ಕಲ್ಲುಗುಡ್ಡೆಯಲ್ಲಿ ಕೀರ್ತಿ ಹೋಟೆಲ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

1ಕಡಬ: ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಜೆ.ಜೆ ಆಡಿಟೋರಿಯಂನ ನೂತನ ಕಟ್ಟಡದಲ್ಲಿ ಕೀರ್ತಿ ಹೋಟೆಲ್ ಅ.20ರಂದು ಶುಭಾರಂಭಗೊಂಡಿತ್ತು. ಕಡಬ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್‌ರವರು ದೀಪ ಬೆಳಗಿಸುವುದರ ಮೂಲಕ ಸಂಸ್ಥೆಗೆ ಚಾಲನೆ ನೀಡಿ ನೂಜಿಬಾಳ್ತಿಲ ಪರಿಸರದಲ್ಲಿ ಎಲ್ಲಾ ಜನೋಪಯೋಗಿ ಕಟ್ಟಡಗಳು ವ್ಯಾಪಾರ ಕೇಂದ್ರಗಳು, ಹಣಕಾಸು ಸಂಸ್ಥೆಗಳು, ಕಾರ್‍ಯಾಚರಿಸುತ್ತಿದ್ದು ಈಗಾಗಲೇ ಈ ಭಾಗಕ್ಕೆ ಸುಸಜ್ಜಿತವಾದ ಹೋಟೆಲ್ ಒಂದು ಶುಭಾರಂಭಗೊಂಡಿರುವುದು ಸಂತೋಷದಾಯಕವಾಗಿದೆ. ಈ ಹೋಟೆಲ್ ಸಂಪೂರ್ಣ ಅಭಿವೃದ್ದಿ ಹೊಂದುವುದರೊಂದಿಗೆ ಊರಿನ ಜನತೆಗೆ ಇದರ ಪ್ರಯೋಜನ ಲಭಿಸುವಂತಾಗಲಿ ಎಂದು ಶುಭಹಾರೈಸಿದರು. ಇಚ್ಲಂಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಹರೀಶ್ ಭಟ್ ಬೆಳಿಗ್ಗೆ ಗಣಹೋಮದೊಂದಿಗೆ ಪೂಜಾವಿಧಿವಿಧಾನಗಳನ್ನು ನೆರವೇರಿಸಿದರು.

ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಹೋಟೆಲ್ ಉದ್ಯಮಕ್ಕೆ ಶುಭಹಾರೈಸಿದರು. ಕಟ್ಟಡ ಮಾಲಕ ಸಾಮುವೆಲ್ ಜೋಸ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರೇಷ್ಮಾ ಹಾರ್ಡ್‌ವೇರ್‌ನ ಮಾಲಕ ಲಿಂಗಪ್ಪ ಗೌಡ ಕಾಣದಬಾಗಿಲು, ಗ್ರಾ.ಪಂ.ಸದಸ್ಯ ಹರೀಶ್ ಎನ್, ಪಿ.ಜೆ ಜೋಸೆಫ್ ಪಾರೆಕ್ಕಾಟಿಲ್, ಮಾಯಿಲಪ್ಪ ಗೌಡ ಪಾದೆ ಇಚ್ಲಂಪಾಡಿ, ತುಳಸೀಧರ ನೂಜಿ, ನೇರ್ಲ ಸುವರ್ಣ ಚಿಕನ್ ಸೆಂಟರ್‌ನ ಮಾಲಕ ಗೋಪಾಲಕೃಷ್ಣ, ಕೆ.ಜೆ ವರ್ಗೀಸ್ ಪಲಯಮಜಲು, ಜಾರ್ಜ್ ಪಾಡ್ಲ, ರೆದೀಶ್ ಪಾಡ್ಲ, ಉಮೇಶ್ ಕಲ್ಲುಗುಡ್ಡೆ, ಈಶ್ವರ ಶೆಟ್ಟಿ ಕಂಚಿನಡ್ಕ, ರೋಹಿತ್ ಕಡಬ, ಸಂಸ್ಥೆಯ ಮಾಲಕರ ದೊಡ್ಡಮ್ಮ ಮುತ್ತಮ್ಮ, ಪತ್ನಿ ಪದ್ಮಾವತಿ, ಪುತ್ರಿ ಕೀರ್ತಿಕ, ಪುತ್ರ ಕೀರ್ತನ್, ಯಶ್ವಿನ್ ಇಚ್ಲಂಪಾಡಿ, ಸೇರಿದಂತೆ ಹಲವರು ಆಗಮಿಸಿ ಶುಭಹಾರೈಸಿದರು. ಹೋಟೆಲ್ ಮಾಲಕ ಮೋಹನ್ ಅತಿಥಿಗಳನ್ನು ಬರಮಾಡಿಕೊಂಡರು.

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.