Breaking News

ಒಡೆದ ನೀರಿನ ಪೈಪ್ ದುರಸ್ತಿಗೊಳಿಸಿದ ನಗರಸಭೆ

Puttur_Advt_NewsUnder_1
Puttur_Advt_NewsUnder_1

7ಪುತ್ತೂರು: ನಗರದ ಮುಖ್ಯರಸ್ತೆಯಿಂದ ಬಸ್ಸು ನಿಲ್ದಾಣಕ್ಕೆ ತೆರಳುವ ಕಾಂಕ್ರೀಟ್ ರಸ್ತೆಯಲ್ಲಿ ಡಾ| ಶಿವರಾಮ ಕಾರಂತ ಪ್ರೌಢಶಾಲೆಯ ಬಳಿ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಕಾಂಕ್ರೀಟ್ ರಸ್ತೆ ಮೇಲೆ ಹರಿದು ನೀರು ಪೋಲಾಗುತ್ತಿರುವ ಬಗ್ಗೆ ಸುದ್ದಿ ಪತ್ರಿಕೆಯಲ್ಲಿ ಱಕಾಂಕ್ರಿಟ್ ರಸ್ತೆಯಲ್ಲಿ ಏನಿದು ಮಾಯೆ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿದ ನಗರಸಭೆಯು ಅ.21ರಂದು ಪೈಪ್‌ಲೈನ್ ದುರಸ್ತಿಗೊಳಿಸಿದೆ.
ಸುದ್ದಿ ಮಾಹಿತಿ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ವಾರ್ಡ್ ಭೇಟಿ ಕಾರ್ಯಕ್ರಮದ ಕುರಿತು ಮಾಹಿತಿ ಪಡೆಯಲು ನಗರಸಭೆಗೆ ತೆರಳಿದ್ದಾಗ ಪೌರಾಯುಕ್ತೆ ರೂಪಾ ಶೆಟ್ಟಿಯವರ ಗಮನಕ್ಕೂ ಇದನ್ನು ತರಲಾಗಿತ್ತು. ತಕ್ಷಣವೇ ಸ್ಪಂದಿಸಿದ ಅವರು ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ವೇಳೆಗೆ ಕುಡಿಯುವ ನೀರಿನ ಪೈಪ್ ಒಡೆದುಹೋಗಿರುವುದು ಅವರ ಗಮನಕ್ಕೆ ಬಂದಿದ್ದು, ಇದೀಗ ಅದನ್ನು ದುರಸ್ತಿಗೊಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.