Breaking News

ಫಿಲೋಮಿನಾದ ಸಂಸ್ಕೃತ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಈಶ್ವರ ಶಾಸ್ತ್ರಿಯವರಿಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1

philomina

ಪುತ್ತೂರು: ದರ್ಬೆ ಸಂತ ಫಿಲೋಮಿನಾ ಕಾಲೇಜ್‌ನ ಸ್ಟಾಫ್ ಎಸೋಸಿಯೇಶನ್‌ನ ವತಿಯಿಂದ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿದ್ದ, ವೃತ್ತಿಯಲ್ಲಿ 34 ವರ್ಷಗಳ ಸೇವೆಗೈದು ಕಳೆದ ಆಗಸ್ಟ್‌ನಲ್ಲಿ ವಯೋನಿವೃತ್ತಿ ಹೊಂದಿದ ಪ್ರೊ.ದಂಬೆ ಈಶ್ವರ ಶಾಸ್ತ್ರಿರವರಿಗೆ ಬೀಳ್ಕೊಡುವ ಕಾರ್ಯಕ್ರಮ ಅ.21 ರಂದು ಕಾಲೇಜಿನ ಸ್ಪಂದನಾ ಸಭಾಂಗಣದಲ್ಲಿ ನಡೆಯಿತು.

ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ನಿವೃತ್ತಿಗೊಂಡ ಪ್ರೊ.ಈಶ್ವರ ಶಾಸ್ತ್ರಿರವರನ್ನು ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಟ್ಟರು. ಬಳಿಕ ಮಾತನಾಡಿದ ವಂ|ಆಲ್ಫ್ರೆಡ್‌ರವರು, ವೃತ್ತಿಯಲ್ಲಿ ನಿವೃತ್ತಿಯೆಂಬುದು ಸಾಮಾನ್ಯ. ವೃತ್ತಿ ಸಂದರ್ಭದಲ್ಲಿ ತಾನು ಯಾವ ರೀತಿ ಸೇವೆಯನ್ನು ನೀಡಿದ್ದೇನೆ ಎಂಬುದು ಮುಖ್ಯವಾಗುತ್ತದೆ. ಬೋಧನೆಯೆಂಬುದು ಉದಾತ್ತ ವೃತ್ತಿಯಾಗಿದ್ದು ಶಾಸ್ತ್ರಿರವರು ಸುದೀರ್ಘ ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ದುಡಿದು ಕಾಲೇಜ್‌ನ ಉನ್ನತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿ ನಿವೃತ್ತ ಜೀವನಕ್ಕೆ ಶುಭಹಾರೈಸಿದರು. ಪದವಿ ಕಾಲೇಜ್‌ನ ಪ್ರಾಂಶುಪಾಲ ಪ್ರೊ.ಲಿಯೋ ನೊರೊನ್ಹಾರವರು ಮಾತನಾಡಿ, ಶಾಸ್ತ್ರಿರವರೊಬ್ಬ ಕಲಾವಿದರಾಗಿದ್ದು ಪರಸ್ಪರ ವಿಧೇಯತೆಯ ವ್ಯಕ್ತಿತ್ವವುಳ್ಳವರಾಗಿದ್ದಾರೆ. ಮುಕ್ತ ಮನಸ್ಸಿನ ಚಿಂತನೆಯುಳ್ಳ ಅವರು ಜೀವನದಲ್ಲಿ ಯಾರೊಂದಿಗೂ ಕೋಪದಿಂದ ನಡೆದವರಲ್ಲ ಎಂದರು. ಪದವಿಪೂರ್ವ ಕಾಲೇಜ್‌ನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಮಾತನಾಡಿ, ಶಾಸ್ತ್ರಿರವರಲ್ಲಿ ಎಲ್ಲರನ್ನೂ ಮಾತನಾಡಿಸುವ ಉದಾತ್ತ ಗುಣವಿತ್ತು ಎಂದರು. ಸನ್ಮಾನಿತಗೊಂಡ ಪ್ರೊ.ಶಾಸ್ತ್ರಿರವರ ಪತ್ನಿ ಉಮಾ ಶಾಸ್ತ್ರಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕ ಪ್ರಶಾಂತ್ ರೈರವರು ಶಾಸ್ತ್ರಿರವರ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಪ್ರಾಧ್ಯಾಪಕ ಗಣೇಶ್ ಭಟ್‌ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾಲೇಜ್‌ನ ಉಪಪ್ರಾಂಶುಪಾಲ ಪ್ರೊ.ವಿಷ್ಣು ಭಟ್ ಸಹಿತ ಪ್ರಾಧ್ಯಾಪಕರು, ಉಪನ್ಯಾಸಕರು, ಆಡಳಿತ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಶಾಸ್ತ್ರಿರವರು ಭಾಷಾ ಶಾಸ್ತ್ರದಲ್ಲಿ ಬಹಳ ನೈಪುಣ್ಯತೆಯನ್ನು    ಸಾಧಿಸಿದವರು. ಸಂಸ್ಕೃತ ಭಾಷಾ ಉಪನ್ಯಾಸಕರಾಗಿ ಉತ್ತಮ ಬೋಧನಾ ಕೌಶಲ್ಯತೆಯನ್ನು ಅವರು ಹೊಂದಿದ್ದು ಅಪಾರ ಜ್ಞಾನ ಸಂಪತ್ತು ಮತ್ತು ಬುದ್ಧಿವಂತಿಕೆ ಅವರಲ್ಲಿತ್ತು. ಉಪನ್ಯಾಸಕ ವೃತ್ತಿಯ ಜೊತೆಗೆ ತಾನು ಇಷ್ಟಪಡುವ ಯಕ್ಷಗಾನದಲ್ಲೂ ಪ್ರಾವೀಣ್ಯತೆಯನ್ನು ತೋರಿದವರು ಶಾಸ್ತ್ರಿರವರು.

-ಪ್ರೊ.ಗಣಪತಿ, ಮುಖ್ಯಸ್ಥರು,

ಅರ್ಥಶಾಸ್ತ್ರ ವಿಭಾಗ, ಫಿಲೋಮಿನಾ ಕಾಲೇಜು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.