ರಾಜ್ಯ ಸರಕಾರದಿಂದ ಎಸ್ಸಿ,ಎಸ್ಟಿ ಕಲ್ಯಾಣಕ್ಕೆ ಆದ್ಯತೆ-ಸಚಿವ ರೈ

Puttur_Advt_NewsUnder_1
Puttur_Advt_NewsUnder_1

17ಕೊಳ್ನಾಡು ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ

ವಿಟ್ಲ: ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿ, ಪಂಗಡಗಳ ಕಲ್ಯಾಣಕ್ಕೆ ವಿಶೇಷ ಆದ್ಯತೆ ನೀಡಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜೊತೆಗೆ ವೈಯುಕ್ತಿಕ ಸ್ವಾವಲಂಬನೆಗೆ ಬಜೆಟ್‌ನಲ್ಲಿ ಗರಿಷ್ಠ ಅನುದಾನವನ್ನು ಒದಗಿಸಿ ತನ್ನ ಬದ್ಧತೆಯನ್ನು ತೋರಿಸಿದೆ ಎಂದು ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಕೊಳ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡಗಳ ಕಾಲೋನಿಗಳ 65 ಲಕ್ಷ ರೂ ಅನುದಾನದ ರಸ್ತೆ ಕಾಂಕ್ರೀಟಿಕರಣ ಶಿಲಾನ್ಯಾಸ ನೆರವೇರಿಸಿ ಕುಳಾಲು ಶ್ರೀ ವಾರಾಹಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅನ್ನಭಾಗ, ಕ್ಷೀರ ಭಾಗ್ಯ, ಕೃಷಿ ಭಾಗ್ಯವಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಹಲವು ಉಚಿತ ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಕಾಳಜಿ ವಹಿಸಿರುವ ಸರ್ಕಾರದ ಸಾಧನೆಯನ್ನು ಜನತೆ ಅರ್ಥಮಾಡಿಕೊಳ್ಳಬೇಕು ಎಂದ ಅವರು ನನ್ನನ್ನು ಆರಿಸಿ ಕಳುಹಿಸಿದ ಜನತೆಯ ಋಣ ಇಟ್ಟುಕೊಂಡು ಅವಧಿ ಮುಗಿಸುವ ಜಾಯಮಾನ ನನ್ನದಲ್ಲ. ಗರಿಷ್ಠ ಪ್ರಮಾಣದ ಅನುದಾನಗಳನ್ನು ತರುವ ಮೂಲಕ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಪಡಿಸಿದ ತೃಪ್ತಿ ನನಗಿದೆ ಎಂದರು.
ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ ಕಳೆದ 1 ವರ್ಷದ ಅವಧಿಯಲ್ಲಿ ಕೊಳ್ನಾಡು ಗ್ರಾಮಕ್ಕೆ 1 ಕೋಟಿ 30 ಲಕ್ಷ ರೂ. ವಿಶೇಷ ಅನುದಾನಗಳನ್ನು ಪರಿಶಿಷ್ಟ ಪಂಗಡದ ರಸ್ತೆ ಅಭಿವೃದ್ಧಿಗೆ ನೀಡುವ ಮೂಲಕ ಕ್ಷೇತ್ರದಲ್ಲಿ ಗರಿಷ್ಠ ಜನಸಂಖ್ಯೆ ಹೊಂದಿರುವ ಈ ಗ್ರಾಮಕ್ಕೆ ಸಚಿವರು ನ್ಯಾಯ ಒದಗಿಸಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಎಂ ಎಸ್ ಮಹಮ್ಮದ್, ತಾಲ್ಲೂಕು ಪಂಚಾಯಿತಿ ಸದಸ್ಯ ಕುಲ್ಯಾರು ನಾರಾಯಣ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ದೇವಿಕಾ ಆರ್ ರೆ, ಪಂಚಾಯಿತಿ ಉಪಾಧ್ಯಕ್ಷೆ ಯಮುನಾ ಲಕ್ಷ್ಮಣ ಗೌಡ, ಸದಸ್ಯರುಗಳಾದ ಪವಿತ್ರ ಪೂಂಜ, ಯುಸುಫ್ ಟಿ, ಇಬ್ರಾಯಿಂ ಮಣ್ಣಗದ್ದೆ, ಗುರುವಪ್ಪ ಮುಗೇರ, ಐರಿನ್ ಡಿ ಸೋಜ, ಇಸ್ಮಾಲಿ ಎನ್, ವನಜ, ಮಹಮ್ಮದ್ ಕಟ್ಟೆ, ಲೀನಾ ಡಿ ಸೋಜ, ವೇದಾವತಿ, ದೇವಕಿ, ವೇದಾವತಿ ಕುದ್ರಿಯ ಹಾಗೂ ಗಣ್ಯರಾದ ವಿಶ್ವನಾಥ ರೈ ಕುಳಾಲು, ಅಬ್ದುಲ್ ಖಾದ್ರಿ ಕುಳಾಲು, ಉಪಸ್ಥಿತರಿದ್ದರು. ಹರೀಶ್ ಗೌಡ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.