ದೀಪಾವಳಿ ಪ್ರಕಾಶಿಸುತ್ತಿದೆ ಪುತ್ತೂರು ಮುಳಿಯ ಚಿನ್ನೋತ್ಸವದಲ್ಲಿ

Puttur_Advt_NewsUnder_1
Puttur_Advt_NewsUnder_1

puttur-showroom

ಪುತ್ತೂರು : ಪ್ರಾಮಾಣಿಕ ವ್ಯವಹಾರ, ಉತ್ತಮ ಸೇವೆಯೊಂದಿಗೆ ಮನೆಮಾತಾಗಿರುವ ಸ್ವರ್ಣ ಪರಂಪರೆಯಲ್ಲಿ 7 ದಶಕಗಳ ಅಗಾಧ ಅನುಭವ ಹೊಂದಿರುವ ಪುತ್ತೂರಿನ ಪ್ರತಿಷ್ಠಿತ ಮುಳಿಯ ಕೇಶವ ಭಟ್ಟ ಆಂಡ್ ಸನ್ಸ್ ಆಭರಣ ಮಳಿಗೆಯು ದೀಪಾವಳಿ ಸಂಭ್ರಮದ ಪ್ರಕಾಶ ಬೀರಲು ಚಿನ್ನೋತ್ಸವವನ್ನು ಹಮ್ಮಿಕೊಂಡಿದೆ. ಸಂಸ್ಥೆಯು ಪ್ರಸ್ತುತ ಪುತ್ತೂರು, ಬೆಂಗಳೂರು, ಗೋಣಿಕೊಪ್ಪಲು ಮತ್ತು ಮಡಿಕೇರಿಗಳಲ್ಲಿ ಆಭರಣ ಮಳಿಗೆಯನ್ನು ಹೊಂದಿದೆ. ಮುಳಿಯ ಚಿನ್ನೋತ್ಸವವೆಂದರೆ ಅದು ಹಬ್ಬದ ಸಂಭ್ರಮ. ಗ್ರಾಹಕರ ಮನಮಿಡಿಯುವ ಆಭರಣಗಳು, ಉಡುಗೊರೆಗಳು, ಚಿನ್ನದ ನಾಣ್ಯಗಳು ಹೀಗೆ ಗ್ರಾಹಕನ ಸಂತೃಪ್ತ ಸೇವೆಗೆ ಈ ಉತ್ಸವವನ್ನು ಆಚರಣೆ ಮಾಡಲಾಗುತ್ತಿದೆ ಎಂದು ಸಂಸ್ಥೆಯು ತಿಳಿಸುತ್ತಿದೆ.

ಸಂಸ್ಥೆಯಲ್ಲಿ ಪ್ರತಿವರ್ಷ ವಿಶೇಷ ಸಂಗ್ರಹಗಳೊಂದಿಗೆ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ಚಿನ್ನೋತ್ಸವದಂದು ನಡೆಯುತ್ತಿದ್ದು, ಈ ವರ್ಷ ಗ್ರಾಹಕರ ಅಪೇಕ್ಷೆಯ ಮೇರೆಗೆ ಚಿನ್ನೋತ್ಸವನ್ನು ದೀಪಾವಳಿಯ ಶುಭ ಸಂದರ್ಭದಲ್ಲಿ ಎರಡನೇ ಬಾರಿಗೆ ಆಯೋಜಿಸಲಾಗಿದೆ. ಈ ಚಿನ್ನೋತ್ಸವವು ನ. 5ರವರೆಗೆ ನಡೆಯಲಿದೆ.

ಖರೀದಿಯ ವಿಫುಲ ಅವಕಾಶ

ಜನತೆಗೆ ಚಿನ್ನ ಖರೀದಿಗೆ ಮುಳಿಯ ಜ್ಯುವೆಲ್ಸ್ ಸೂಕ್ತ ವೇದಿಕೆ. ಚಿನ್ನ, ಬೆಳ್ಳಿ ಹಾಗೂ ವಜ್ರ ಹೀಗೆ ಯಾವುದೇ ಶೈಲಿಯ ಆಭರಣಗಳನ್ನು ಖರೀದಿಸುವುದಾದರೂ ಮುಳಿಯದಲ್ಲಿ ಆಯ್ಕೆಗೆ ವಿಪುಲವಾದ ಅವಕಾಶಗಳಿವೆ. ಸಾಂಪ್ರದಾಯಿಕ ಶೈಲಿಯ ಆಭರಣಗಳಿಂದ ಹಿಡಿದು ಅತ್ಯಾಧುನಿಕ ನವನವೀನ ಆಭರಣಗಳು ಇಲ್ಲಿದೆ.

ಅತ್ಯಾಕರ್ಷಕ ಲೈಟ್‌ವೈಟ್ ಆಂಟಿಕ್ ಆಭರಣಗಳು, ಜುಮುಕಿ, ಆಂಟಿಕ್ ಟೆನ್ ಇನ್ ವನ್ ಆಭರಣಗಳು, ರೂಬಿ ಆಂಡ್ ಎಮರಾಲ್ಡ್ ಆಭರಣಗಳ ವಿಶೇಷ ಸಂಗ್ರಹ ಗ್ರಾಹಕರಿಗೆ ಲಭ್ಯವಾಗಲಿದೆ. ವಿವಿಧ ವಿನ್ಯಾಸಗಳು ಜುಮುಕಿಗಳು, ಹಾರ, ಸೊಂಟಪಟ್ಟಿ, ನೆಕ್ಲೆಸ್, ವಂಕಿ, ಎರಡೂ ಬದಿಗಳಲ್ಲೂ ಉಪಯೋಗಿಸಬಹುದಾದ ಪೆಂಡೆಂಟ್‌ಗಳು ಗ್ರಾಹಕರಿಗೆ ಸಿಗಲಿದೆ.

ಸಂಡೆ -ಮಂಡೆ ನೆಕ್ಲೆಸ್‌ಗಳು, ಲೈಟ್‌ವೈಟ್ ನೆಕ್ಲೆಸ್ ಹಾಗೂ ಹಾರಗಳು, ಕರಾವಳಿ ಹಾಗೂ ಕೊಡವ ಶೈಲಿಯ ಆಭರಣಗಳು, ಕರಿಮಣಿ ಸರಗಳ ವಿಶೇಷ ಸಂಗ್ರಹ ಲಭ್ಯವಿರುತ್ತದೆ. 100 ಗ್ರಾಂ ತೂಕದಲ್ಲಿ ಮಾಡಿದ ನವೀನ ವಿನ್ಯಾಸದ ಕರಿಮಣಿ ಸರ ಮುಳಿಯದ ವಿಶೇಷತೆಯಾಗಿದೆ. ಗಿಳಿಯೋಲೆ, ಮಲ್ಲಿಗೆ ಮೊಗ್ಗಿನ ಸರ, ಕಾಸಿನ ಸರ(ಮಿಸ್ರಿಮಾಲೆ), ಬೆಂಡೋಲೆಗಳು, ಬಳೆಗಳ ವಿಶೇಷ ಸಂಗ್ರಹವಿರುತ್ತದೆ. ನುರಿತ ಕುಶಲಕರ್ಮಿಗಳಿಂದ ಸಿದ್ಧಪಡಿಸಿದ ನವರತ್ನದ ಉಂಗುರಗಳು, ಪವಿತ್ರ ಉಂಗುರ, ಚಿನ್ನದ ಕಾಲುಚೈನುಗಳು ಹೀಗೆ ಎಲ್ಲಾ ವಿವಿದ ಆಭರಣಗಳು ಸಂಸ್ಥೆಯಲ್ಲಿವೆ. ವಜ್ರದ ಟು ಇನ್ ವನ್ ಆಭರಣಗಳು ಲಭ್ಯವಿರುತ್ತದೆ.

ಚಿನ್ನೋತ್ಸವದ ವಿಶೇಷತೆಗಳು

ಚಿನ್ನೋತ್ಸವದಲ್ಲಿ ದೇಶದ ನಾನಾ ಭಾಗಗಳ ಆಯ್ದ ವಿನ್ಯಾಸಕಾರರಿಂದ ವಿನ್ಯಾಸಗೊಳಿಸಿದ ಆಭರಣಗಳ ಸಂಗ್ರಹವನ್ನು ಏರ್ಪಡಿಸಲಾಗಿದೆ. ೫೦,೦೦೦ ರೂ. ಮೇಲ್ಪಟ್ಟು ಖರೀದಿಗೆ ಚಿನ್ನದ ನಾಣ್ಯ, ಪ್ರತಿ ಖರೀದಿಯೊಂದಿಗೆ ವಿಶೇಷ ಖಚಿತ ಉಡುಗೊರೆ ಹಾಗೂ ಅದೃಷ್ಟ ಕೂಪನ್ ಮೂಲಕ ಕಾರು ಗೆಲ್ಲುವ ಅದೃಷ್ಟ ಅವಕಾಶ ಗ್ರಾಹಕರಿಗೆ ಒದಗಿಬರಲಿದೆ. ಸುಮಾರು ೪೦೦೦ ಚದರ ಅಡಿ ವಿಸ್ತಾರವಿರುವ ಮುಳಿಯ ಸಂಸ್ಥೆಯಲ್ಲಿ ಗ್ರಾಹಕರಿಗೆ ಚಿನ್ನಾಭರಣ ಖರೀದಿಸಲು ವಿಶಾಲವಾದ ಶೋರೂಂನ ವ್ಯವಸ್ಥೆ ಇದೆ. ಮದುವೆ ಆಭರಣಗಳಿಗೆ ವಿಶೇಷವಾದ ರಿಯಾಯಿತಿ ಕೂಡಾ ಇದೆ. ಈ ಸಲದ ದೀಪಾವಳಿ ಸಂಭ್ರಮವನ್ನು ಮುಳಿಯ ಚಿನ್ನೋತ್ಸವದೊಂದಿಗೆ ಸಂಭ್ರಮಿಸಲು ಸೂಕ್ತ ವೇದಿಕೆಯಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.