ಉಪ್ಪಿನಂಗಡಿ ಸಂಚಾರ ಅವ್ಯವಸ್ಥೆ-ಸಮಾಲೋಚನಾ ಸಭೆ

Puttur_Advt_NewsUnder_1
Puttur_Advt_NewsUnder_1

uppi1 uppi2

ಸಾರ್ವಜನಿಕ ಹಿತದೃಷ್ಠಿಯಿಂದ ಪಂಚಾಯಿತಿ ಒಳ್ಳೆಯ ಕೆಲಸಕ್ಕೆ ಕೈಹಾಕಿದೆ, ಸಹಕರಿಸಿ-ಎ.ಸಿ.

* ಕೆಎಸ್‌ಆರ್‌ಟಿಸಿ. ಬಸ್ ನಿಲ್ದಾಣ ಅರಣ್ಯ ಇಲಾಖೆ ಜಾಗಕ್ಕೆ ಸ್ಥಳಾಂತರಕ್ಕೆ ಆಗ್ರಹ

* ಎ.ಸಿ. ಸ್ಥಳ ಪರಿಶೀಲನೆ, ಇಲಾಖಾ ವತಿಯಿಂದ ಅಗತ್ಯ ಕ್ರಮಕ್ಕೆ ಸೂಚನೆ

ಪಂಚಾಯಿತಿ ಕ್ರಮಗಳನ್ನು ಅನುಸರಿಸಿ, ಸಹಕರಿಸಿ

ಗ್ರಾಮ ಪಂಚಾಯಿತಿ ಸಾರ್ವಜನಿಕ ಹಿತದೃಷ್ಠಿಯಿಂದ ಪೇಟೆಯೊಳಗೆ ವಾಹನ ನಿಲುಗಡೆ, ಲೋಡ್ ಅನ್‌ಲೋಡು ಬಗ್ಗೆ, ಟೂರಿಸ್ಟ್ ವಾಹನಗಳ ನಿಲುಗಡೆ, ಪಾರ್ಕಿಂಗ್ ಬಗ್ಗೆಯೂ ಸ್ಪಷ್ಟವಾಗಿ ಸೂಚಿಸಿದೆ. ಇವುಗಳು ಸ್ಪಷ್ಟವಾಗಿ ಇದೆ. ಗ್ರಾಮ ಪಂಚಾಯಿತಿ ಸಾರ್ವಜನಿಕ ಹಿತದೃಷ್ಠಿಯಿಂದ ಒಳ್ಳೆಯ ಹೆಜ್ಜೆ ಇಟ್ಟಿದೆ. ಸಾರ್ವಜನಿಕರು, ವರ್ತಕರು ಇದನ್ನು ಪಾಲಿಸುತ್ತಾ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗದ ರೀತಿಯಲ್ಲಿ ಗ್ರಾಮ ಪಂಚಾಯಿತಿಗೆ ಸಹಕಾರ ನೀಡಬೇಕು ಎಂದು ಸಹಾಯಕ ಕಮೀಷನರ್ ಸಭೆಯಲ್ಲಿ ಕೇಳಿಕೊಂಡರು.

ಉಪ್ಪಿನಂಗಡಿ: ಇಲ್ಲಿನ ಗ್ರಾಮ ಪಂಚಾಯಿತಿ ಬಸ್ ನಿಲ್ದಾಣದಲ್ಲಿ ಪ್ರಸಕ್ತ ಕಾರ‍್ಯಾಚರಿಸುತ್ತಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣವನ್ನು ಸಾರ್ವಜನಿಕ ಹಿತದೃಷ್ಠಿಯಿಂದ ಮತ್ತು ಬಸ್ ನಿಲ್ದಾಣದೊಳಗಿನ ವಾಹನ ಒತ್ತಡವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಅದನ್ನು ಅರಣ್ಯ ಇಲಾಖಾ ಜಾಗಕ್ಕೆ ಸ್ಥಳಾಂತರ ಮಾಡುವುದು ಸೂಕ್ತ ಎಂಬ  ಅಭಿಪ್ರಾಯ ವ್ಯಕ್ತವಾಗಿ ಗ್ರಾಮ ಪಂಚಾಯಿತಿ ಮತ್ತು ಕೆ.ಎಸ್.ಆರ್.ಟಿ.ಸಿ. ವತಿಯಿಂದ ಅರಣ್ಯ ಇಲಾಖೆಯನ್ನು ಕೇಳಿಕೊಳ್ಳುವುದಾಗಿ ತೀರ್ಮಾನಿಸಲಾಯಿತು.

ಪುತ್ತೂರು ಸಹಾಯಕ ಕಮೀಷನರ್ ಡಾ. ರಾಜೇಂದ್ರ ಕೆ.ವಿ. ಅಧ್ಯಕ್ಷತೆಯಲ್ಲಿ ಉಪ್ಪಿನಂಗಡಿ ಸಂಗಮ ಕೃಪಾ ಸಭಾಂಗಣದಲ್ಲಿ , ಇಲ್ಲಿನ ಪೇಟೆಯಲ್ಲಿನ ವಾಹನ ಸಂಚಾರ ಅವ್ಯವಸ್ಥೆ ದೂರು ಹಿನ್ನೆಲೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ಅಭಿಪ್ರಾಯಕ್ಕೆ ಬರಲಾಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು ಇಲ್ಲಿನ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಒಂದಾಗಿ ಬಂದು ನಿಂತು ಸಮಸ್ಯೆ ಆಗುತ್ತಿದೆ, ಗ್ರಾಮ ಪಂಚಾಯಿತಿ ಪ್ರತ್ಯೇಕವಾಗಿ ಜಾಗ ಸೂಚಿಸಿ ಇದೀಗ ಸ್ವಲ್ಪ ಮಟ್ಟಿಗೆ ಸಮಸ್ಯೆ ಕಡಿಮೆ ಆಗಿದೆ, ಆದರೆ ಬಸ್‌ಗಳು ಅಧಿಕ ಇರುವುದರಿಂದಾಗಿ ಆಗಾಗ್ಗೆ ಗೊಂದಲ ಉಂಟಾಗುತ್ತಿದೆ. ಇದನ್ನು ಸರಿಪಡಿಸಲು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪ್ರತ್ಯೇಕ ನಿಲ್ದಾಣ ಮಾಡುವುದು ಸೂಕ್ತ ಎಂಬ ಸಲಹೆ ವ್ಯಕ್ತವಾಗಿ ಈ ನಿರ್ಧಾರಕ್ಕೆ ಬರಲಾಯಿತು.

ಸರ್ಕಾರಿ ಜಾಗ ಹುಡುಕಿ: ಮುಂದಿನ ದಿನಗಳಲ್ಲಿ ಉಪ್ಪಿನಂಗಡಿ ಪಟ್ಟಣ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ, ಈ ನಿಟ್ಟಿನಲ್ಲಿ ಇಲ್ಲಿಗೆ ಸುಸಜ್ಜಿತ ಬಸ್ ನಿಲ್ದಾಣ ಮೊದಲಾದ ಉzಶಗಳಿಗೆ ಜಾಗದ ಅಗತ್ಯ ಇದೆ, ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಸರ್ಕಾರಿ ಜಾಗ ಇದ್ದರೆ, ಅದನ್ನು ಗುರುತಿಸಿ ಈಗ್ಗಿಂದಲೇ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು, ಗ್ರಾಮಸ್ಥರು ಗ್ರಾಮದ ಅಭಿವೃದ್ಧಿಯ ದೃಷ್ಠಿಯಿಂದ ಇಂತಹವುಗಳ ಬಗ್ಗೆ ಕಾಳಜಿ ವಹಿಸಬೇಕು, ಇಂತಹವುಗಳಿಗೆ ಇಲಾಖೆಯಿಂದ ಆಗಬೇಕಾದ ಕೆಲಸಗಳನ್ನು ನನ್ನ ಕಡೆಯಿಂದ ಮಾಡಿಕೊಡುವುದಾಗಿ ಸಹಾಯಕ ಕಮೀಷನರ್ ರಾಜೇಂದ್ರ ಈ ಸಂದರ್ಭದಲ್ಲಿ ಹೇಳಿದರು.

ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಿ: ಇಲ್ಲಿನ ಟೂರಿಸ್ಟ್ ಜೀಪುಗಳು, ಅಟೋ ರಿಕ್ಷಾಗಳು, ಟೆಂಪೋ ಮೊದಲಾದ ಸರ್ವಿಸ್ ವಾಹನಗಳು ಅವರುಗಳಿಗೆ ಪಂಚಾಯಿತಿ ನಿಗದಿ ಪಡಿಸಿದ ಸ್ಥಳದಲ್ಲಿ ನಿಂತು ಜನ ಹೇರಿಕೊಂಡು ಹೋಗಬೇಕು, ಅದರ ಹೊರತಾಗಿ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವಾಹನಗಳವರು ವರ್ತಿಸಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ, ಇದರಲ್ಲಿ ಯಾವುದೇ ವಿನಾಯಿತಿ ತೋರಬಾರದು ಎಂದು ಪೊಲೀಸ್ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಎ.ಸಿ.ಯವರು ಸೂಚನೆ ನೀಡಿದರು.

ಅಕ್ರಮ ತೆರವಿಗೆ ಸಂಪೂರ್ಣ ಸಹಕಾರ: ಪೇಟೆಯೊಳಗೆ ಯಾರೇ ಆದರೂ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನು ಮಾಡಿದರೆ, ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ರಸ್ತೆಯನ್ನು, ಚರಂಡಿಯನ್ನು ಅತಿಕ್ರಮಿಸಿದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಿ, ಅಗತ್ಯ ಕಂಡು ಬಂದಲ್ಲಿ ನಾನೂ ಬರುತ್ತೇನೆ, ತೆರವು ಕಾರ‍್ಯಾಚರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ತಿಳಿಸಿದರು.

ಹೆಚ್ಚುವರಿ ಬಸ್‌ಗಳು ನಿಲ್ದಾಣದ ಹೊರಗೆ ಇರಲಿ: ಬಸ್ ನಿಲ್ದಾಣದ ಒಳಗೆ ಹೆಚ್ಚು ಬಸ್ಸು ನಿಲ್ಲಸದೆ ಸರದಿಯಲ್ಲಿ ಇರುವ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಪೇಟೆಯಿಂದ ಹೊರಗೆ ಇಳಂತಿಲ ಕ್ರಾಸ್ ಬಳಿ ಮತ್ತು ಅರಣ್ಯ ಇಲಾಖೆ ಬಳಿಯಲ್ಲಿ ಬೇಕಾದಷ್ಟು ಜಾಗ ಇದೆ. ಅಂತಹ ಜಾಗದಲ್ಲಿ ನಿಲುಗಡೆ ಮಾಡಿ ತಮ್ಮ ಸರದಿ ಬಂದಾಗ ನಿಲ್ದಾಣಕ್ಕೆ ಬರುವ ವ್ಯವಸ್ಥೆ ಮಾಡಿಕೊಳ್ಳುವಂತೆ ಸಭೆಯಲ್ಲಿ ಸಲಹೆ ವ್ಯಕ್ತವಾಗಿ ಅದರಂತೆ ಸೂಚನೆ ನೀಡಲಾಯಿತು.

ಸ್ಥಳ ಪರಿಶೀಲನೆ: ಸಭೆಯ ಬಳಿಕ ಸಹಾಯಕ ಕಮೀಷನರ್ ಪ್ರಸ್ತಾಪಿತ ಅರಣ್ಯ ಇಲಾಖೆ ಜಾಗ ಪರಿಶೀಲನೆ ನಡೆಸಿದರು. ಮತ್ತು ಬಸ್ ನಿಲ್ದಾಣ ಪರಿಸರದಲ್ಲಿ, ಕಂದಾಯ ಇಲಾಖೆ ಜಾಗ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್, ಕೆಎಸ್‌ಆರ್‌ಟಿಸಿ ಸಂಸ್ಥೆಯ ವೆಂಕಟೇಶ, ದಿವಾಕರ, ಸಾರಿಗೆ ಇಲಾಖೆಯ ಶ್ರೀಧರ ರಾವ್, ಪ್ರಭಾರ ಸಬ್ ಇನ್ಸ್‌ಪೆಕ್ಟರ್ ರತನ್, ಉಪ ತಹಸೀಲ್ದಾರ್ ಸದಾಶಿವ ನಾಯ್ಕ್, ಕಂದಾಯ ನಿರೀಕ್ಷಕ ಮಂಜುನಾಥ ಪೂರಕ ಮಾಹಿತಿ ನೀಡಿ ಮಾತನಾಡಿದರು. ಸಾರ್ವಜನಿಕರ ಪರವಾಗಿ ಟೂರಿಸ್ಟ್ ಜೀಪು ಚಾಲಕ ಮಾಲಕ ಸಂಘದ ಅಧ್ಯಕ್ಷ ದಿನಕರ ರೈ, ವರ್ತಕ ಸಂಘದ ಕೈಲಾರ್ ರಾಜಗೋಪಾಲ ಭಟ್, ಅನಂತರಾಮ ಕಿಣಿ, ರಿಕ್ಷಾ ಚಾಲಕರ ಸಂಘದ ಫಾರೂಕ್ ಬೆದ್ರೋಡಿ, ಶೇಷಪ್ಪ ನೆಕ್ಕಿಲು, ಸ್ಥಳೀಯ ಪ್ರಮುಖರಾದ ಸೋಮನಾಥ, ಜಯಂತ ಪೊರೋಳಿ, ಆನಂದ ರಾಮಕುಂಜ, ಮಹಮ್ಮದ್ ಕೆಂಪಿ, ಅಜೀಜ್ ನಿನ್ನಿಕಲ್, ಪತ್ರಕರ್ತರಾದ ಸಿದ್ದಿಕ್ ನೀರಾಜೆ, ಉದಯಕುಮಾರ್, ಸರ್ವೇಶ್ ಕುಮಾರ್ ಮಾತನಾಡಿದರು. ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿ ಸುಜಾತ ಕೃಷ್ಣ, ಜಿಲ್ಲಾ ಕೆಡಿಪಿ ಸದಸ್ಯ ಯು.ಕೆ. ಅಯ್ಯೂಬ್, ತಾಲ್ಲೂಕು ಕೆಡಿಪಿ ಸದಸ್ಯ ಅಶ್ರಫ್ ಬಸ್ತಿಕ್ಕಾರ್, ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿ’ಕೋಸ್ತ, ರವಿಕಿರಣ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೊಯಿದು ಕುಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅಸಾಫ್ ಸ್ವಾಗತಿಸಿ, ಗ್ರಾಮಕರಣಿಕ ರಮಾನಂದ ಚಕ್ಕಡಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.