ಜ್ಯೋತಿ ಲ್ಯಾಬೋಟರಿಸ್ ಲಿ. ವಲಯ ಮಾರಾಟಾಧಿಕಾರಿ ಸತೀಶ್ ಮುರುಳ್ಯ

Puttur_Advt_NewsUnder_1
Puttur_Advt_NewsUnder_1

sathish

ಪುತ್ತೂರಿನ ಪರ್ಲಡ್ಕ ನಿವಾಸಿ ಸತೀಶ್ ಮುರುಳ್ಯ ಉತ್ತರ ಕರ್ನಾಟಕದ ಜ್ಯೋತಿ ಲ್ಯಾಬೋಟರಿಸ್ ಲಿ. (ಉಜಾಲ) ವಲಯ ಮಾರಾಟಾಧಿಕಾರಿಯಾಗಿ ಹುಬ್ಬಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಪರ್ಲಡ್ಕದ ದಿ. ರಾಮಣ್ಣ ಆಚಾರ್ಯ ಮತ್ತು ಮೋಹಿನಿ ಇವರ ಪುತ್ರ. ಪರ್ಲಡ್ಕದ ಸ.ಹಿ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ ಮತ್ತು ಸ.ಫಿಲೋಮಿನಾ ಹೈಸ್ಕೂಲ್‌ನಲ್ಲಿ ಫ್ರೌಡ ಶಿಕ್ಷಣ ಪೂರೈಸಿದ್ದಾರೆ. ಸಂತ ಫಿಲೋಮಿನಾ ಕಾಲೇಜಿನದಲ್ಲಿ ವಾಣಿಜ್ಯ ಪದವಿ ವ್ಯಾಸಂಗ ಮಾಡಿರುತ್ತಾರೆ. 1995 ರಲ್ಲಿ ಉದ್ಯೋಗವನ್ನರಸಿ ಬೆಂಗಳೂರಿನಲ್ಲಿ ನೆಲೆಸಿದ ಇವರು 1996ರಲ್ಲಿ ಜ್ಯೋತಿ ಲ್ಯಾಬೋಟರಿಸ್ ಲಿ. ನಲ್ಲಿ ಮಾರಾಟ ಪ್ರತಿನಿಧಿಯಾಗಿ ಸೇವೆ ಆರಂಭಿಸಿದರು. ತದನಂತರ ಭಡ್ತಿ ಹೊಂದಿ ಮಾರಾಟಾಧಿಕಾರಿಯಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಆ ನಂತರ ಕಂಪನಿಯ ಮಾರಾಟ ವಿಭಾಗ ಮ್ಯಾನೇಜರ್ ಆಗಿ ಮುಂಬಯಿ, ನಾಗ್ಪರ, ಗಾಯಿಜಾಬಾದ್, ಜೈಪುರ ಮುಂತಾದ ನಗರಗಳಲ್ಲಿ ಸೇವೆ ಸಲ್ಲಿಸಿ ಕಂಪನಿಯ ಆಡಳಿತದ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ೨೦೧೩ರಲ್ಲಿ ವಲಯ ಮಾರಾಟಾಧಿಕಾರಿಯಾಗಿ ಭಡ್ತಿ ಹೊಂದಿ ಪ್ರಸ್ತುತ ಹುಬ್ಬಳ್ಳಿ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಉತ್ತರ ಕರ್ನಾಟಕದಲ್ಲಿ ಕಂಪನಿಯ ಉತ್ಪನ್ನಗಳ ಮಾರುಕಟ್ಟೆಯ ಉಸ್ತುವಾರಿ ವಹಿಸಿರುತ್ತಾರೆ. ಇವರು ಪತ್ನಿ ಶ್ರೀಮತಿ ವಾಣಿಶ್ರೀ ಸತೀಶ್ ಹಾಗೂ ಪುತ್ರಿ ವೈಷ್ಣವಿ ಜೊತೆ ಹುಬ್ಬಳ್ಳಿಯ ಭವಾನಿ ನಗರದಲ್ಲಿ ನೆಲಸಿದ್ದಾರೆ. ಇವರ ಸಹೋದರರಾದ ಮಹೇಶ್ ಎಂ. ಬೆಟ್ಟಂಪಾಡಿ ಸ.ಪ.ಪೂ.ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ, ಇನ್ನೊರ್ವ ಸಹೋದರ ಯೋಗೀಶ್ ಎಂ. ಬನ್ನೂರಿನ ಮೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಉದ್ಯೋಗಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.