ಪುತ್ತೂರು ಉಪಖಜಾನೆಯ ಖಾಲಿಯಿರುವ ಹುದ್ದೆಗಳ ಭರ್ತಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಮನವಿ

Puttur_Advt_NewsUnder_1
Puttur_Advt_NewsUnder_1

12ಡಿಸೆಂಬರ್‌ನೊಳಗೆ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು: ಜಂಟಿ ನಿರ್ದೇಶಕ ಹನುಮಂತಪ್ಪ ಭರವಸೆ

ಖಾಲಿಯಿರುವ ಹುದ್ದೆಗಳು *  ಉಪನಿರ್ದೇಶಕರು-1 *  ದ್ವಿತೀಯ ದರ್ಜೆ ಸಹಾಯಕ-3 *  ಪ್ರಥಮ ದರ್ಜೆ ಸಹಾಯಕ-1
ಪುತ್ತೂರು: ಇಲ್ಲಿನ ಉಪಖಜಾನೆಯಲ್ಲಿ ಉಪನಿರ್ದೇಶಕರ ಹುದ್ದೆ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇದ್ದು ಸರಕಾರಿ ನೌಕರರ ವೇತನ ಮತ್ತು ಇತರ ಸೌಲಭ್ಯಗಳಿಗೆ ತೊಂದರೆಯಾಗುತ್ತಿರುವ ಕುರಿತು ಮತ್ತು ಈ ಅವ್ಯವಸ್ಥೆಯನ್ನು ಕೂಡಲೇ ನಿವಾರಿಸುವಂತೆ ಕೋರಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ಶಾಖೆಯ ಪದಾಧಿಕಾರಿಗಳು ಬೆಂಗಳೂರಿಗೆ ತೆರಳಿ ರಾಜ್ಯ ಖಜಾನೆ ನಿರ್ದೇಶಕರ ಕಚೇರಿಯಲ್ಲಿ ಮನವಿ ಸಲ್ಲಿಸಲಾಗಿದೆ.
ಪುತ್ತೂರು ಉಪಖಜಾನೆಯಲ್ಲಿ ಉಪನಿರ್ದೇಶಕರ ಹುದ್ದೆ ಸೇರಿದಂತೆ ಮೂರು ದ್ವಿತೀಯ ದರ್ಜೆ ಸಹಾಯಕ, ಒಂದು ಪ್ರಥಮ ದರ್ಜೆ ಸಹಾಯಕ ಹುದ್ದೆಗಳು ಖಾಲಿ ಇದೆ. ಪ್ರಸ್ತುತ ಪುತ್ತೂರು ಉಪಖಜಾನೆಯಲ್ಲಿ ಇಬ್ಬರು ಪ್ರಥಮ ದರ್ಜೆ ಸಹಾಯಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು ಸರಕಾರಿ ನೌಕರರ ವೇತನ ಹಾಗೂ ಇನ್ನಿತರ ಬಿಲ್ಲುಗಳು, ಪಿಂಚಣಿ ಸೌಲಭ್ಯ, ಇತರ ನಾಗರಿಕರ ಅಭಿವೃದ್ಧಿ ಕಾಮಗಾರಿ ಬಿಲ್ಲುಗಳು ಸೇರಿದಂತೆ ಕೆಲಸ ಕಾರ್ಯ ನಿರ್ವಹಿಸಲು ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು ಈ ಕೊರತೆಯನ್ನು ತಕ್ಷಣ ನಿವಾರಿಸುವಂತೆ ರಾಜ್ಯ ಖಜಾನೆ ನಿರ್ದೇಶಕರಿಗೆ ಮನವಿ ಮಾಡಲಾಯಿತು. ಮನವಿ ಸ್ವೀಕರಿಸಿದ ಜಂಟಿ ನಿರ್ದೇಶಕರಾದ ಹನುಮಂತಪ್ಪರವರು ಮಾತನಾಡಿ, ನವೆಂಬರ್ ಅಥವಾ ಡಿಸೆಂಬರ್ ತಿಂಗಳೊಳಗೆ ಕೆಪಿಎಸ್‌ಸಿಯಿಂದ ಖಜಾನೆ ಇಲಾಖೆಗೆ ಸುಮಾರು 200 ಹೊಸ ಆಭ್ಯರ್ಥಿಗಳ ನೇಮಕಾತಿ ಆದೇಶಗಳು ಜಾರಿಯಾಗಲಿದೆ. ಈ ಸಂದರ್ಭದಲ್ಲಿ ಪುತ್ತೂರು ಉಪಖಜಾನೆಗೆ ಹೆಚ್ಚಿನ ಗಮನ ನೀಡಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ. ಮನವಿ ನೀಡಲು ತೆರಳಿರುವ ನಿಯೋಗದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ಶಾಖೆಯ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಉಪಾಧ್ಯಕ್ಷ ಕೃಷ್ಣಪ್ರಸಾದ್ ಭಂಡಾರಿ, ಗೌರವಾಧ್ಯಕ್ಷ ಅಬೂಬಕ್ಕರ್, ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ಮಾಮಚ್ಚನ್ ಎಂ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನೂತನ ಕಟ್ಟಡ ಸಮಿತಿಯ ಕೋಶಾಧಿಕಾರಿ ಪಿ.ಸುರೇಶ್, ಜೊತೆ ಕಾರ್ಯದರ್ಶಿ ಪುರುಷೋತ್ತಮ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.