ಎಪಿಎಂಸಿ ಪ್ರಾಂಗಣದ ನಾಗನ ಕಟ್ಟೆಯ ಪ್ರತಿಷ್ಠಾ ವಾರ್ಷಿಕೋತ್ಸವ, ಗಣಹೋಮ, ಆಶ್ಲೇಷ ಬಲಿ ಪೂಜೆ, ನಾಗತಂಬಿಲ

Puttur_Advt_NewsUnder_1
Puttur_Advt_NewsUnder_1

4 2 1 3

ಪುತ್ತೂರು: ಇಲ್ಲಿನ ಸಾಲ್ಮರ ಎಪಿಎಂಸಿ ಮುಖ್ಯಮಾರುಕಟ್ಟೆ ಪ್ರಾಂಗಣದಲ್ಲಿರುವ ನಾಗನ ಕಟ್ಟೆಯ ವಾರ್ಷಿಕ ಪ್ರತಿಷ್ಠಾ ಮಹೋತ್ಸವವು ಅ.22ರಂದು ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಯಿತು. ಸಾರ್ವಜನಿಕ ಶ್ರೀ ನಾಗದೇವತಾ ಪೂಜಾ ಸೇವಾ ಸಮಿತಿಯಿಂದ ಆಚರಿಸಲ್ಪಟ್ಟ ಪ್ರತಿಷ್ಠಾ ಮಹೋತ್ಸವದಲ್ಲಿ ಬೆಳಿಗ್ಗೆ ಗಣಹೋಮ, ಆಶ್ಲೇಷ ಬಲಿ ಪೂಜೆ ಮಧ್ಯಾಹ್ನ ನಾಗತಂಬಿಲ, ಮಹಾಪೂಜೆ , ಪ್ರಸಾದ ವಿತರಣೆ ನಡೆಯಿತು. ಪುರೋಹಿತ ಬಾಲಕೃಷ್ಣ ಐತಾಳ್ ಮತ್ತು ಬಳಗದವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ಪೂಜಾ ಸಮಿತಿಯ ಅಧ್ಯಕ್ಷ ಜಯರಾಮ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ, ನಿರ್ದೇಶಕರಾದ ಸಾಜ ರಾಧಾಕೃಷ್ಣ ಆಳ್ವ, ತ್ರಿವೇಣಿ ಕರುಣಾಕರ ಪೆರ‍್ವೋಡಿ, ಕೃಷ್ಣ ನಾಯ್ಕ, ಕಾರ್ಯದರ್ಶಿ ಹೆಚ್.ಕೆ ಕೃಷ್ಣಮೂರ್ತಿ, ಸುಳ್ಯ ಎಪಿಎಂಸಿ ಕಾರ್ಯದರ್ಶಿ ವಿಮಲ, ಪೂಜಾ ಸಮಿತಿಯ ಸದಸ್ಯ, ಪುತ್ತೂರು ಅಡಿಕೆ ವರ್ತಕ ಸಂಘದ ಅಧ್ಯಕ್ಷರೂ ಆಗಿರುವ ರವೀಂದ್ರನಾಥ ರೈ ಬಳ್ಳಮಜಲು, ವರ್ತಕರಾದ ಜಯಕುಮಾರ್ ಎಂ.ಆರ್, ಪಾಂಡುರಂಗ ಭಟ್, ತಿಮ್ಮಪ್ಪ ಗೌಡ, ಆನಂದ ಉಡುಪ, ಗಂಗಾಧರ ಗೌಡ, ಉದಯ ಶೆಟ್ಟಿ, ಶಶಾಂಕ್ ಕೊಟೇಚಾ, ಕರುಣಾಕರ ರೈ ಉಪ್ಪಿನಂಗಡಿ, ಅಶೋಕ್ ಕುಮಾರ್, ಪ್ರವೀಣ್ ಬಾಯಿ ಸವಾಲಿಯ, ಎಂ. ಕೃಷ್ಣ, ಪೂಜಾ ಸಮಿತಿಯ ಸದಸ್ಯರಾದ ಪ್ರವೀಣ ಶೆಟ್ಟಿ ಮಾಣಿ, ರಂಜನ್ ಶೆಟ್ಟಿ, ಮಿಥುನ್, ಉಮೇಶ್, ಎಪಿಎಂಸಿ ಲೆಕ್ಕಿಗ ರಾಮಚಂದ್ರ, ಸಿಬ್ಬಂದಿಗಳು, ಕ್ಯಾಂಪ್ಕೋ ಅಧಿಕಾರಿಗಳು, ಮೋಹನ್ ರೈ ಮಾಡಾವು, ಬಾಲಕೃಷ್ಣ ರೈ, ಗುಣಪಾಲ ಗೌಡ, ಪುರುಷೋತ್ತಮ ಗೌಡ ಮುಂಗ್ಲಿಮನೆ, ಸಂತೋಷ್ ಶೆಟ್ಟಿ, ಯಾರ್ಡ್‌ನ ವರ್ತಕರು, ಭಕ್ತಾದಿಗಳು ಉಪಸ್ಥಿತರಿದ್ದರು. ಪೂಜೆಯ ಬಳಿಕ ಸಾವಿರಾರು ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.