ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ತುಳು ತೇರಿಗೆ ಚಾಲನೆ

Puttur_Advt_NewsUnder_1
Puttur_Advt_NewsUnder_1

manila

ವಿಟ್ಲ: ತುಳು ಭಾಷಾಭಿಮಾನ ಮೂಡಿಸುವ ಜತೆಗೆ ತುಳುನಾಡಿನ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಪ್ರತಿಯೊಬ್ಬರಿಂದ ನಡೆಯಬೇಕು. ತುಳು ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸಲು ಬೇಕಾದ ಕೆಲಸ ಕಾರ್ಯ ಜಾಗತಿಕ ಮಟ್ಟದಲ್ಲಿ ಅಗಬೇಕಾಗಿದೆ ಎಂದು ಮಾಣಿಲ  ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು ಡಿ.೯ರಿಂದ ೧೩ರವರೆಗೆ ನಡೆಯುವ ವಿಶ್ವ ತುಳುವೆರೆ ಆಯನೊ ೨೦೧೬ರ ಪ್ರಚಾರಾರ್ಥ ೧೦೮ ದಿನಗಳ ಕಾಲ ನಡೆಯುವ ರಥ ಯಾತ್ರೆಯ ೫೫ನೇ ದಿನದ ರಥೆಯಾತ್ರೆಗೆ ಅ.೨೧ರಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಚಾಲನೆ ನೀಡಿ ಆಶೀರ್ವಚನ ನೀಡಿದರು. ಎಲ್ಲರನ್ನು ಸೆಳೆಯುವ ಭಾಷೆ ತುಳುವಾಗಿದ್ದು, ಭಾಷಾಭಿಮಾನಿಗಳನ್ನು ಒಂದೆಡೆ ಸೇರಿಸುವ ಕಾರ್ಯ ಸಮಾವೇಶದ ಮೂಲಕ ಸಾಧ್ಯ. ಯುವ ಶಕ್ತಿ ಸಾಮಾಜಿಕ ಜಾಲ ತಾಣಗಳಲ್ಲಿ ಕಾಲ ಹರಣ ಮಾಡುವ ಬದಲು ಸಂಸ್ಕೃತಿಯನ್ನು, ಭಾಷೆಯನ್ನು ಜಗತ್ತಿನೆತ್ತರಕ್ಕೆ ಕೊಂಡೊಯ್ಯುವ ಕಾರ್ಯ ಮಾಡಬೇಕು. ಈ ಮೂಲಕ ತುಳುವರ ಆತ್ಮ ವಿಶ್ವಾಸ, ಆತ್ಮ ಸ್ಥೈರ್ಯ ಹೆಚ್ಚಿಸುವಂತೆ ಮಾಡಬೇಕೆಂದು ತಿಳಿಸಿದರು. ವಿಟ್ಲ ಪಟ್ಟಣ ಪಂಚಾಯಿತಿ, ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಾಲಯ ಭಾಗಕ್ಕೆ ರಥ ಯಾತ್ರೆ ಸಾಗಿತು.

ರಥ ಯಾತ್ರೆಯ ಉಸ್ತುವಾರಿ ಶಂಕರ ಸ್ವಾಮಿ ಕೃಪ, ಶ್ರೀಧಾಮ ಮಹಾಲಕ್ಷ್ಮೀ ಕ್ಷೇತ್ರದ ಕಾರ್ಯನಿರ್ವಾಹಕ ವಿಠಲ ಶೆಟ್ಟಿ ಸುಣ್ಣಂಬಳ, ಶ್ರೀಧಾಮ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ, ಗೀತಾ, ರಥ ಯಾತ್ರೆ ಜಗನ್ನಾಥ, ಸೇಸು,  ಸದಾಶಿವ ರೈ, ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.