ಸಂಪ್ಯ ಪೊಲೀಸರ ಕಾರ್ಯಾಚರಣೆ ಅಕ್ರಮ ಮರಳು ಸಾಗಾಟದ ಎರಡು ಲಾರಿ ವಶ -ಲಾರಿ ಚಾಲಕರಾದ ಫಾರೂಕ್ ,ಜಾಬೀರ್‌ ಬಂಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಕ್ರಮವಾಗಿ ಕೇರಳಕ್ಕೆ ಮರಳು ಸಾಗಾಟ ಮಾಡಲಾಗುತ್ತಿದ್ದೆ ಎಂಬ ಮಾಹಿತಿಯಂತೆ ಗಸ್ತು ನಿರತ ಸಂಪ್ಯ ಪೊಲೀಸರು ಅ.22ರಂದು ರಾತ್ರಿ ಎರಡು ಮರಳು ಸಾಗಾಟದ ಲಾರಿಗಳನ್ನು ವಶಕ್ಕೆ ತೆಗೆದು ಕೊಂಡು ಈರ್ವರನ್ನು ಬಂಧಿಸಿದ್ದಾರೆ.
ಕೇರಳಕ್ಕೆ ಮರಳು ಸಾಗಾಟ ಮಾಡುತ್ತಿದ್ದ ಲಾರಿ (ಕೆ.ಎ.೨೦ ಸಿ7019) ಮತ್ತು (ಕೆ.ಎಲ್. 57 ಡಿ. 438) ಎರಡು ಲಾರಿಗಳನ್ನು ಪೊಲೀಸರು ಆಲಂತಡ್ಕದಲ್ಲಿ ತಪಾಸಣೆ ನಡೆಸಿದ ವೇಳೆ ಯಾವುದೇ ಪರಾವನಿಗೆ ಇಲ್ಲದಿರುವುದು ಬೆಳಕಿಗೆ ಬಂದಿದ್ದು. ಎರಡೂ ಲಾರಿಗಳನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ. ಲಾರಿ ಚಾಲಕರಾದ ಮುಳೇರಿಯದ ಫಾರೂಕ್ ಮತ್ತು ನೆಟ್ಟಣಿಗೆಮುಡ್ನೂರಿನ ಜಾಬೀರ್‌ರವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.