ಬೆಟ್ಟಂಪಾಡಿ ವಿಜಯಾಬ್ಯಾಂಕ್ ಶಾಖೆಯಲ್ಲಿ ಸಂಸ್ಥಾಪಕರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

img-20161022-wa0000_2

ನಿಡ್ಪಳ್ಳಿ: ಬೆಟ್ಟಂಪಾಡಿ ವಿಜಯಾಬ್ಯಾಂಕ್ ಶಾಖೆಯಲ್ಲಿ ಅ.21 ರಂದು ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು. ಬ್ಯಾಂಕ್ ನ ನಿವೃತ್ತ ಪ್ರಬಂಧಕ ದಯಾನಂದ ರೈ, ಬ್ಯಾಂಕ್ ನ ಕಟ್ಟಡದ ಮಾಲಕ ಕರುಣಾಕರ ರೈ ಕೊಮ್ಮಂಡ, ಹಿರಿಯರಾದ ವೆಂಕಟ್ರಾವ್. ಬಿ, ಬೆಟ್ಟಂಪಾಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಸುಂದರ ನಾಯಕ್ ಬಾಳೆಗುಳಿ ಮಾತನಾಡಿದರು. ಬೆಟ್ಟಂಪಾಡಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ದೀಪಿಕಾ ಮರಿಯಾರವರನ್ನು ವಿದ್ಯಾರ್ಜನೆಗೆ ಈ ಸಂದರ್ಭದಲ್ಲಿ ದತ್ತು ತೆಗೆದುಕೊಳ್ಳಲಾಯಿತು.
ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿ ಕೊಮ್ಮಂಡ, ಮಾಜಿ ಸದಸ್ಯ ದುರ್ಗಾಪ್ರಸಾದ್.ಜೆ, ಡಾ. ಸುಬ್ರಮಣ್ಯ ವಾಗ್ಲೆ, ಡಾ. ಸತೀಶ್ ರಾವ್, ಸತೀಶ್ ರೈಮೂರ್ಕಾಜೆ, ಜಯರಾಮ ರೈ ನೀರ್ಪಾಡಿ, ಕೇಶವ ಆಚಾರ್ಯ ನಿಡ್ಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.  ಬ್ಯಾಂಕ್ ನ ಪ್ರಬಂಧಕ ಸತೀಶ್ ತಿವಾರಿ ಸ್ವಾಗತಿಸಿ. ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.