ವಿಶ್ವ ತುಳುವೆರೆ ಆಯನೋ ರಥ ಯಾತ್ರೆಗೆ ಆರ್ಲಪದವಿನಲ್ಲಿ‌ ಸ್ವಾಗತ

Puttur_Advt_NewsUnder_1
Puttur_Advt_NewsUnder_1

img-20161021-wa0007_2

ಆರ್ಲಪದವು: ಬದಿಯಡ್ಕದಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಶ್ವತುಳುವೆರೆ ಆಯನೋ ಕಾರ್ಯಕ್ರಮದ ಪ್ರಚಾರ ರಥವನ್ನು ಅ.20 ರಂದು ಸ್ವಾಗತಿಸಲಾಯಿತು. ಊರಿನ ಹಿರಿಯ ದೈವ ನರ್ತಕ, ನಾಟಿ ವೈಧ್ಯ ಕೊರಗ ನಲಿಕೆ ಕೀಲಂಪಾಡಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಊರಿನ ಹಿರಿಯ ಕೃಷಿಕ ಈಶ್ವರ ಭಟ್ಟ್ ಕಡಂದೇಲು, ಗಡಿನಾಡ ಧ್ವನಿ ಪತ್ರಿಕೆಯ ಸಂಪಾದಕ ಎಸ್.ಅಬ್ಬೂಬಕ್ಕರ್ ಆರ್ಲಪದವು, ಜನ ಜಾಗೃತಿ ಅಧ್ಯಕ್ಷ ಸದಾಶಿವ ರೈ ಸೂರಂಬೈಲು, ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾರಾಯಣ ಪೂಜಾರಿ ತೂಂಬಡ್ಕ, ರಂಗಭೂಮಿ ಕಲಾವಿದ ದೀಪಕ್ ರೈ ಪಾಣಾಜೆ, ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಜಾನು ನಾಯ್ಕ ಭರಣ್ಯ, ಪ್ರೇಂರಾಜ್ ಆರ್ಲಪದವು, ಗಣೇಶ್ ರೈ ಮಿತ್ರಂಪಾಡಿ, ಸಂತೋಷ್ ರೈ ಗೋಳಿತ್ತಡಿ, ಜಯ ಪ್ರಸಾದ್ ರೈ ಕೋಟೆ, ಶಶಿಧರ ಪೂಜಾರಿ ನಡುಕಟ್ಟ , ಕುಂಞಿಕಣ್ಣ ಮಣಿಯಾಣಿ ಸುಡುಕುಳಿ ಉಪಸ್ಥಿತರಿದ್ದರು. ಶ್ರೀ ದುರ್ಗಾ ಸಭಾಭವನದ ಮಾಲಕ ಸುಬ್ರಹ್ಮಣ್ಯ ಭಟ್  ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.