ವಿಟ್ಲ: ಮನೆ ಬಿಟ್ಟು ಹೋಗಿದ್ದ ಬಾಲಕಿ ಗರ್ಭಿಣಿಯಾಗಿ ವಾಪಸ್

Puttur_Advt_NewsUnder_1
Puttur_Advt_NewsUnder_1

ಬಾಲಕನ ವಿರುದ್ಧ ಪೋಕ್ಸೋ ಪ್ರಕರಣ
ವಿಟ್ಲ: ಅಪ್ರಾಪ್ತ ಬಾಲಕಿ- ಬಾಲಕಿ ಕೆಲವು ತಿಂಗಳ ಹಿಂದೆ ಮನೆಬಿಟ್ಟು ಹೋಗಿದ್ದು, ಬಾಲಕಿ ಗರ್ಭಿಣಿಯಾಗಿ ಹಿಂದಿರುಗಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ವಿಟ್ಲ ಠಾಣೆಯಲ್ಲಿ ಬಾಲಕನ ವಿರುದ್ಧ ಪೊಕ್ಸೋ ಪ್ರಕರಣ ದಾಖಲಾಗಿದೆ.
ವಿಟ್ಲ ಠಾಣಾ ವ್ಯಾಪ್ತಿಯ 14 ವರ್ಷದ ಬಾಲಕಿ ಹಾಗೂ ಪುತ್ತೂರು ಠಾಣಾ ವ್ಯಾಪ್ತಿಯ 16 ವರ್ಷದ ಬಾಲಕ ಕೆಲವು ಸಮಯದ ಹಿಂದೆ ಮನೆ ಬಿಟ್ಟು ಹೋಗಿದ್ದರು. ಇಬ್ಬರೂ ಸಂಬಂಧಿಗಳಾಗಿದ್ದರಿಂದ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಲು ಮುಂದಾಗಿರಲಿಲ್ಲ. ಕೆಲವು ದಿನಗಳ ಹಿಂದೆ ಇಬ್ಬರು ಮನೆಗೆ ಹಿಂದಿರುಗಿದ್ದು, ಬಾಲಕಿಯ ತಾಯಿಯ ಅನುಮಾನದ ಮೇರೆಗೆ ಮಂಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲು ತೆರಳಿದ್ದಾರೆ. ಮಗಳು 2 ತಿಂಗಳ ಗರ್ಭಿಣಿಯಾದ್ದರಿಂದ ಆಸ್ಪತ್ರೆಯಿಂದ ಠಾಣೆಗೆ ಮಾಹಿತಿ ಬಂದು ವಿಚಾರಣೆ ನಡೆಸಿ ಬಾಲಕನ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.