ದರ್ಬೆ ಮುಹಮ್ಮದೀಯ ಮಸೀದಿಯಲ್ಲಿ ಮುಅಲ್ಲಿಂ ಡೇ ಆಚರಣೆ

Puttur_Advt_NewsUnder_1
Puttur_Advt_NewsUnder_1

15ಪುತ್ತೂರು: ದರ್ಬೆ ಮುಹಮ್ಮದೀಯ ಮಸೀದಿಯಲ್ಲಿ ಮುಅಲ್ಲಿಂ ಡೇ ಆಚರಣೆ ಅ.19ರಂದು ನಡೆಯಿತು.

ಸಿರಾಜುದ್ಧೀನ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ಮಕ್ಕಳ ಬದುಕಿನ ಬದಲಾವಣೆಗೆ ಶಿಕ್ಷಣ ಎಂಬುದು ಬಹಳ ಪ್ರಾಮುಖ್ಯವಾಗಿದ್ದು, ಗುರು ಪರಂಪರೆಯಿಂದ ಬಂದಿರುವ ಧಾರ್ಮಿಕ ಜ್ಞಾನವು ಹೊಸ ಪೀಳಿಗೆಗೆ ಶಿಕ್ಷಣದ ಮೂಲಕ ಅಕ್ಷರ ರೂಪದಲ್ಲಿ ಮುಂದುವರಿಯುತ್ತಿದೆ ಎಂದರು. ಮಸೀದಿ ಕಮಿಟಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಝಾದ್ ಅಧ್ಯಕ್ಷತೆ ವಹಿಸಿದ್ದರು. ಮುಅಲ್ಲಿಂ ಅಬ್ದುಲ್ ಖಾದರ್ ಮುಸ್ಲಿಯಾರ್, ಮಸೀದಿ ಕಮಿಟಿ ಖಜಾಂಜಿ ಪಿ.ಬಿ. ಹಸೈನಾರ್, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಮಸೀದಿಯ ಇಮಾಮರಾದ ಹಾಜಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಸ್ವಾಗತಿಸಿದರು. ಕಾರ್ಯದರ್ಶಿ ಅಬ್ದುಲ್ ಅಝೀಝ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.