‘ನೀರನ್ನು ತುಪ್ಪದಂತೆ ಬಳಸುವ ದಿನ ದೂರವಿಲ್ಲ’ ಕೊಳ್ತಿಗೆ: ಜಲ ಮರುಪೂರಣ ಕಾರ‍್ಯಾಗಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರೈತ ಮಿತ್ರ ಕೂಟ ಕೊಳ್ತಿಗೆ, ಗ್ರಾ.ಪಂ. ಕೊಳ್ತಿಗೆ ಇವರ ಆಶ್ರಯದಲ್ಲಿ ಜಲ ಮರುಪೂರಣ ಕಾರ‍್ಯಾಗಾರ ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ಧನಂಜಯ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೊಳ್ತಿಗೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ ಕುಮಾರ್ ಪೆರ್ಲಂಪಾಡಿ ಕಾರ‍್ಯಾಗಾರ ಉದ್ಘಾಟಿಸಿ, ನೀರು ಅತ್ಯಮೂಲ್ಯ ಇದನ್ನು ತುಪ್ಪದಂತೆ ಬಳಸುವ ದಿನ ದೂರವಿಲ್ಲ. ಆದ್ದರಿಂದ ಈಗಿಂದೀಗಲೇ ನೀರನ್ನು ಸಂರಕ್ಷಿಸುವುದು ಅಗತ್ಯ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ವಯಸ್ಕರ ಶಿಕ್ಷಣಾಧಿಕಾರಿ ಟಿ. ಸುಧಾಕರ್ ಮಾತನಾಡಿ, ನೀರನ್ನು ಯಾವ ರೀತಿ ಭೂಮಿಯಲ್ಲಿ ಡಿಪಾಸಿಟ್ ಆಗಿ ಇಡಬಹುದು ಎಂದು ಪಾತ್ಯಕ್ಷಿತೆಯ ಮೂಲಕ ತೋರಿಸಿಕೊಟ್ಟರು. ಜನಾರ್ದನ ಬೆಟ್ಟಂಪಾಡಿರವರು ಹೆಚ್ಚಿನ ಖರ್ಚಿಲ್ಲದೆ ಸರಳವಾಗಿ ನೀರನ್ನು ಭೂಮಿಗೆ ಇಂಗಿಸುವ ಕಾರ‍್ಯಾಗಾರ ತೋರಿಸಿಕೊಟ್ಟರು.
ರೈತ ಮಿತ್ರ ಕೂಟದ ಅಧ್ಯಕ್ಷ ದಿವಾಕರ ರೈ ಕೆರೆಮೂಲೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಉಪಾಧ್ಯಕ್ಷರುಗಳಾದ ಅಶೋಕ ಒರ್ಕೊಂಬು, ತಿಮ್ಮಪ್ಪ ಕೊಳತ್ತು, ಸಿ.ಎ. ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ತಿಮ್ಮಪ್ಪಯ್ಯ, ಗ್ರಾ.ಪಂ. ಸದಸ್ಯೆ ಲೀಲಾವತಿ ಹೂಗುಚ್ಛ ನೀಡಿ ಅತಿಥಿಗಳನ್ನು ಗೌರವಿಸಿದರು. ರೈತ ಕೂಟದ ಜತೆ ಕಾರ್ಯದರ್ಶಿ ಪ್ರಭಾಕರ ರೈ ಕೊರಂಬಡ್ಕ ಕಾರ್ಯಕ್ರಮದ ನಿರ್ವಹಣೆ ನಡೆಸಿದರು. ಗ್ರಾ.ಪಂ. ಸದಸ್ಯ ಪವನ್ ಡಿ.ಜೆ. ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.