ಸುಂಕದಕಟ್ಟೆಯಲ್ಲಿ ಬೈಕ್-ಓಮ್ನಿ ಡಿಕ್ಕಿ ವಿದ್ಯಾರ್ಥಿಗಳೀರ್ವರು ಸ್ಥಳದಲ್ಲೇ ಮೃತ್ಯು

Puttur_Advt_NewsUnder_1
Puttur_Advt_NewsUnder_1

3-1 3-2 3-4ಕಡಬ: ಐತ್ತೂರು ಗ್ರಾಮದ ಸುಂಕದಕಟ್ಟೆಯಲ್ಲಿ ಬೈಕ್ ಹಾಗೂ ಓಮ್ನಿ ನಡುವೆ ಅಪಘಾತ ಸಂಭವಿಸಿ ಬೈಕ್‌ನಲ್ಲಿದ್ದ ವಿದ್ಯಾರ್ಥಿಗಳಿರ್ವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಅ.23ರ ಸಂಜೆ ನಡೆದಿದೆ.ಕೊಂಬಾರು ಗ್ರಾಮದ ಚೇರು ಗೋಪಾಳಿ ನಿವಾಸಿ ರಾಮಣ್ಣ ಗೌಡ ಎಂಬವರ ಪುತ್ರ ಶ್ರೇಯಸ್(17ವ.) ಮತ್ತು ಬಗ್ಪುಣಿ ನಿವಾಸಿ ದುಗ್ಗಪ್ಪ ಗೌಡ ಎಂಬವರ ಪುತ್ರ ಲಕ್ಷ್ಮೀಶ ಮೃತಪಟ್ಟವರು. ಇವರು ಕಡಬ ಏಮ್ಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಳಾಗಿದ್ದು ಶ್ರೇಯಸ್ ದ್ವೀತಿಯ ಪಿಯುಸಿ ಹಾಗೂ ಲಕ್ಷ್ಮೀಶ 10ನೇ ತರಗತಿಯ ಟ್ಯೂಷನ್ ಪಡೆಯುತ್ತಿದ್ದರು. ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಬೆಂಗಳೂರು ಮೂಲದವರಿದ್ದ ಓಮ್ನಿ(ಕೆ.51 ಎಂ.ಜೆ.1284) ಹಾಗೂ ಕೊಂಬಾರಿನಿಂದ ಸುಂಕದಕಟ್ಟೆಯ ಮೂಲಕ ಕಡಬ ಕಡೆಗೆ ಬರುತ್ತಿದ್ದ ಬೈಕ್(ಕೆ.ಎ.11.ಡಬ್ಲ್ಯೂ.3644) ನಡುವೆ ಢಿಕ್ಕಿ ಸಂಭವಿಸಿದೆ. ಮೃತ ಲಕ್ಷ್ಮೀಶರವರು ತಂದೆ ದುಗ್ಗಪ್ಪ, ತಾಯಿ ವಾರಿಜ ಹಾಗೂ ಅಣ್ಣ ಜಯಪ್ರಕಾಶ್‌ರನ್ನು ಮತ್ತು ಶ್ರೇಯಸ್‌ರವರು ತಂದೆ ರಾಮಣ್ಣ, ತಾಯಿ ಸೀಮಾ ಮತ್ತು ತಮ್ಮ ಪುರಂದರರವರನ್ನು ಅಗಲಿದ್ದಾರೆ. ಅಪಘಾತ ನಡೆದ ಕೂಡಲೇ ಈರ್ವರನ್ನು ಕಡಬ ಸಮುದಾಯ ಆಸ್ಪತ್ರೆಗೆ 108ಆಂಬುಲೆನ್ಸ್‌ನಲ್ಲಿ ತರಲಾಗಿದ್ದು, ಈ ವೇಳೆಗೆ ಇಬ್ಬರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ನೇಹಿತರ ಜತೆ ಮದುವೆ ಕಾರ್ಯಕ್ರಮಕ್ಕೆ ಹೋಗುವ ತಯಾರಿಯಲ್ಲಿದ್ದರು: ಕಡಬ ಏಮ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯೋರ್ವರ ಮದುವೆ ಕಾರ್ಯಕ್ರಮ ಅ.24ರಂದು ಶಿವಮೊಗ್ಗದ ಎನ್,ಆರ್.ಪುರದಲ್ಲಿ ನಡೆಯಲಿರುವ ಹಿನ್ನಲೆಯಲ್ಲಿ ವಿದ್ಯಾಸಂಸ್ಥೆಯ ಕೆಲ ವಿದ್ಯಾರ್ಥಿಗಳು ರಾತ್ರಿ ಶಿವಮೊಗ್ಗಕ್ಕೆ ತೆರಳಲಿದ್ದರು, ಅದಕ್ಕಾಗಿ ಸಂಜೆ ವೇಳೆಗೆ ಮನೆಯಿಂದ ಶ್ರೇಯಸ್ ಹಾಗೂ ಲಕ್ಷ್ಮೀಶ ಒಂದೇ ಬೈಕಿನಲ್ಲಿ ಕಡಬಕ್ಕೆ ಬರುತ್ತಿದ್ದರು ಎನ್ನಲಾಗಿದೆ.
ಮನೆ ಮಂದಿಯ ಆಕ್ರಂದನ: ಎಳೆಯ ಪ್ರಾಯದ ಮಕ್ಕಳ ದಾರುಣ ಸಾವಿನ ಬಗ್ಗೆ ಅವರ ಹೆತ್ತವರು ಹಾಗೂ ಸಂಬಂಧಿಕರ ರೋಧನ ಮನಕಲಕುವಂತಿತ್ತು. ಘಟನೆಯ ಸುದ್ದಿ ತಿಳಿದೊಡನೆ ಸಾರ್ವಜನಿಕರು ಆಸ್ಪತ್ರೆಗೆ ಧಾವಿಸಿದ್ದರು.
ರಾತ್ರಿ ವೇಳೆ ರೂಂ ಬಾಯ್ ಆಗಿದ್ದ ಲಕ್ಷ್ಮೀಶ: ಬಗ್ಪುಣಿ ನಿವಾಸಿ ದುಗ್ಗಪ್ಪ ಗೌಡರ ಪುತ್ರ ಲಕ್ಷ್ಮೀಶರವರು ರಾತ್ರಿ ವೇಳೆ ಸುಬ್ರಹ್ಮಣ್ಯ ವಿಜಯ ಕಂಪಾರ್ಟ್ ಲಾಡ್ಜ್ ವೊಂದರಲ್ಲಿ ರೂಂ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದರು. ಶ್ರೇಯಸ್ ಕೂಡ ಬೇರೊಂದು ಕೆಲಸಕ್ಕೆ ಹೋಗುವರಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.