ಬಂಟರ ಯಾನೆ ನಾಡವರ ಮಾತೃಸಂಘ-ಪುತ್ತೂರು ತಾಲೂಕು ಸಮಿತಿ ಸಂಚಾಲಕ: ದಯಾನಂದ ರೈ, ಸಹ ಸಂಚಾಲಕ: ಅಜಯ್ ಆಳ್ವ

Puttur_Advt_NewsUnder_1
Puttur_Advt_NewsUnder_1

aaaaaaaaaa

ಪುತ್ತೂರು: ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಇದರ ಪುತ್ತೂರು ತಾಲೂಕು ಸಮಿತಿಯ ಕಾರ‍್ಯಕಾರಿ ಸಮಿತಿ ಸಭೆಯು ಅ.22 ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.

ಸಮಿತಿಯ ಸಂಚಾಲಕರಾಗಿ ದಯಾನಂದ ರೈ ಮನವಳಿಕೆಗುತ್ತು, ಸಹ ಸಂಚಾಲಕರಾಗಿ ಅಜಯ್ ಆಳ್ವ ಬಳ್ಳಮಜಲುರವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಸಂಚಾಲಕರಾಗಿ ಆಯ್ಕೆಯಾದ ದಯಾನಂದ ರೈರವರು 2 ನೇ ಬಾರಿಗೆ ಸಂಚಾಲಕರಾಗಿ ಆಯ್ಕೆಯಾಗಿದ್ದು, ಇವರು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ, ಬಂಟರ ಯಾನೆ ನಾಡವರ ಮಾತೃಸಂಘದ ನಿರ್ದೇಶಕರಾಗಿರುತ್ತಾರೆ.  ಸಹ ಸಂಚಾಲಕರಾಗಿ ಆಯ್ಕೆಯಾದ ಅಜಯ್ ಆಳ್ವರವರು ಬಂಟರ ಯಾನೆ ನಾಡವರ ಮಾತೃಸಂಘದ ನಿರ್ದೇಶಕರಾಗಿರುತ್ತಾರೆ

ಸಭೆಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕರುಗಳಾದ ಕಾವು ಹೇಮನಾಥ ಶೆಟ್ಟಿ, ಕೆ.ಸೀತಾರಾಮ ರೈ ಸವಣೂರು, ಚಿಕ್ಕಪ್ಪ ನಾಕ್ ಅರಿಯಡ್ಕ. ಚಂದ್ರಹಾಸ್ ಶೆಟ್ಟಿ, ಜಯಪ್ರಕಾಶ್ ರೈ ನೂಜಿಬೈಲು, ಮಲ್ಲಿಕಾಪ್ರಸಾದ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.