ದೇವಳದ ಗದ್ದೆೆಯಲ್ಲಿ ಸಂತೆಗೆ ಅವಕಾಶ ನೀಡಿದರೆ ಪಾವಿತ್ರ್ಯತೆಗೆ ಧಕ್ಕೆೆ ಸಮಿತಿ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ

Puttur_Advt_NewsUnder_1
Puttur_Advt_NewsUnder_1

advt

ಪುತ್ತೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಳದ ಗದ್ದೆೆಗೆ ತನ್ನದೇ ಆದ ಇತಿಹಾಸವಿದ್ದು ಇದರಲ್ಲಿ ವಾರದ ಸಂತೆ ನಡೆಸಲು ಅವಕಾಶ ನೀಡುವುದಕ್ಕೆೆ ವೈಯಕ್ತಿಿಕವಾಗಿ ನನ್ನ ಒಪ್ಪಿಿಗೆ ಇಲ್ಲ. ಏನಿದ್ದರೂ ಈ ವಿಚಾರವನ್ನು ವ್ಯವಸ್ಥಾಾಪನಾ ಸಮಿತಿಯ ಸಭೆಯಲ್ಲಿಟ್ಟು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿಿ ಹೇಳಿದ್ದಾರೆ.
ದೇವಳದ ಗದ್ದೆೆಯಲ್ಲಿ ತಾತ್ಕಾಾಲಿಕವಾಗಿ ವಾರದ ಸಂತೆ ನಡೆಸಲು ಅವಕಾಶ ನೀಡುವಂತೆ ನಗರಸಭೆಯವರು ಮನವಿ ಸಲ್ಲಿಸಿದ್ದಾರೆ. ಆದರೆ ಈ ಬಗ್ಗೆ ತಾನು ವೈಯಕ್ತಿಕ ತೀರ್ಮಾನಕೈಗೊಳ್ಳದೇ ವ್ಯವಸ್ಥಾಾಪನಾ ಸಮಿತಿ ಸಭೆಯಲ್ಲಿಟ್ಟು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಶ್ರೀ ಮಹಾಲಿಂಗೇಶ್ವರನ ರಥೋತ್ಸವ ನಡೆಯುವ ರಥಬೀದಿಯ ಅಕ್ಕಪಕ್ಕದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಳದ ಗದ್ದೆೆಯನ್ನು ಸಂತೆಗೆ ನೀಡಿದ್ದೇ ಆದಲ್ಲಿ ದೇವಳದ ಪಾವಿತ್ರ್ಯತೆಗೆ ಧಕ್ಕೆೆ ಬರುವ ಸಾಧ್ಯತೆ ಇದೆ. ನಾಗನ ಮೂಲಸನ್ನಿಿಧಿ ಇರುವ ಮತ್ತು ಪೂಕರೆ ಉತ್ಸವವೂ ನಡೆಯುವ ದೇವಳದ ಗದ್ದೆೆಗೆ ಸಂಬಂಧಿಸಿದಂತೆ ಕೆಲವೊಂದು ಸಂಪ್ರದಾಯಗಳನ್ನು ಪಾಲಿಸಬೇಕಾಗಿದೆ. ದೇವಳ, ಜಾತ್ರಾಾ ಗದ್ದೆೆಯ ಸ್ವಚ್ಛತೆ, ನೈರ್ಮಲ್ಯ ಮತ್ತು ಪಾವಿತ್ರ್ಯತೆಯನ್ನು ಕಾಪಾಡುವುದು ನಮ್ಮ ಜವಾಬ್ದಾಾರಿಯಾಗಿರುವುದರಿಂದ ಈ ಗದ್ದೆೆಯಲ್ಲಿ ಸಂತೆ ನಡೆಸುವುದು ಸಮಂಜಸವಾಗುವುದಿಲ್ಲ.ಆದ್ದರಿಂದ ದೇವಳದ ಗದ್ದೆೆಯಲ್ಲಿ ತಾತ್ಕಾಾಲಿಕ ನೆಲೆಯಲ್ಲಿಯೂ ಸಂತೆ ನಡೆಸಲು ವೈಯಕ್ತಿಕವಾಗಿ ನಾನು ಒಪ್ಪುುವುದಿಲ್ಲ. ಈ ವಿಚಾರಕ್ಕೆೆ ಸಂಬಂಧಿಸಿ ಶೀಘ್ರ ವ್ಯವಸ್ಥಾಪನಾ ಸಮಿತಿ ಸಭೆ ಕರೆದು ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುತ್ತೇವೆ ಎಂದು ಅಧ್ಯಕ್ಷ ಎನ್.ಸುಧಾಕರ ಶೆಟ್ಟಿ ಸುದ್ದಿಗೆ ತಿಳಿಸಿದ್ದಾಾರೆ.
ಪುತ್ತೂರು ಕಿಲ್ಲೆೆ ಮೈದಾನದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ಎಪಿಎಂಸಿಗೆ ಸ್ಥಳಾಂತರಗೊಳಿಸಿ ಸಹಾಯಕ ಆಯುಕ್ತರು ಆದೇಶ ಹೊರಡಿಸಿರುವ ಪರಿಣಾಮ ಸಂತೆ ಎಪಿಎಂಸಿಗೆ ಸ್ಥಳಾಂತರಗೊಂಡಿದೆ. ಆರಂಭದಲ್ಲಿ ಅಲ್ಲಿ ಉತ್ತಮ ವ್ಯವಹಾರ ನಡೆಯುತ್ತಿಿದ್ದರೂ ಬಳಿಕದ ಬೆಳವಣಿಗೆಯಲ್ಲಿ ವ್ಯವಹಾರದಲ್ಲಿ ನಷ್ಟ ಉಂಟಾಗಿರುವುದರಿಂದ ಮತ್ತು ದೂರದ ಎಪಿಎಂಸಿಗೆ ಹೋಗಲು ಜನತೆಗೂ ತೊಂದರೆಯಾಗಿರುವುದರಿಂದ ಜನತೆಗೆ ಅನುಕೂಲವಾಗುವ ಸ್ಥಳದಲ್ಲಿ ಸಂತೆ ಮಾಡಲು ಉದ್ದೇಶಿಸಿರುವ ನಗರಸಭೆ ಈ ಸಂಬಂಧ ಸ್ಥಳದ ಹುಡುಕಾಟದಲ್ಲಿದೆ. ಅಲ್ಲಿಯ ತನಕ ತಾತ್ಕಾಲಿಕ ನೆಲೆಯಲ್ಲಿ ದೇವಳದ ಗದ್ದೆೆಯಲ್ಲಿ ವಾರದ ಸಂತೆ ನಡೆಸಲು ಅವಕಾಶ ನೀಡುವಂತೆ ನಗರಸಭೆಯ ವತಿಯಿಂದ ದೇವಳದ ವ್ಯವಸ್ಥಾಾಪನಾ ಸಮಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನಲೆಯಲ್ಲಿ ಸಮಿತಿಯ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿಯವರು ತನ್ನ ಪ್ರತಿಕ್ರಿಯೆ ನೀಡಿದ್ದಾಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.