ಬಹುಜನ ವಿದ್ಯಾರ್ಥಿ ಸಂಘದಿಂದ ವಿಚಾರ ಸಂಕಿರಣ

Puttur_Advt_NewsUnder_1
Puttur_Advt_NewsUnder_1

bahujanaಪುತ್ತೂರು: ಬಿ.ವಿ.ಎಸ್. ಜನಾಂದೋಲನದ ಅಂಗವಾಗಿ ಮಂಜಲ್ಪಡ್ಪು ಬಿ.ಇ.ಎಂ. ಹಿ.ಪ್ರಾ. ಶಾಲೆಯಲ್ಲಿ ಇತ್ತೀಚೆಗೆ ನಡೆದ ವಿಚಾರ ಸಂಕೀರ್ಣವನ್ನು ಪುತ್ತೂರು ಸಿ.ಎಸ್.ಐ. ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಚಂದ್ರಶೇಖರ್ ಮೂರ್ತಿಯವರು ಡಾ| ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಮಾಲಾ ರ್ಪಣೆ ಮಾಡುವುದರ ಮೂಲಕ ಉದ್ಘಾಟಿಸಿದರು.
ಬಹುಜನ ವಿದ್ಯಾರ್ಥಿ ಸಂಘದ ಸಂಪನ್ಮೂಲ ವ್ಯಕ್ತಿ, ಹಾಸನದ ವಕೀಲ ಎಂ.ಎಸ್. ಯೋಗೀಶ್ ವಿಚಾರ ಸಂಕೀರ್ಣವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಇಂಟರ್ ಕಂಪೆನಿಯ ಸಹಯೋಗದೊಂದಿಗೆ ರಾಷ್ಟ್ರಮಟ್ಟದ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾದ ಪುತ್ತೂರಿನ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಶರತ್ ಕುಮಾರ್ ಎನ್., ವಿಖ್ಯಾತ್ ಯು., ನೇಹಾ ಜಿ.ಎಂ., ಜಯಪ್ರಭಾ ಕೆ., ಮಹಮ್ಮದ್ ಹಾರೂನ್, ಮಾಶಲ್ ಮಹಮ್ಮದ್, ಸೃಜನ್ ರೈ ಆರ್.ರವರನ್ನು ಬಹುಜನ ವಿದ್ಯಾರ್ಥಿ ಸಂಘ ಪುತ್ತೂರು ಘಟಕದಿಂದ ಅಭಿನಂದಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಂಜಲ್ಪಡ್ಪು ಬಿ.ಇ.ಎಂ. ಹಿ.ಪ್ರಾ. ಶಾಲಾ ಮುಖ್ಯಗುರು ಮನೋಹರ್, ಪುತ್ತೂರು ರೋಟರಿ ಕ್ಲಬ್‌ನ ಸತೀಶ್ ಬಲ್ಯಾಯ, ಎಸ್.ಆರ್. ವಾಸುದೇವ್ ಸಾಮೆತ್ತಡ್ಕ, ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಯೋ ಜಕ ಸತೀಶ್ ಕಕ್ಕೆಪದವು, ತಾಲೂಕು ಸಂಯೋಜಕ ದೇವಪ್ಪ ಕಾರೆಕ್ಕಾಡು ಭಾಗವಹಿಸಿದ್ದರು. ಗಣೇಶ್ ಕಾರೆಕ್ಕಾಡು, ನಿಶಾಂತ್ ಮುಂಡೋಡಿ, ಲೋಕೇಶ್ ಕಾರೆಕ್ಕಾಡು, ಗಿರೀಶ್ ನಗರ, ದಯಾನಂದ್, ಹೇಮಾ ನಗರ, ಶ್ವೇತಾ ಮುಂಡೋಡಿ, ಉದಯ್ ಕುಮಾರ್, ಗೋಪಾಲ್ ದರ್ಬೆತಡ್ಕ, ಸದಾಶಿವ ಬಾವಿಕಟ್ಟೆ, ಉಮೇಶ್ ಬೆಳ್ಳಿಪ್ಪಾಡಿ ಉಪಸ್ಥಿತರಿದ್ದರು. ಮನೋಹರ್ ಕಾರೆಕ್ಕಾಡು ನಿರೂಪಿಸಿ, ಜಯಶ್ರೀ ಕಾರೆಕ್ಕಾಡು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.