ಪುತ್ತೂರು ರೇಂಜ್ ಮಟ್ಟದ ಸುನ್ನಿ ಬಾಲವೇದಿಕೆ ಸಂಗಮ ಮಕ್ಕಳು ದಾರಿತಪ್ಪಲು ನೈತಿಕತೆಯ ಅಧಃಪತನವೇ ಕಾರಣ -ಎಸ್ ಬಿ ದಾರಿಮಿ

Puttur_Advt_NewsUnder_1
Puttur_Advt_NewsUnder_1

sunniಪುತ್ತೂರು: ಪುತ್ತೂರು ರೇಂಜ್‌ಗೆ ಒಳಪಟ್ಟ 26 ಮದರಸಗಳ ಸಮಸ್ತ ಕೇರಳ ಸುನ್ನಿ ಬಾಲವೇದಿಕೆ (ಎಸ್.ಕೆ.ಎಸ್.ಬಿ.ವಿ) ವಿದ್ಯಾರ್ಥಿಗಳ ಸಮಾವೇಶವು ಅ.23 ರಂದು ಪುತ್ತೂರು ಬದ್ರಿಯಾ ಮಸೀದಿಯ ಮದ್ರಸ ಸಭಾಂಗಣದಲ್ಲಿ ನಡೆಯಿತು. ಸಮಾವೇಶದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಎಸ್ ಪಿ ಮುಹಮ್ಮದ್ ದಾರಿಮಿರವರು ಮಾತನಾಡಿ ಇಂದಿನ ಕಲುಷಿತ ವಾತಾವರಣದಲ್ಲಿ ಜನರು ನೈತಿಕತೆಯನ್ನು ಕೈಬಿಟ್ಟು ಆಧುನಿಕತೆಯ ಪ್ರಭಾ ವಲಯದಲ್ಲಿ ಸಿಲುಕಿ ಒದ್ದಾಡುತ್ತಿದ್ದು ಇದರ ಪ್ರಭಾವ ಎಳೆಯ ಮಕ್ಕಳನ್ನು ಕೂಡ ದಾರಿ ತಪ್ಪುವಂತೆ ಮಾಡುತ್ತಿದೆ ಎಂದರು. ಈ ಬಗ್ಗೆ ಸಮಾಜ ಎಚ್ಚೆತ್ತು ಸಮಸ್ತದ ನಾಯಕತ್ವದಲ್ಲಿ ಆಯಾ ಜಮಾತರು ಮಕ್ಕಳಿಗಾಗಿ ನಡೆಸುತ್ತಿರುವ ಮದ್ರಸಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಿ ಸುನ್ನಿ ಬಾಲವೇದಿ ಯಂತಹ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದು ಅವರು ಹೇಳಿದರು. ಸಮಾರಂಭವನ್ನು ರೇಂಜ್ ಜಮೀಯತುಲ್ ಮುಲ್ಲಿಮೀನ್‌ನ ಕಾರ್ಯದರ್ಶಿ ಬಶೀರ್ ದಾರಿಮಿಯವರು ಉದ್ಘಾಟಿಸಿದರು. ಜಂ ಇಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಆಸಿಫ್ ಅಝ್ಹರಿರವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಇಬ್ರಾಹಿಂ ದಾರಿಮಿ ಪುಣಚ , ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಅಜಾದ್ ಉಪಸ್ಥಿತರಿದ್ದರು. ಸಭೆಯಲ್ಲಿ ಹನೀಫ್ ದಾರಿಮಿ ಪಡೀಲ್, ಹನೀಫ್, ಹನೀಫಿ ಬೊಳುವಾರ್, ಹಮೀದ್ ಮುಸ್ಲಿಂಯಾರ್, ನಿಜಾಮ್ ದಾರಿಮಿ ಉಜ್ರುಪಾದೆ, ಅಬೂಬಕ್ಕರ್ ಮುಸ್ಲಿಯಾರ್ ಪೋಳ್ಯ, ಹಮೀದ್ ಮುಸ್ಲಿಯಾರ್ ಪರ್ಲಡ್ಕ, ಸಿದ್ದಿಕ್ ಅಝ್ಝರಿ ಕಲ್ಲೇಗ, ಶರೀಫ್ ದಾರಿಮಿ ಸಾಲ್ಮರ, ಇಬ್ರಾಹಿಂ ಮುಸ್ಲಿಯಾರ್ ಸಲ್ಮಾರ, ಉಮ್ಮರ್ ಯಮಾನಿ ಕಾರ್ಜಾಲ್, ನಸೀರ್ ಅರ್ಷದಿ ಪರ್ಲಡ್ಕ ಉಪಸ್ಥಿತರಿದ್ದರು. ಎಸ್‌ಕೆಎಸ್‌ಬಿವಿ ಚೇರ್‌ಮ್ಯಾನ್ ಕೆ ಎಮ್ ಎ ಕೋಡುಂಗಾಯಿ ಸ್ವಾಗತಿಸಿ ಕನ್ವೀನರ್ ಬಶೀರ್ ಅಝ್ಹರಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.