ಸಂಪ್ಯ: ಸಾರ್ವಜನಿಕ ಶೌಚಾಲಯಕ್ಕೆ ಶಿಲಾನ್ಯಾಸ

Puttur_Advt_NewsUnder_1
Puttur_Advt_NewsUnder_1

sampya

ಪುತ್ತೂರು: ಆರ‍್ಯಾಪು ಗ್ರಾ.ಪಂ ವ್ಯಾಪ್ತಿಯ ಸಂಪ್ಯದಲ್ಲಿ ತಾ.ಪಂ.ನ ೨ಲಕ್ಷ ರೂ.ಅನುದಾನದಲ್ಲಿ ನಿರ್ಮಾಣವಾಗಲಿರುವ ಸಾರ್ವಜನಿಕ ಶೌಚಾಲಯಕ್ಕೆ ಆ.19ರಂದು ಆರ‍್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ಮರಿಕೆಯವರು ಗುದ್ದಲಿ ಪೂಜೆ ನೆರವೇರಿಸಿದರು. ತಾ.ಪಂ ಸದಸ್ಯ ಸಾಜ ರಾಧಾಕೃಷ್ಣ ಆಳ್ವರವರು ತೆಂಗಿನಕಾಯಿ ಒಡೆಯುವುದರ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಸ್ವಚ್ಚ ಭಾರತ ಅಭಿಯಾನದಡಿಯಲ್ಲಿ ೨ಲಕ್ಷ ಅನುದಾನ ಮಂಜೂರು ಆಗಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕು. ಶೀಘ್ರದಲ್ಲಿ  ಕಾಮಗಾರಿ ನೆರವೇರುವುದು ಎಂದು ಅವರು ಹೇಳಿದರು.

ಆರ‍್ಯಾಪು 5ನೇ ವಾರ್ಡ್‌ನ ಸದಸ್ಯೆ ಜಯಲಕ್ಷ್ಮೀ, ಗ್ರಾ.ಪಂ. ಕಾರ‍್ಯದರ್ಶಿ ಪದ್ಮಕುಮಾರಿ ಹಾಗೂ ಬಿಜೆಪಿ ಮುಖಂಡ ರವಿನಾಥ ಬೈಲಾಡಿ, ಸ್ಥಳೀಯರಾದ ಮೊನಪ್ಪ ಗೌಡ ಬೈಲಾಡಿ, ಗುಡ್ಡಪ್ಪ ಗೌಡ ಬೈಲಾಡಿ, ಕುಶಾಲಪ್ಪ ಗೌಡ ಬೈಲಾಡಿ, ಬಾಬು ಮಣಿಯಾಣಿ, ಗುತ್ತಿಗೆದಾರರಾದ ಯೋಗೇಶ್ ಶಾಂತಿಗೋಡು ಉಪಸ್ಥಿತರಿದ್ದರು. ಗ್ರಾ.ಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ವಿಜಯ ಬಿ ಎಸ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.