Breaking News

ಎಸ್ ಕೆ ಎಸ್ ಎಸ್ ಎಫ್ ಇಬಾದ್ ಪುತ್ತೂರು ವಲಯ ಸಮಿತಿ ಅಸ್ತಿತ್ವಕ್ಕೆ- ಚೇರ್‌ಮ್ಯಾನ್: ಅಬ್ದುಲ್ ಬಶೀರ್ ದಾರಿಮಿ ಕಲ್ಲೇಗ, ಕನ್ವೀನರ್: ಅಬ್ದುಲ್ ರಝಾಕ್ ಅಝ್ಹರಿ ಸವಣೂರು

Puttur_Advt_NewsUnder_1
Puttur_Advt_NewsUnder_1

skssfಪುತ್ತೂರು: ಎಸ್.ಕೆ.ಎಸ್.ಎಸ್.ಎಫ್ ಇಬಾದ್ ಪುತ್ತೂರು ವಲಯ ಸಮಿತಿ ರೂಪೀಕರಣ ಸಭೆಯು ಪುತ್ತೂರು ಬದ್ರಿಯಾ ಮದ್ರಸ ಸಭಾಂಗಣದಲ್ಲಿ ನಡೆಯಿತು. ಪುತ್ತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಆಸಿಫ್ ಅಝ್ಹರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಎಸ್.ಕೆ.ಎಸ್.ಎಸ್.ಎಫ್ ವಲಯಾಧ್ಯಕ್ಷ ತಾಜುದ್ದೀನ್ ರಹ್ಮಾನಿ ಉದ್ಘಾಟಿಸಿದರು. ಇಬಾದ್ ಜಿಲ್ಲಾಧ್ಯಕ್ಷ ಹಸನ್ ಅರ್ಶದಿ ಬೆಳ್ಳಾರೆ ವಿಷಯ ಮಂಡಿಸಿದರು
ಬದ್ರಿಯಾ ಮಸೀದಿ ಖತೀಬ್ ಎಸ್.ಬಿ ಮುಹಮ್ಮದ್ ದಾರಿಮಿ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಸಿದ್ದೀಕ್ ಜಲಾಲಿ ಕೂರ್ನಡ್ಕ, ಸಿರಾಜುದ್ದೀನ್ ಫೈಝಿ ಬಪ್ಪಳಿಗೆ ಸಂದರ್ಭೋಚಿತವಾಗಿ ಮಾತನಾಡಿದರು. ಬಳಿಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಚೇರ್‌ಮ್ಯಾನ್ ಅಬ್ದುಲ್ ಬಶೀರ್ ದಾರಿಮಿ ಕಲ್ಲೇಗ, ವೈಸ್ ಚಯರ್ಮ್ಯಾನ್‌ಗಳಾಗಿ ಆಸೀಫ್ ಅಝ್ಹರಿ ಇರ್ದೆ, ಅಬ್ಬಾಸ್ ದಾರಿಮಿ ಘಟ್ಟಮನೆ, ಕನ್ವೀನರಾಗಿ ಅಬ್ದುಲ್ ರಝಾಕ್ ಅಝ್ಹರಿ ಸವಣೂರು, ವೈಸ್ ಕನ್ವೀನರುಗಳಾಗಿ ಇಬ್ರಾಹಿಂ ಕೌಸರಿ ಮುಂಡೋಳೆ, ಅಬ್ದುಲ್ ರಶೀದ್ ಫೈಝಿ ಪೋಲ್ಯರವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ವಲಯ ಉಪಾಧ್ಯಕ್ಷ ಮನ್ಸೂರ್ ಮೌಲವಿ ಅಮ್ಚಿನಡ್ಕ, ಸಂಘಟನಾ ಕಾರ್ಯದರ್ಶಿ ಅಶ್ರಫ್ ಮುಕ್ವೆ, ಜೊತೆ ಕಾರ್ಯದರ್ಶಿ ನಾಸಿರ್ ದಾರಿಮಿ ಉಪಸ್ಥಿತರಿದ್ದರು.
ಎಸ್.ಕೆ.ಎಸ್.ಎಸ್.ಎಫ್ ಪುತ್ತೂರು ವಲಯ ಜೊತೆ ಕಾರ್ಯದರ್ಶಿ ಜಾಬಿರ್ ಫೈಝಿ ಬನಾರಿ ಸ್ವಾಗತಿಸಿ, ಅಬ್ದುಲ್ ರಝಾಕ್ ಅಝ್ಹರಿ ವಂದಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.