Breaking News

ಕುಂತೂರು: ಧರಿತ್ರಿ ಸೇವಾ ಸಂಘ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

kunthuruಪೆರಾಬೆ: ಪರಿಸರ ಮತ್ತು ಸ್ವಚ್ಛತೆಯ ಆದ್ಯತೆಗಾಗಿ ರೂಪುಗೊಂಡಿರುವ ಧರಿತ್ರಿ ಸೇವಾ ಸಂಘ ಕುಂತೂರು ಇದರ ಉದ್ಘಾಟನೆ ಕುಂತೂರು ಶ್ರೀ ರಾಜನ ದೈವಸ್ಥಾನ ನೆರೋಲ್‌ಪಲ್ಕೆ ಇದರ ವಠಾರದಲ್ಲಿ ನಡೆಯಿತು.
ಅಲಂಕಾರು ಜೆಸಿಐನ ಪೂರ್ವಾಧ್ಯಕ್ಷ ಪ್ರವೀಣ ಆಳ್ವರವರು ದೀಪ ಬೆಳಗಿಸಿ, ಉದ್ಘಾಟಿಸಿ, ಶುಭಹಾರೈಸಿದರು. ಪ್ರಗತಿಪರ ಕೃಷಿಕ ಜಿ.ಪಿ. ಶೇಷಪತಿ ರೈ ಗುತ್ತು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಶ್ರೀ ರಾಜನ್ ದೈವಸ್ಥಾನದ ಗೌರವಾಧ್ಯಕ್ಷ ವಿಠಲ ರೈ ಗುತ್ತುಪಾಲು ಶುಭಹಾರೈಸಿ ತಂಡಕ್ಕೆ ದಾಖಲಾತಿ ಹಸ್ತಾಂತರಿಸಿದರು. ಸ್ಥಾಪಕಾಧ್ಯಕ್ಷರಾಗಿ ಚೆನ್ನಕೇಶವ ರೈ ಗುತ್ತುಪಾಲು, ಕಾರ್ಯದರ್ಶಿಯಾಗಿ ರಾಜೇಶ್ ಶೆಟ್ಟಿ, ಸದಸ್ಯರುಗಳಾಗಿ ರವಿರಾಜ ರೈ, ಸುಭಿಕ್ಷರತ್ನ ರೈ, ಪುರಂದರ ಕೆ., ನವೀನ ಶೆಟ್ಟಿ, ಗುರುಕಿರಣ್ ಶೆಟ್ಟಿ, ಜನಾರ್ದನ ಎಚ್.ಆರ್., ಉಮೇಶ್ ಶೆಟ್ಟಿ, ಗಣೇಶ್ ಶೆಟ್ಟಿ ಆಯ್ಕೆಯಾದರು. ಗುರುಕಿರಣ್ ಪ್ರಾರ್ಥಿಸಿದರು. ಸುಭಿಕ್ಷರತ್ನ ಸ್ವಾಗತಿಸಿ, ರವಿರಾಜ್ ರೈ ವಂದಿಸಿದರು. ಗುರುಕಿರಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.