Breaking News

ಕೊಳ್ತಿಗೆ ಅರಣ್ಯ ಗ್ರಾಮ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮತದಾನ; 1 ಮತದ ಅಂತರದಿಂದ ಪ್ರಮೋದ್ ಕೆ.ಎಸ್.ಗೆ ಗೆಲುವು,  ತೀರ್ಥಾನಂದ ದುಗ್ಗಳ  ಪರಾಭವ

Puttur_Advt_NewsUnder_1
Puttur_Advt_NewsUnder_1

kolthige1

kolthige2

ಪುತ್ತೂರು: ಅರಣ್ಯ ಸಂರಕ್ಷಣೆಯ ಉದ್ದೇಶವನ್ನಿಟ್ಟುಕೊಂಡು 1993-94 ರಲ್ಲಿ ಕೊಳ್ತಿಗೆಯಲ್ಲಿ ರಚನೆಗೊಂಡ ಅರಣ್ಯ ಗ್ರಾಮ ಸಮಿತಿಗೆ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಅ.20 ರಂದು ಬಿರುಸಿನ ಮತದಾನ ಪ್ರಕ್ರಿಯೆ ನಡೆಯಿತು. ಕೊಳ್ತಿಗೆ ಗ್ರಾ.ಪಂನ ಸಭಾ ಭವನದಲ್ಲಿ ನಡೆದ ಮತದಾನದಲ್ಲಿ ಕೊಳ್ತಿಗೆ ಗ್ರಾ.ಪಂನ ಹಾಲಿ ಸದಸ್ಯ ತೀರ್ಥಾನಂದ ದುಗ್ಗಳ ಮತ್ತು ಗ್ರಾ.ಪಂನ ಮಾಜಿ ಅಧ್ಯಕ್ಷ ಪ್ರಮೋದ್ ಕೆ.ಎಸ್‌ರವರ ನಡುವೆ ನೇರ ಹಣಾಹಣಿ ನಡೆಯಿತು. ಮತದಾನದಲ್ಲಿ ಪ್ರಮೋದ್ ಕೆ.ಎಸ್.ರವರು 1 ಮತದ ಅಂತರದಿಂದ ಗೆಲುವು ಸಾಧಿಸುವ ಮೂಲಕ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.

ಕೊಳ್ತಿಗೆ ಗ್ರಾಮದಲ್ಲಿ ಅರಣ್ಯ ಸಮಿತಿಯಲ್ಲಿ ಒಟ್ಟು 72 ಮಂದಿ ಮತದಾನ ಹಕ್ಕು ಹೊಂದಿರುವ ಸದಸ್ಯರಿದ್ದು, ಇವರಲ್ಲಿ 71 ಮಂದಿ ಮತ ಚಲಾಯಿಸಿದ್ದರು. ಇದರಲ್ಲಿ ಪ್ರಮೋದ್ ಕೆ.ಎಸ್‌ರವರು 34 ಮತಗಳನ್ನು ಪಡೆದುಕೊಂಡರೆ, ತೀರ್ಥಾನಂದ ದುಗ್ಗಳರವರು 33 ಮತಗಳನ್ನು ಪಡೆದುಕೊಂಡಿದ್ದರು. 7 ಮತಗಳು ಅಸಿಂಧುವಾಗಿದ್ದವು.

2 ರೂಪಾಯಿ ಪಾವತಿಸಿ ಸದಸ್ಯರಾಗಬಹುದು: ಕೊಳ್ತಿಗೆ ಅರಣ್ಯ ಗ್ರಾಮ ಸಮಿತಿ 1993-94 ರಲ್ಲಿ ಸ್ಥಾಪನೆಯಾಯಿತು. ಅರಣ್ಯ ಸಂರಕ್ಷಣೆಯ ಉzಶವನ್ನಿಟ್ಟುಕೊಂಡು ಸಮಿತಿಯನ್ನು ರಚಿಸಲಾಗಿದೆ. ಸ್ಥಾಪಕ ಅಧ್ಯಕ್ಷರಾಗಿ ಸಂಜೀವ ರೈ ಕಲಾಯಿರವರು 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಆ ಬಳಿಕ ಗಂಗಾಧರ ಗೌಡ (5ವರ್ಷ) ಮತ್ತು ಪ್ರಸ್ತುತ ತೀರ್ಥಾನಂದ ದುಗ್ಗಳರವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ತೀರ್ಥಾನಂದ ದುಗ್ಗಳರವರು ಕೂಡ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅರಣ್ಯ ಸಮಿತಿಗೆ ಗ್ರಾಮದ ಯಾರೂ ಬೇಕಾದರೂ ಸದಸ್ಯರಾಗಬಹುದಾಗಿದೆ. ಕೇವಲ 2 ರೂಪಾಯಿ ಪಾವತಿಸಿ ಸದಸ್ಯರಾಗಬಹುದಾಗಿದ್ದು, ಅರಣ್ಯ ಸಂರಕ್ಷಣೆ ಇವರ ಮುಖ್ಯ ಗುರಿಯಾಗಿರುತ್ತದೆ. ಸದಸ್ಯರನ್ನು ಸೇರ್ಪಡೆ ಮಾಡುವ ಜವಾಬ್ದಾರಿ ಆಯಾ ಗ್ರಾಮ ಸಮಿತಿಯ ಅಧ್ಯಕ್ಷರಿಗೆ ಇರುತ್ತದೆ.

ಮತದಾನ ಪ್ರಕ್ರಿಯೆಯಲ್ಲಿ ಇವರೆಲ್ಲ ಇದ್ದರು: ಬೆಳಿಗ್ಗೆ 11 ರ ಸುಮಾರಿಗೆ ಆರಂಭವಾದ ಮತದಾನ ಪ್ರಕ್ರಿಯೆ ಮಧ್ಯಾಹ್ನದ ವೇಳೆಗೆ ಮುಗಿಯಿತು. ಇಬ್ಬರು ಅಭ್ಯರ್ಥಿಗಳು ಕೂಡ ಜಿದ್ದಾಜಿದ್ದಿನ ಸ್ಪರ್ಧೆಯನ್ನು ನೀಡಿದ್ದರು. ಕಂದಾಯ ನಿರೀಕ್ಷಕ ದಯಾನಂದ ಹೆಗ್ಡೆ ಚುನಾವಣಾಧಿಕಾರಿಯಾಗಿದ್ದರು. ಈ ಸಂದರ್ಭದಲ್ಲಿ ಪುತ್ತೂರು ವಲಯ ಅರಣ್ಯಾಧಿಕಾರಿ ವಿ.ಪಿ ಕಾರ್ಯಪ್ಪ, ಆನೆಗುಂಡಿ ಗಸ್ತು ಅರಣ್ಯ ರಕ್ಷಕ ಕ್ಯಾತಲಿಂಗ, ಬೆಳ್ಳಾರೆ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸಂತೋಷ್, ಪಾಣಾಜೆಯ ಕೆ.ನಾರಾಯಣ, ವಿಟ್ಲದ ಲೋಕೇಶ್ ಎಸ್.ಎನ್ ಮತ್ತಿತರರು ಉಪಸ್ಥಿತರಿದ್ದರು. ಅರಣ್ಯ ಸಮಿತಿಯ ಕಾರ‍್ಯದರ್ಶಿ, ಅರಣ್ಯ ಸಂರಕ್ಷಕ ಶಿವಾನಂದ ಆಚಾರ್ಯ ಸ್ವಾಗತಿಸಿ, ವಂದಿಸಿದರು.

ಪಟಾಕಿ ಸಿಡಿಸಿ ಸಂಭ್ರಮಾಚರಣೆ: ಮತದಾನದಲ್ಲಿ ಗೆಲುವು ಸಾಧಿಸಿದ ಪ್ರಮೋದ್ ಕೆ.ಎಸ್‌ರವರ ಬೆಂಬಲಿಗರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.

10 ಜನರ ಗ್ರಾಮ ಸಮಿತಿ ರಚನೆ: ಅಧ್ಯಕ್ಷರು ಸೇರಿ ಒಟ್ಟು 11 ಮಂದಿಯ ಗ್ರಾಮ ಸಮಿತಿಯನ್ನು ಈ ಸಂದರ್ಭದಲ್ಲಿ ರಚಿಸಲಾಯಿತು. ಇದರಲ್ಲಿ ಜನರಲ್ ವಿಭಾಗದಲ್ಲಿ ರಾಮಚಂದ್ರ ಭಟ್ ಅಮಳ, ತೀರ್ಥಾನಂದ ದುಗ್ಗಳ, ಯಶೋಧ ಕೋಡಂಬು, ಲೀಲಾವತಿ ಮಾಲೆತ್ತೋಡಿ, ಭೂರಹಿತ ಹಿಡುವಳಿದಾರ ವಿಭಾಗದಲ್ಲಿ ಮಾಯಿಲಪ್ಪ ರೈ,ವೇದಾವತಿ, ಕುಶಲಕರ್ಮಿ ವಿಭಾಗದಲ್ಲಿ ಕೃಷ್ಣಪ್ಪ ಕುದ್ಕುಳಿ, ಹೇಮಾಲತಾ, ಎಸ್‌ಸಿ/ಎಸ್‌ಟಿ ವಿಭಾಗದಲ್ಲಿ ಅಣ್ಣು ಕಲಾಯಿ, ಮುದರುರವರುಗಳನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.