ಕುಂಜೂರುಪಂಜ: ಪೌಷ್ಠಿಕ ಆಹಾರ ಸಪ್ತಾಹ-ಆರೋಗ್ಯ ಸಹಾಯಕಿಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1

kunjoorupanja_2

ಪುತ್ತೂರು: ಕುಂಜೂರುಪಂಜ ಅಂಗನವಾಡಿ ಕೇಂದ್ರದಲ್ಲಿ ಸ್ತ್ರೀ ಶಕ್ತಿ ಸಂಘ ಹಾಗೂ ಮಕ್ಕಳ ಪೋಷಕರ ವತಿಯಿಂದ ಪೌಷ್ಠಿಕ ಆಹಾರ ಸಪ್ತಾಹ ಹಾಗೂ ಆರೋಗ್ಯ ಸಹಾಯಕಿ ಸೆಲ್ವಿರವರಿಗೆ ಬೀಳ್ಕೊಡುಗೆ ಸಮಾರಂಭ ಇತ್ತಿಚೆಗೆ ನಡೆಯಿತು. ಆರೋಗ್ಯ ಇಲಾಖೆಯ ಕಾರ್ಯಕರ್ತೆ ಸ್ಟೆಲ್ಲಾ, ಕುಂಜೂರುಪಂಜ ಶಾಲಾ ಶಿಕ್ಷಕಿ ರಂಜಿನಿ, ಆಶಾ ಕಾರ್ಯಕರ್ತೆ ಚಂದ್ರಾವತಿ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ಯಾಪು ಗ್ರಾ.ಪಂ ಉಪಾಧ್ಯಕ್ಷ ವಸಂತ ಶ್ರೀದುರ್ಗಾ ವಹಿಸಿ ಸಮಯೋಚಿತವಾಗಿ ಮಾತನಾಡಿದರು. ಸಭೆಯಲ್ಲಿ ಸ್ತ್ರೀಶಕ್ತಿ ಸಂಘದ ಸದಸ್ಯರು, ಮಕ್ಕಳ ಪೋಷಕರು ಹಾಗೂ ಅಂಗನವಾಡಿ ಮಕ್ಕಳು ಹಾಜರಿದ್ದರು. ಆರೋಗ್ಯ ಸಹಾಯಕಿ ಸೆಲ್ವಿಯವರು ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿ ರಂಜಿನಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಬಳಿಕ ಪೌಷ್ಠಿಕ ಆಹಾರದ ಪ್ರಾತ್ಯಕ್ಷಿಕೆ ಹಾಗೂ ಬಹುಮಾನ ವಿತರಣೆ ನಡೆಯಿತು. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ವೇದಾವತಿ ಸ್ವಾಗತಿಸಿದರು, ಸ್ತ್ರೀ ಶಕ್ತಿ ಸಂಘದ ಸದಸ್ಯೆ ರಂಜಿತಾ ಪ್ರಾರ್ಥಿಸಿದರು. ಅಂಗನವಾಡಿ ಸಹಾಯಕಿ ಶ್ಯಾಮಲ ವಂದಿಸಿದರು. ಬೆಟ್ಟಂಪಾಡಿ ಕಾಲೇಜಿನ ಸಮಾಜ ಸೇವಾ ವಿಭಾಗದ ವಿದ್ಯಾರ್ಥಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.