ಅನಾಥವಾಗಿ ಬಿದ್ದಿದ್ದ ಪರ್ಸ್ ವಾರೀಸುದಾರರ ಕೈಗೆ; ವಾಟ್ಸ್‌ಪ್ ಜಾಲತಾಣದಿಂದ ಶೀಘ್ರ ಕೈಸೇರಿದ ಪರ್ಸ್

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಅನಾಥವಾಗಿ ಬೈಕ್ ಮೇಲಿದ್ದ ಹಣವಿದ್ದ ಪರ್ಸೊಂದು ವಾಟ್ಸಪ್ ಸಂದೇಶದ 45ನೇ ನಿಮಿಷದಲ್ಲಿ ಅದರ ಮೂಲ ವಾರೀಸುದಾರರ ಕೈಸೇರುವಂತಾದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.

ಇಲ್ಲಿನ ಶಾಂಭವಿ ಎಲೆಕ್ಟ್ರಿಕಲ್ ಅಂಗಡಿಯ ಮಾಲಕ ಸುರೇಶ್ ಶೆಟ್ಟಿ ಪುತ್ತೂರಿನ ಬಂಟರ ಭವನದಲ್ಲಿ ಆಯೋಜಿಸಿದ್ದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗುವ ವೇಳೆ ನಿಲ್ಲಿಸಿದ್ದ ಅವರ ಬೈಕ್ ಮೇಲೆ ಲೇಡಿಸ್ ಪರ್ಸೊಂದನ್ನು ಇಟ್ಟಿರುವುದು ಕಂಡು ಬಂದಿದೆ. ತುಂಬಾ ಹಣವಿರುವ ಪರ್ಸ್ ಅನ್ನು ಬೈಕಿನ ಮೇಲೆ ಯಾರು ಇಟ್ಟಿರಬಹುದೆಂದು ಗಲಿಬಿಲಿಗೊಂಡ ಸುರೇಶ್ ಶೆಟ್ಟಿ, ಸಮೀಪದಲ್ಲಿದ್ದವರೆಲ್ಲರನ್ನೂ ವಿಚಾರಿಸಿದರೂ ಪರ್ಸ್‌ನ ವಾರೀಸುದಾರರು ಪತ್ತೆಯಾಗಿರಲಿಲ್ಲ. ಬಳಿಕ ಪರ್ಸ್‌ನೊಂದಿಗೆ ಉಪ್ಪಿನಂಗಡಿಗೆ ಬಂದ ಅವರು, ಈ ಬಗ್ಗೆ ಉಪ್ಪಿನಂಗಡಿಯ ಪತ್ರಿಕಾ ವರದಿಗಾರರೊಬ್ಬರಿಗೆ ತಿಳಿಸಿದ್ದು, ಪರ್ಸ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಹಣ ಹಾಗೂ ಮಗುವೊಂದರ ಪೋಟೋ ಇರುವುದು ಬಿಟ್ಟರೆ, ಬೇರ‍್ಯಾವುದೇ ವಿಳಾಸ ಇರಲಿಲ್ಲ. ಬಳಿಕ ಪತ್ರಿಕಾ ವರದಿಗಾರರು  ವಾಟ್ಸಪ್ ಜಾಲ ತಾಣಗಳಲ್ಲಿ ಪರ್ಸ್ ದೊರೆತ ಮಾಹಿತಿಯನ್ನು ಹರಿಯಬಿಡುತ್ತಾರಲ್ಲದೇ, ಆ ಮಗುವಿನ ಭಾವಚಿತ್ರವನ್ನು ಕಳುಹಿಸುತ್ತಾರೆ.ಕೊನೆಗೆ ಪೋಟೋದಲ್ಲಿದ್ದ ಮಗುವಿನ ಸಮವಸ್ತ್ರದ ಆಧಾರದಲ್ಲಿ ಮಗುವಿನ ಶಾಲೆ ಯಾವುದೆನ್ನುವುದು ತಿಳಿದು, ಶಾಲೆಯವರಲ್ಲಿ ವಿಚಾರಿಸಿದಾಗ ಮಗುವಿನ ವಿಳಾಸ ತಿಳಿಯಿತಲ್ಲದೆ, ಪರ್ಸ್‌ನ ವಾರೀಸುದಾರರು ಪತ್ತೆಯಾಗುವಂತಾಯಿತು.

ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿ ಎಂಬಲ್ಲಿನ ಬಾಲಕೃಷ್ಣ ಶೆಟ್ಟಿ ಎಂಬವರ ಮನೆಯವರ ಪರ್ಸ್ ಇದಾಗಿತ್ತು. ಮದುವೆ ಹಾಲ್‌ಗೆ ಪ್ರವೇಶಿಸುವ ಕ್ಷಣದಲ್ಲಿ ತಲೆಕೂದಲನ್ನು ಸರಿಪಡಿಸಲೆಂದು ಕೈಯಲ್ಲಿದ್ದ ಪರ್ಸ್‌ನ್ನು ಅಲ್ಲೇ ಇದ್ದ ಬೈಕ್ ಮೇಲಿರಿಸಿ ಬಳಿಕ ಮರೆತು ಮದುವೆ ಹಾಲ್‌ಗೆ ಹೋಗಿರುವುದೇ ಈ ಅವಾಂತರಗಳಿಗೆ ಕಾರಣವಾಗಿತ್ತು. ತನ್ನದಲ್ಲದ ಸೊತ್ತನ್ನು ವಾರೀಸುದಾರರಿಗೆ ತಲುಪಿಸಿದ ಶಾಂಭವಿ ಇಲೆಕ್ಟ್ರಿಕಲ್ಸ್ ಮಾಲಕ ಸುರೇಶ್ ಶೆಟ್ಟಿಯವರ ಪ್ರಾಮಾಣಿಕತೆಗೆ ಶ್ಲಾಘನೆ ವ್ಯಕ್ತವಾಗಿದೆಯಲ್ಲದೆ, ೪೫ ನಿಮಿಷಗಳಲ್ಲೇ ಪರ್ಸ್‌ನ ಮೂಲ ವಾರೀಸುದಾರರು ಪತ್ತೆ ಹಚ್ಚುವಂತಾಗಲು ವಾಟ್ಸಫ್ ಕೊಡುಗೆಯೂ ಅಪಾರವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.