‘ಸ್ವಾರ್ಥ ಬಿಟ್ಟು ಇಚ್ಛಾಶಕ್ತಿ ಹೊಂದಿದರೆ ಗ್ರಾಮದ ಸಮಗ್ರ ಅಭಿವೃದ್ಧಿ ಸಾಧ್ಯ’; ಬಿಳಿಯೂರು ಗ್ರಾಮ ವಿಕಾಸ ಯೋಜನೆ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ

Puttur_Advt_NewsUnder_1
Puttur_Advt_NewsUnder_1

biliyuru

ಉಪ್ಪಿನಂಗಡಿ: ಗ್ರಾಮಸ್ಥರು ತನ್ನ ಸ್ವಾರ್ಥವನ್ನು ಬಿಟ್ಟು, ಒಟ್ಟು ಅಭಿವೃದ್ಧಿಯ ಬಗ್ಗೆ ಇಚ್ಛಾಶಕ್ತಿ ಹೊಂದಿದರೆ ಗ್ರಾಮದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕಿ, ರಾಜ್ಯ ಸಂಸದೀಯ ಕಾರ‍್ಯದರ್ಶಿ ಶ್ರೀಮತಿ ಶಕುಂತಳಾ ಶೆಟ್ಟಿ ಹೇಳಿದರು.

ಅವರು ಅ. 21ರಂದು ಪೆರ್ನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಯೂರು ಗ್ರಾಮಕ್ಕೆ 2015-16ನೇ ಸಾಲಿನಲ್ಲಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಮಂಜೂರು ಆಗಿರುವ 75 ಲಕ್ಷ ಅನುದಾನದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಗ್ರಾಮದಲ್ಲಿ ನಡೆಯುವ ಯಾವುದೇ ಕಾಮಗಾರಿ ನನ್ನ ಮನೆ ಬಾಗಿಲ ತನಕ ಎನ್ನುವ ಸ್ವಾರ್ಥ ರಾಜಕೀಯ ಭಾವನೆಯನ್ನು ಬಿಟ್ಟು, ಅದು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಆಗಬೇಕು ಎನ್ನುವ ಪರಿಕಲ್ಪನೆ ಗ್ರಾಮಸ್ಥರಲ್ಲಿ ಮೂಡಿ ಬರಬೇಕು, ಎಲ್ಲರೂ ಒಂದೇ ರೀತಿಯ ಸಹಕಾರ ನೀಡಬೇಕು ಆಗ ಮಾತ್ರ ಗ್ರಾಮ ಸಮಗ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಈ ಭಾಗದ ಜನರ ಅಗತ್ಯ ಬೇಡಿಕೆಗಳಲ್ಲಿ ಒಂದಾಗಿರುವ ಪೆರ್ನೆ-ದೇನಡ್ಕ ದೇವಸ್ಥಾನ ರಸ್ತೆ ಅಭಿವೃದ್ಧಿಗೆ ಕನಿಷ್ಠ 6 ಕೋಟಿ ಬೇಕಾಗುತ್ತದೆ, ಇಷ್ಟೊಂದು ದೊಡ್ಡ ಮೊತ್ತ ಒಮ್ಮೆಗೆ ಅಸಾಧ್ಯ ಆದರೂ  ಈಗಾಗಲೇ ಸರ್ಕಾರಕ್ಕೆ ಬರೆದಿದ್ದು, ಯಾವುದಾದರೂ ವಿಶೇಷ ಅನುದಾನ ಕ್ರೋಢೀಕರಿಸಿಕೊಳ್ಳಲು ಪ್ರಯತ್ನಿಸುವುದಾಗಿ ಹೇಳಿದ ಅವರು ಈ ಭಾಗದಲ್ಲಿ ಸರ್ಕಾರಿ ನಿವೇಶನ ಇದ್ದಲ್ಲಿ ಗುರುತಿಸಿ ಸೂಚಿಸಿದಲ್ಲಿ ಅಂಬೇಡ್ಕರ್ ಭವನ ಮಂಜೂರಾತಿಗೆ ಪ್ರಯತ್ನಿಸುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಮತಿ ಕಮಲಾಕ್ಷಿ ಮಾತನಾಡಿ ಬಿಳಿಯೂರು ಗ್ರಾಮ ಮೂಲ ಸೌಕರ್ಯ ವ್ಯವಸ್ಥೆಯಿಂದ ವಂಚಿತವಾಗಿತ್ತು, ಇದೀಗ ಗ್ರಾಮ ವಿಕಾಸ ಯೋಜನೆ ಮೂಲಕ ಅಭಿವೃದ್ಧಿ ಆಗುತ್ತಿರುವುದು ಸಂತಸದ ವಿಚಾರವಾಗಿದ್ದು, ಈ ನಿಟ್ಟಿನಲ್ಲಿ ಶಾಸಕರನ್ನು ಅಭಿನಂದಿಸುವುದಾಗಿ ಹೇಳಿದರು. ಗ್ರಾಮಸ್ಥರು ಯೋಜನೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಅದಕ್ಕೆ ಪೂರಕ ಸಹಕಾರ ನೀಡಬೇಕು ಎಂದವರು ಹೇಳಿದರು.

ಪೆರ್ನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಭಾರತಿ ಅಧ್ಯಕ್ಷತೆ ವಹಿಸಿ ಮಾತನಾಡಿ ಬಿಳಿಯೂರು ಗ್ರಾಮಕ್ಕೆ ಬಂದಿರುವ ಈ ಯೋಜನೆ ಬಗ್ಗೆ ಹೆಮ್ಮೆ ಆಗುತ್ತಿದ್ದು, ಗ್ರಾಮಸ್ಥರು ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡುವುದರೊಂದಿಗೆ ಊರಿನ ಅಭಿವೃದ್ಧಿಗೆ ತಾವುಗಳೂ ಕಾರಣೀಭೂತರಾಗಬೇಕು ಎಂದರಲ್ಲದೆ, ಪೆರ್ನೆ ಗ್ರಾಮದಲ್ಲಿ ಬಹಳಷ್ಟು ಸಮಸ್ಯೆಗಳು ಇದ್ದು, ಮುಂದಿನ ಯೋಜನೆಗಳಲ್ಲಿ ಪೆರ್ನೆ ಗ್ರಾಮಕ್ಕೂ ಅನುದಾನ ನೀಡುವಂತೆ ಅವರು ಶಾಸಕರನ್ನು ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ರಘು ಮಲ್ಲಡ್ಕ, ಪೆರ್ನೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಬ್ದುಲ್ಲ ಶಾಫಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಐರಿನ್ ಮಸ್ಕರೇನ್ಹಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಮುರಳೀಧರ ಶೆಟ್ಟಿ, ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮಾನಂದ ವಿಟ್ಲ, ಪೆರ್ನೆ ಸಿ.ಎ. ಬೇಂಕ್ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ, ನಿರ್ದೇಶಕರಾದ ಗೋಪಾಲ ಶೆಟ್ಟಿ, ರೇವತಿ, ಪಿಡಬ್ಲ್ಯೂಡಿ ಗುತ್ತಿಗೆದಾರ ಅಬೂಬಕ್ಕರ್ ಕೊಳ್ಳಜಾಲ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಬ್ದುಲ್ ರಜಾಕ್, ಜಯಂತ, ಮಾಜಿ ಸದಸ್ಯರಾದ ಸುಂದರ, ಸ್ಥಳೀಯ ಪ್ರಮುಖರಾದ ಮಿತ್ರದಾಸ ರೈ, ರಾಮಪ್ಪ ಗೌಡ ಕಳೆಂಜ, ಚೆನ್ನಕೇಶವ, ಪುಸ್ಕರ ಪೂಜಾರಿ, ಚಂದಪ್ಪ ಪೂಜಾರಿ, ಉಮೇಶ್ ಬಾಕಿಮಾರು, ಹನೀಫ್ ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಭಾರತಿ ಸ್ವಾಗತಿಸಿ, ಪಿಡಿಓ ಶ್ರೀಮತಿ ಕವಿತಾ ವಂದಿಸಿದರು. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀಮತಿ ಯಶೋಧ, ಶ್ರೀಮತಿ ಗೀತಾ, ಶ್ರೀಮತಿ ಸುಮತಿ, ಶ್ರೀಮತಿ ಗಿರಿಜಾ, ನವೀನ್ ಕುಮಾರ್, ಶ್ರೀಮತಿ ಲಲಿತಾ, ಸುನಿಲ್ ಅತಿಥಿಗಳಿಗೆ ಹೂ ಗುಚ್ಛ ನೀಡಿ ಅಭಿನಂದಿಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉಮಾನಾಥ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.