನ್ನು ವಿಟ್ಲ ಪೊಲೀಸರು ಅ.೨೦ರಂದು ಬಂಧಿಸಿದ್ದಾರೆ.
ಕರೋಪಾಡಿ ಗ್ರಾಮದ ಚೆಲ್ಲಂಗಾರು ನಿವಾಸಿ ಗೋವಿಂದ ನಾಯ್ಕ (63.ವ)ರವರು ಬಂಧಿತ ಆರೋಪಿ. ಗುಡ್ಡದಲ್ಲಿ ಕಾಡು ಪ್ರಾಣಿಯನ್ನು ಕೊಲ್ಲುವ ಉದ್ದೇಶದಿಂದ ಇವರು ಸ್ಪೋಟಕ ಇಟ್ಟಿದ್ದರೆನ್ನಲಾಗಿದೆ. ಚೆಲ್ಲಂಗಾರು ಗುಡ್ಡದಲ್ಲಿ ಅ.18ರಂದು ರಾಧಾಕೃಷ್ಣ ಮೂಲ್ಯರವರಿಗೆ ಸೇರಿದ 4ವರ್ಷದ ಹಸು ಗುಡ್ಡಕ್ಕೆ ತೆರಳಿದ ವೇಳೆ ಸ್ಫೋಟಕ ಸಿಡಿದು ದನದ ಮುಖ ಛಿದ್ರವಾಗಿ ಮೃತಪಟ್ಟಿತ್ತು.ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.