ಪಿಯು ತರಗತಿಗಳಿಗೆ ಮಧ್ಯಂತರ ರಜೆ 2 ದಿನ ವಿಸ್ತರಣೆ-ಅ.26ಕ್ಕೆ ತರಗತಿ ಆರಂಭ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಪದವಿ ಪೂರ್ವ ಕಾಲೇಜುಗಳಿಗೆ ಮಧ್ಯಂತರ ರಜೆಯನ್ನು 2 ದಿನ ವಿಸ್ತರಿಸಿ ಪ.ಪೂ. ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಅ.24ಕ್ಕೆ ಪುನರಾರಂಭಗೊಳ್ಳಬೇಕಿದ್ದ ಪಿಯುಸಿ ತರಗತಿಗಳು ಅ.26ಕ್ಕೆ ಆರಂಭಗೊಳ್ಳಲಿದೆ, ದ.ಕ, ಉಡುಪಿ, ಶಿವಮೊಗ್ಗ, ಕೊಪ್ಪಳ, ಉ.ಕ ಜಿಲ್ಲೆಗಳಲ್ಲಿ ಕಾವೇರಿ ಪ್ರಕರಣಕ್ಕೆ ಸಂಬಂಧಿಸಿ ಒಂದು ದಿನ ಮಾತ್ರ ರಜೆ ನೀಡಿದ್ದರಿಂದ ಈ ಜಿಲ್ಲೆಗಳಿಗೆ ರಜೆಯನ್ನು ಅ.26ರವರೆಗೆ ವಿಸ್ತರಿಸಲಾಗಿದೆ ಎಂದು ಪ.ಪೂ ಶಿಕ್ಷಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

ಪ್ರಾಥಮಿಕ, ಪ್ರೌಢ ತರಗತಿಗಳು ಅ.೨೮ಕ್ಕೆ ಆರಂಭ: ಪ್ರಾಥಮಿಕ ಮತ್ತು ಪ್ರೌಢ ತರಗತಿಗಳಿಗೂ ಮಧ್ಯಂತರ ರಜೆ ವಿಸ್ತರಣೆಯಾಗಿ ನ.2ಕ್ಕೆ ತರಗತಿಗಳು ಆರಂಭವಾಗಲಿದೆ ಎಂದು ವಾಟ್ಸಾಪ್‌ನಲ್ಲಿ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್‌ರವರನ್ನು ಸಂಪರ್ಕಿಸಿದಾಗ ರಜೆ ವಿಸ್ತರಣೆಯಾದ ಬಗ್ಗೆ ಇಲಾಖೆಯಿಂದ ಯಾವುದೇ ಆದೇಶ ಬಂದಿಲ್ಲ, ರಜೆ ವಿಸ್ತರಣೆಯ ಬಗ್ಗೆ ವಾಟ್ಸಾಪ್‌ನಲ್ಲಿ ರವಾನೆಯಾಗುತ್ತಿರುವ ಸುದ್ದಿ ಸುಳ್ಳು, ಈವರೆಗೆ ಬಂದಿರುವ ಆದೇಶದ ಪ್ರಕಾರ ಅ.28ಕ್ಕೆ ತರಗತಿಗಳು ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.