Breaking News

ಕೊಂಬಾರು: ಬಿಜೆಪಿ ಮಹಿಳಾ ಮೋರ್ಛಾದಿಂದ ಕನ್ಯಾ ಪೂಜೆ

Puttur_Advt_NewsUnder_1
Puttur_Advt_NewsUnder_1

ಕಡಬ: ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಛಾ, ಶಕ್ತಿ ಕೇಂದ್ರ ಕಡಬ ಇದರ ವತಿಯಿಂದ ಕನ್ಯಾ ಪೂಜೆ ಹಾಗೂ ಭಜನಾ ಕಾರ‍್ಯಕ್ರಮ ಕೊಂಬಾರು ಗ್ರಾಮದ ಬೊಟ್ಟಡ್ಕ ಆನಂದರವರ ಮನೆಯಲ್ಲಿ ನಡೆಯಿತು. ಕಾಲನಿಯ ಮನೆತನದ ಹಿರಿಯ ವ್ಯಕ್ತಿ ಕುಂಞ ಬೊಟ್ಟಡ್ಕ ಉದ್ಘಾಟಿಸಿದರು. ಕಾಲನಿಯ ೧೪ ಜನ ಕನ್ಯೆಯರಿಗೆ ಆರತಿ ಬೆಳಗಿ ಹಣೆಗೆ ತಿಲಕವಿಟ್ಟು ಪೂಜೆ ಮಾಡಲಾಯಿತು. ಮಕ್ಕಳಿಗೆ ಅರಸಿನ ಕುಂಕುಮ, ಹಸಿರು ಬಳೆ, ರವಿಕೆ, ಹಣ್ಣು ಹಂಪಲು ಪೆನ್ನು ನೀಡಿ ಸತ್ಕರಿಸಲಾಯಿತು. ರವಿಶಂಕರ ನಲ್ಲುರಾಯ ಕನ್ಯಾಪೂಜೆಯ ಮಹತ್ವವನ್ನು ವಿವರಿಸಿದರು.
ವೇದಿಕೆಯಲ್ಲಿ ಬಿಜೆಪಿ ಮಹಿಳಾ ಮೋರ್ಛಾದ ಸುಳ್ಯ ಮಂಡಲ ಅಧ್ಯಕ್ಷ ಶೋಭಾ ನಲ್ಲುರಾಯ, ಕಾರ‍್ಯದರ್ಶಿ ಶೋಭಾ ಜಯಾನಂದ ಕೋಡಿಂಬಾಳ, ಉಪಾಧ್ಯಕ್ಷೆ ಬೇಬಿ ಸೀತಾರಾಮ ಗೌಡ ದೇರಣೆ, ಗ್ರಾ.ಪಂ. ಸದಸ್ಯೆ ರುಕ್ಮಿಣಿ ಕುಶಾಲಪ್ಪ ಬಾರ‍್ಯ, ಉಪಾಧ್ಯಕ್ಷ ಚೆನ್ನಕೇಶವ ಕೈಂತಿಲ, ಬಿಳಿನೆಲೆ ಸಿ.ಎ ಬ್ಯಾಂಕ್ ಮಾಜಿ ನಿರ್ದೇಶಕ ಕುಂಞ ಬೊಟ್ಟಡ್ಕ, ಸುಳ್ಯ ಮಂಡಲದ ಕಾರ‍್ಯಕಾರಿಣಿ ಸದಸ್ಯ ಶಿವಪ್ರಸಾದ್, ರವಿಶಂಕರ್ ಪ್ರಸಾದ್ ನಲ್ಲುರಾಯ, ಕೊಂಬಾರು ಗ್ರಾ.ಪಂ. ಸದಸ್ಯರಾದ ದೇವಕಿ ಕೃಷ್ಣಪ್ಪ ಬೊಟ್ಟಡ್ಕ, ಸುಜಾತ ಜಯರಾಮ ಉಪಸ್ಥಿತರಿದ್ದರು.
ಕಾರ‍್ಯಕ್ರಮದಲ್ಲಿ ಸುಳ್ಯ ಮಂಡಲದ ಸದಸ್ಯ ಚಿದಾನಂದ ದೇವುಪಾಲ್, ವಿಶ್ವನಾಥ ಕೊಡೆಂಕಿರಿ, ರಾಮಚಂದ್ರ ಕಾಪಾರು, ಲೋಕೇಶ್ ಸರಪಾಡಿ, ವಿನೋದ್ ಕೆಂಜಾಳ ಕಾಲನಿಯ ಪ್ರಮುಖ ನಿವಾಸಿಗಳಾದ ಐತ, ತನಿಯಪ್ಪ, ಕಮಲ, ಶೋಭಾ ಕೋಲ್ಕಜೆ, ಸುಶೀಲ ಕೈಂತಿಲ, ವಿಮಲ ಕೊಲ್ಕಜೆ ಉಪಸ್ಥಿತರಿದ್ದರು.
ಕಡಬ ಶಕ್ತಿಕೇಂದ್ರದ ಮಹಿಳಾ ಮೋರ್ಛಾದ ಅಧ್ಯಕ್ಷೆ ಜಯಶ್ರೀ ರಾಮಚಂದ್ರ ಗೌಡ ಸ್ವಾಗತಿಸಿದರು. ಜಯಶ್ರೀ ದಾಮೋದರ ಗೌಡ ಕಾರ್ಯಕ್ರಮ ನಿರೂಪಿಸಿದರು. ಬೇಬಿ ಸೀತಾರಾಮ ಗೌಡ ವಂದಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.