Breaking News

ಕಲ್ಪಣೆಯಿಂದ ನಾಪತ್ತೆಯಾದ ಚಂದ್ರಾವತಿ ಮಥುರಾದಲ್ಲಿ ಪತ್ತೆ

Puttur_Advt_NewsUnder_1
Puttur_Advt_NewsUnder_1

2ಪುತ್ತೂರು: ಸರ್ವೆ ಗ್ರಾಮದ ಕಲ್ಪಣೆಯಿಂದ ನಾಪತ್ತೆಯಾದ ಸಿಲ್ವೆಸ್ಟರ್ ನಿವಾಸಿ ಲಾರೆನ್ಸ್ ಎಂಬವರ ಪತ್ನಿ ಚಂದ್ರಾವತಿ(40ವ)ರವರು ಮಥೂರಾದಲ್ಲಿ ಪತ್ತೆಯಾಗಿದ್ದಾರೆ. ಮನೆಯಿಂದ ಸೆ.5ರಂದು ಕೆಲಸಕ್ಕೆ ಹೋದವರು ನಾಪತ್ತೆಯಾಗಿದ್ದರು. ರಾಮಣ್ಣ ಭಂಡಾರಿಯವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದ ಚಂದ್ರಾವತಿಯವರನ್ನು ಪುತ್ರ ಚಿದಾನಂದರವರು ತನ್ನ ಮೋಟಾರು ಸೈಕಲ್‌ನಲ್ಲಿ ಬೆಳಿಗ್ಗೆ ರಾಮಣ್ಣ ಭಂಡಾರಿಯವರ ಮನೆಯ ಗೇಟಿನ ಬಳಿ ಬಿಟ್ಟು ಬಂದಿದ್ದರು. ಸಂಜೆಯಾದರೂ ಚಂದ್ರಾವತಿಯವರು ಮನೆಗೆ ಬಾರದೆ ಇದ್ದು ಆತಂಕಗೊಂಡ ಮನೆಯವರು ರಾಮಣ್ಣ ಭಂಡಾರಿಯವರ ಮನೆಯಲ್ಲಿ ವಿಚಾರಿಸಿದಾಗ ಕೆಲಸಕ್ಕೆ ಬಾರದ ವಿಚಾರ ತಿಳಿಯಿತು. ಬಳಿಕ ಮನೆಯ ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ನೆರೆಯ ಗೋಪಾಲಕೃಷ್ಣ ಎಂಬವರು ಕೂಡ ಕಾಣೆಯಾಗಿರುವುದರ ಬಗ್ಗೆ ಮಾಹಿತಿ ಅರಿತು ಚಂದ್ರಾವತಿಯವರು ಗೋಪಾಲಕೃಷ್ಣರವರ ಜೊತೆಯಲ್ಲಿ ಹೋಗಿರುವ ಸಂಶಯ ವ್ಯಕ್ತವಾಗಿತ್ತು. ಈ ಕುರಿತು ಸಂಪ್ಯ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಚಂದ್ರಾವತಿಯವರನ್ನು ಅ.20ರಂದು ರಾತ್ರಿ ಮಥುರಾದಲ್ಲಿ ಪತ್ತೆ ಮಾಡಿದ್ದಾರೆ.
ಪ್ರವಾಸಕ್ಕೆ ಹೋಗಿದ್ದರು: ಚಂದ್ರಾವತಿಯವರು ಪರಿಚಯಸ್ಥರೊಂದಿಗೆ ಉತ್ತರ ಪ್ರದೇಶ ಪ್ರವಾಸಕ್ಕೆ ಹೋಗಿದ್ದರು. ಶ್ರೀ ಕೃಷ್ಣನ ಜನ್ಮಸ್ಥಳ ಮಥುರಾಕ್ಕೆ ಹೋಗಿ ಅಲ್ಲಿಂದ ಹಿಂದಿರುಗಿ ಬರಲು ಹಣವಿಲ್ಲದ ಹಿನ್ನೆಲೆಯಲ್ಲಿ ಅಲ್ಲಿಯೇ ಉಳಿದು ಕೊಂಡಿದ್ದರು ಎಂದು ಪೊಲೀಸರ ವಿಚಾರಣೆ ವೇಳೆ ಚಂದ್ರಾವತಿಯವರು ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.