Breaking News

ಅಖಿಲ ಭಾರತ ಅಂತರ್ ವಿವಿ ಈಜು ಸ್ಪರ್ಧೆ; ಫಿಲೋಮಿನಾದ ವೈಷ್ಣವ್ ಹೆಗ್ಡೆ, ಸ್ವೀಡಲ್ ಲೋಬೋ, ದೀಕ್ಷಾ ರಮೇಶ್ ಆಯ್ಕೆ

Puttur_Advt_NewsUnder_1
Puttur_Advt_NewsUnder_1

swimjmjing

ಪುತ್ತೂರು: ಅಕ್ಟೋಬರ್ 24ರಿಂದ 28ರ ತನಕ ಚಂಡೀಗಢದ ಪಂಜಾಬ್ ವಿವಿಯ ಆಶ್ರಯದಲ್ಲಿ ಜರಗಲಿರುವ ಅಖಿಲ ಭಾರತ ಅಂತರ್ ವಿವಿ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳಾದ, ದಕ್ಷಿಣ ಏಷ್ಯಾ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತ ಪ್ರಥಮ ಬಿ.ಕಾಂ ವಿಭಾಗದ ವೈಷ್ಣವ್ ಹೆಗ್ಡೆ, ದ್ವಿತೀಯ ಬಿ.ಕಾಂ ವಿಭಾಗದ ಸ್ವೀಡಲ್ ಲೋಬೊ ಮತ್ತು ಪ್ರಥಮ ಬಿಬಿಎ ವಿಭಾಗದ ದೀಕ್ಷಾ ರಮೇಶ್‌ರವರು ಮಂಗಳೂರು ವಿವಿ ತಂಡವನ್ನು ಪ್ರತಿನಿಧಿಸಲಿದ್ದಾರೆ.

ವೈಷ್ಣವ್ ಹೆಗ್ಡೆರವರು ಪರ್ಲಡ್ಕ ನಿವಾಸಿ ಡಾ.ಅಜಿತ್ ಹೆಗ್ಡೆ ಹಾಗೂ ಪ್ರತಿಮಾ ಹೆಗ್ಡೆಯವರ ಪುತ್ರ. ಸ್ವೀಡಲ್ ಲೋಬೋರವರು ಪಾಂಗ್ಲಾಯಿ ನಿವಾಸಿ ದಿಲೀಪ್ ಲೋಬೋ ಹಾಗೂ ವೀಣಾ ದಂಪತಿ ಪುತ್ರಿ. ದೀಕ್ಷಾ ರಮೇಶ್‌ರವರು ರಮೇಶ್ ಹಾಗೂ ಕ್ರಿಸ್ಟಬೆಲ್ಲಾ ದಂಪತಿ ಪುತ್ರಿ. ಮಂಗಳೂರು ವಿವಿ ಈಜು ತಂಡಕ್ಕೆ ಆಯ್ಕೆಯಾದ ಈಜುಪಟುಗಳಿಗೆ ಪುತ್ತೂರಿನ ಪರ್ಲಡ್ಕದ ಬಾಲವನ ಈಜು ಕೊಳದಲ್ಲಿ 15 ದಿನಗಳ ಈಜು ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಬಾಲವನದ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ವಸಂತ ಕುಮಾರ್ ಮತ್ತು ನಿರೂಪ್ ಜಿ ಆರ್ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.