ತುಳು ಕಿರುಚಿತ್ರ ಲೋಕಕ್ಕೆ ಹೊಸ ಸೇರ್ಪಡೆ ಪ್ರಜ್ವಲ್ ರಾವ್‌ರವರ “ಫೇಸ್ಬುಕ್‌ಗೊಂಜಿ ಸೆಲ್ಫಿ”

Puttur_Advt_NewsUnder_1
Puttur_Advt_NewsUnder_1

1

ಸಿಶೇ ಕಜೆಮಾರ್

ಪುತ್ತೂರು: ಈಗೀಗ ಯುವಕರ ಚಿತ್ತ, ಚಿತ್ರ ನಿರ್ಮಾಣ, ನಿರ್ದೇಶನದತ್ತ ವಾಲುತ್ತಿರುವುದು ಕಂಡು ಬರುತ್ತಿದೆ. ಈಗಾಗಲೇ ಪುತ್ತೂರಿನ ಹಲವು ಮಂದಿ ಕಿರುಚಿತ್ರ ನಿರ್ಮಾಣ, ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಪ್ರಜ್ವಲ್ ರಾವ್. ಇಂದಿನ ಯುವ ಜನಾಂಗದ ಹೊಸ ಕ್ರೇಜ್ ಆಗಿರುವ ಸೆಲ್ಫೀ ಹುಚ್ಚನ್ನು ಇಟ್ಟುಕೊಂಡು ಒಂದು ಕಥೆ ಮಾಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅದೇ “ಫೇಸ್ಬುಕ್‌ಗೊಂಜಿ ಸೆಲ್ಫಿ”. ತಮ್ಮದೇ ಬ್ಯಾನರ್ ಆದ ಶ್ರೀ ವಿನಾಯಕ ಎಂಟರ್‌ಟೈನ್‌ಮೆಂಟ್‌ನಿಂದ ಮೂಡಿ ಬರುತ್ತಿರುವ ಇದೊಂದು ಪಕ್ಕಾ ಕಾಮಿಡಿ ಮತ್ತು ಒಂದಷ್ಟು ಸಂದೇಶವನ್ನು ನೀಡುವ ಕಿರುಚಿತ್ರವಾಗಿದೆ ಎನ್ನುತ್ತಾರೆ ಪ್ರಜ್ವಲ್. ಇವರು ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಶ್ರೀ ವಿನಾಯಕ ಜೆರಾಕ್ಸ್ ಸೆಂಟರ್‌ನ ಮಾಲಿಕ ವಸುಂಧರ್ ಮತ್ತು ಚಂಚಲಾಕ್ಷಿ ವಿ. ರಾವ್ ದಂಪತಿಯ ಪುತ್ರ. ಸಂಪೂರ್ಣ ಹೊಸ ತಂಡವನ್ನು ಕಟ್ಟಿಕೊಂಡು ಈ ಕಿರುಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಈ ಚಿತ್ರದ ನಿರ್ದೇಶಕ ಪ್ರಜ್ವಲ್ ರಾವ್ ಈ ಹಿಂದೆ “ಅನಿರೀಕ್ಷಿತ” ಮತ್ತು “ನಿಮ್ ಲವ್ ಸ್ಟೋರಿ” ಎಂಬ ಎರಡು ಕನ್ನಡ ಕಿರುಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದರಲ್ಲಿ ಅನಿರೀಕ್ಷಿತ ಶ್ರೀ ವಿನಾಯಕ ಎಂಟರ್‌ಟೈನ್‌ಮೆಂಟ್‌ನ ಮೊದಲ ಚಿತ್ರವಾಗಿತ್ತು. ಇದೀಗ “ಫೇಸ್ ಬುಕ್‌ಗೊಂಜಿ ಸೆಲ್ಫಿ” ಇದೇ ಬ್ಯಾನರ್‌ನ ಎರಡನೇ ಕೊಡುಗೆ. ಕೇವಲ ನಿರ್ದೇಶನ ಮಾತ್ರವಲ್ಲದೆ, ಪ್ರಜ್ವಲ್ ರಾವ್ ಈ ಕಿರುಚಿತ್ರದಲ್ಲಿ ಗೌರೀಶ್ ಜೊತೆಗೂಡಿ ಕ್ಯಾಮರ ವರ್ಕ್ ಕೂಡ ಮಾಡಿದ್ದಾರೆ. ಇದರ ಜೊತೆಗೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ವಿನೋದ್ ಕೃಷ್ಣ ಕಥೆ, ಮಿಲನ್ ಮರ್ಕಂಜ ಸಹ ನಿರ್ದೇಶನ ಮಾಡಿದ್ದಾರೆ. ಚಿತ್ರದ ತಾರಾ ಬಳಗದಲ್ಲಿ ದೀಕ್ಷಿತ್ ನೂಜಿ, ಮಿಶಾ ಪೂಜಾರಿ, ರಮ್ಯ ಪೂಜಾರಿ, ಐಲ್ ಐಶ್ವರ್ಯ ಮತ್ತು ಕಾರ್ತಿಕ್ ರೈ ಮುಖ್ಯ ಪಾತ್ರದಲ್ಲಿದ್ದಾರೆ. ಇನ್ನುಳಿದಂತೆ ಸಂತೋಷ್ ಆಚಾರ್ಯ, ಸಚಿನ್ ನಾಯಕ್, ಗೌರೀಶ್, ಮಿಲನ್ ಮರ್ಕಂಜ, ನಿತಿನ್ ಶೆಟ್ಟಿ, ವಿನೋದ್ ಪೂಜಾರಿ, ಹರೀಶ್, ಕಾವ್ಯ, ತಿಲಕ್ ಟಿ. ಶೆಟ್ಟಿ ಮತ್ತು ರಂಜಿತ್ ಶೆಟ್ಟಿ ಅಭಿನಯಿಸಿದ್ದಾರೆ. ಚಿತ್ರದ ಟ್ರ್ಯೆಲರ್ ಈಗಾಗಲೇ ಯ್ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದೆ ಮತ್ತು ವೀಕ್ಷಕರು ಅದನ್ನು ನಮ್ಮ ತುಳು ಫಿಲ್ಮ್ ಇಂಡಸ್ಟ್ರೀ (ಎನ್‌ಟಿಎಫ್‌ಐ) ಅವರ ಯ್ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದ್ದು ಆದಷ್ಟು ಬೇಗ ತೆರೆಕಾಣಲಿದೆ ಎಂದು ನಿರ್ದೇಶಕ ಪ್ರಜ್ವಲ್ ರಾವ್ ತಿಳಿಸಿದ್ದಾರೆ. ಆಲ್ ದಿ ಬೆಸ್ಟ್ ಪ್ರಜ್ವಲ್…

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.