ನಿಶಾನ್ ರೈ ಮಠಂತಬೆಟ್ಟು ನಂದಗೋಕುಲ ದೀಪಾವಳಿ ಪುರಸ್ಕಾರಕ್ಕೆ ಆಯ್ಕೆ

Puttur_Advt_NewsUnder_1
Puttur_Advt_NewsUnder_1

nishan
ಪುತ್ತೂರು: ಅರೆಹೊಳೆ ಪ್ರತಿಷ್ಠಾನದ ಆಶ್ರಯದಲ್ಲಿ ‘ನಂದಗೋಕುಲ’ ಕಲಾ ತಂಡ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಕದ್ರಿ ಹಿಲ್ಸ್ ಆಶ್ರಯದಲ್ಲಿ ‘ನಂದಗೋಕುಲ’ ದೀಪಾವಳಿ ಸಂಭ್ರಮ ಹಾಗೂ ಮಕ್ಕಳ ದಿನಾಚರಣೆಯಂದು ಯುವ ಪ್ರತಿಭೆಗಳಿಗೆ ನೀಡಲಿರುವ ‘ನಂದಗೋಕುಲ ದೀಪಾವಳಿ ಪುರಸ್ಕಾರ’ಕ್ಕೆ ಈ ಬಾರಿ ಯುವ ಕಲಾವಿದ ನಿಶಾನ್ ರೈ ಮಠಂತಬೆಟ್ಟು ಆಯ್ಕೆಯಾಗಿದ್ದಾರೆ. ಭಕ್ತಿಗೀತೆ, ಜನಪದ ಗೀತೆ, ಚಲನಚಿತ್ರ ಗೀತೆ ಸೇರಿದಂತೆ ಎಲ್ಲ ರೀತಿಯ ಹಾಡುಗಳ ಮೂಲಕ ಜನಮನವನ್ನು ಗೆದ್ದಿರುವ ನಿಶಾನ್, ಈಗಾಗಲೇ ರಾಜ್ಯ- ಹೊರರಾಜ್ಯಗಳಲ್ಲಿ ತನ್ನ ಗಾಯನ ಪ್ರತಿಭೆ ಮೆರೆದಿದ್ದಾರೆ.
ಮಂಗಳೂರಿನ ಶ್ರೀ ಶಾರದಾ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ನಿಶಾನ್ ರೈ ಬಾಲ್ಯೊಟ್ಟುಗುತ್ತು ಈಗಾಗಲೇ ಸೋನಿ ಟಿವಿ, ಝೀ ಟಿವಿ ಗಳ ರಿಯಾಲಿಟಿ ಶೋಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ.
ನ.೧೨ರಂದು ಮಂಗಳೂರಿನಲ್ಲಿ ನಡೆಯಲಿರುವ ‘ನಂದಗೋಕುಲ’ ದೀಪಾವಳಿ ಸಮಾರಂಭ ಮತ್ತು ಮಕ್ಕಳ ದಿನಾಚರಣೆಯ ವೇಳೆಗೆ ಈ ಪುರಸ್ಕಾರವನ್ನು ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಗುವುದು ಎಂದು ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರುಣಾಕರ ರೈ ಬಾಲ್ಯೊಟ್ಟುಗುತ್ತು ಮತ್ತು ನಿರತ ಕೆ. ರೈ ಮಠಂತಬೆಟ್ಟುರವರ ಪುತ್ರನಾಗಿರುವ ನಿಶಾನ್ ರೈಯವರು ನವಂಬರ್ ೧೮ರಂದು ಕತಾರ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.