ಕಡಬದಲ್ಲಿ ಶಿವರಾಮ್ ಇಂಡಸ್ಟ್ರೀಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

kadaba1 kadaba2

ಕಡಬ: ಇಲ್ಲಿನ ಪಂಜ ರಸ್ತೆಯಲ್ಲಿರುವ ಶ್ರೀದೇವಿ ಕಾರ್ತಿಕೇಯ ಕಾಂಪ್ಲೆಕ್ಸ್‌ನಲ್ಲಿ ಶಿವರಾಮ್ ಇಂಡಸ್ಟ್ರೀಸ್ ಅ.20ರಂದು ಶುಭಾರಂಭಗೊಂಡಿತು. ಕಾರ‍್ಯಕ್ರಮವನ್ನು ಶ್ರೀಮತಿ ಅಮ್ಮಣಿ ಶಿವರಾಮ ಆಚಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು.  ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ ಸಭೆಯ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.  ಕಡಬ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ ಯಂತ್ರವನ್ನು ಚಾಲನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ ಕಡಬ ಪೇಟೆಯಲ್ಲಿ ಶಿವರಾಮ್ ಇಂಡಸ್ಟ್ರೀಸ್‌ನ ಮೂಲಕ ಮಾಲಕ ಮೋಹನ್‌ದಾಸ್‌ರವರು ಪೇಟೆಗೆ ಇನ್ನೊಂದು ಗರಿಯನ್ನು ತಂದುಕೊಟ್ಟಿದ್ದಾರೆ. ಯುವಕರ ಸಾಧನೆ ನಮ್ಮ ಪರಿಸರಕ್ಕೆ ಮಾದರಿಯಾಗುವುದರೊಂದಿಗೆ ಯುವ ಪೀಳಿಗೆಯು ವಿವಿಧ ಪ್ರಗತಿಪರ ಅಭಿವೃದ್ದಿ ಕೆಲಸ ಮಾಡುವಲ್ಲಿ ಸಾರ್ವಜನಿಕರ ಸಂಪೂರ್ಣ ಸಹಾಯ ಸಹಕಾರ ಇರಲಿ. ಮೋಹನ್‌ದಾಸ್‌ರವರ ಸಂಸ್ಥೆಯು ಉತ್ತರೋತ್ತರ ಅಭಿವೃದ್ದಿ ಹೊಂದಲಿ ಎಂದು ಶುಭ ಹಾರೈಸಿದರು.

ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಕಡಬ ಸಿ.ಎ ಬ್ಯಾಂಕ್‌ನ ಅಧ್ಯಕ್ಷ ಸುಂದರ ಗೌಡ ಮಂಡೆಕರ, ರಬ್ಬರ್ ಬೆಳೆಗಾರರ ಮಾರಾಟ ಸಹಕಾರ ಸಂಘದ ನಿರ್ದೇಶಕ ರಮೇಶ್ ಕಲ್ಪುರೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕಡಬ ಶಾಖೆಯ ವ್ಯವಸ್ಥಾಪಕ ಸ್ಯಾಮ್ ಎಸ್.ಜೆ, ಕಡಬ ಮೆಸ್ಕಾಂ ವಿಭಾಗೀಯ ಸಹಾಯಕ ಇಂಜಿನಿಯರ್ ಸುರೇಶ್ ಕುಮಾರ್, ಕಡಬ ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್, ಕಟ್ಟಡ ಮಾಲಕ ಉಮೇಶ್ ನಾಕ್, ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಉಪಸ್ಥಿತರಿದ್ದರು. ಕೇರಳ ಕೂತಾಟುಕುಳಂ ಆರ್ಯಾ ಇಂಜಿನಿಯರಿಂಗ್ ವರ್ಕ್ಸ್‌ನ ಪದ್ಮನಾಭನ್‌ರವರರಿಗೆ ಸಂಸ್ಥೆಯ ಮಾಲಕ ಮೋಹನ್ ದಾಸ್ ಗುರುಕಾಣಿಕೆ ನೀಡಿ ಗೌರವಿಸಿದರು. ಕೇರಳ ಕೊಟ್ಟಾಯಂನ ತಂಗಚ್ಚನ್ ಕೆ.ಆರ್. ಅತಿಥಿಗಳಿಗೆ ಹೂಗುಚ್ಚ ನೀಡಿ ಗೌರವಿಸಿದರು.  ಸಂಸ್ಥೆಯ ಮಾಲಕ ಮೋಹನ್‌ದಾಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯಲ್ಲಿ ರಬ್ಬರ್ ರೋಲಿಂಗ್ ಮಿಶಿನ್, ಟಾಪಿಂಗ್ ಕತ್ತಿ, ಗೇಟು ಗ್ರಿಲ್ಲಿಂಗ್, ಪೈಪು ಬೆಂಡಿಂಗ್ , ಗೃಹ ಬಳಕೆಯ ಹಾಗೂ ಕೃಷಿ ಉಪಕರಣಗಳನ್ನು ತಯಾರಿಸಿ ಕೊಡಲಾಗುವುದು ಎಂದು  ಹೇಳಿದರು. ಪ್ರಮುಖರಾದ ಗೋಪಾಲ್ ರಾವ್, ಚಂದ್ರಶೇಖರ ಕರ್ಕೇರ, ಸತೀಶ್ ನಾಕ್, ಶಾಲಿನಿ ಸತೀಶ್ ನಾಕ್ , ಎ.ಎಸ್ ಶೆರೀಫ್, ಅಶ್ರಫ್ ಶೇಡಿಗುಂಡಿ, ನೀಲಾವತಿ ಶಿವರಾಮ್, ಮಂಜುನಾಥ್ ಕೋಲಂತ್ತಾಡಿ, ನಾರಾಯಣ ಗೌಡ ಅಲುಂಗೂರು, ಅಶೋಕ್ ಕುಮಾರ್ ಪಿ, ಪ್ರಕಾಶ್ ಎನ್.ಕೆ, ಜೋಸೆಫ್ ಪಾರೆಕ್ಕಾಟಿಲ್, ದಯಾನಂದ ಪಿಜಕ್ಕಳ, ವೆಂಕಟೇಶ್ ಪಾಡ್ಲ, ವಿವೇಕಾನಂದ ಬೊಳ್ಳಾಜೆ, ಮೋಹನ್‌ದಾಸ್ ಕುಟುಂಬಸ್ಥರು ಸೇರಿದಂತೆ ಹಲವಾರು  ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಅಮ್ಮಣಿ ಶಿವರಾಮ್, ಶಿವರಾಮ್, ಮೋಹನ್‌ದಾಸ್, ರಾಜೇಶ್, ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.  ರಾಜೇಶ್ ವಂದಿಸಿದರು. ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ನಾಗರಾಜ್ ಎನ್.ಕೆ, ಹಾಗೂ ನಿಶಾಮೋಹನ್ ಕಾರ‍್ಯಕ್ರಮ ನಿರೂಪಿಸಿದರು. ಸಂದ್ಯಾ ಪ್ರಾರ್ಥನೆ ಹಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.