Breaking News

ಅ.25: ಮಂಜುನಾಥನಗರದಲ್ಲಿ ವಿಚಾರ ಸಂಕಿರಣ

Puttur_Advt_NewsUnder_1
Puttur_Advt_NewsUnder_1

ಸವಣೂರು:ಶ್ರೀ.ಕ್ಷೇ.ಧ.ಗ್ರಾ.ಯೋ ಅರಿಯಡ್ಕ ವಲಯ,ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ  ಸಂಸ್ಥೆ ಪ್ರಾಂತೀಯ ಕ್ಷೇತ್ರ ವಿಟ್ಲ, ಗ್ರಾ.ಪಂ.ಸವಣೂರು, ಹಾಲು ಉತ್ಪಾದಕರ ಸಹಕಾರ ಸಂಘ ಕೆಯ್ಯೂರು, ಸಿದ್ದಿನಾಯಕ ಸೇವಾ ಸಂಘ ಮಂಜುನಾಥನಗರ, ಚೈತನ್ಯ ರೈತಶಕ್ತಿ ಗುಂಪು ಪಾಲ್ತಾಡಿ, ಗ್ರಾಮವಿಕಾಸ ಪ್ರತಿಷ್ಠಾನ ಪಾಲ್ತಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅ.25ರಂದು ಪಾಲ್ತಾಡಿಯ ಮಂಜುನಾಥನಗರ ಸಿದ್ದಿವಿನಾಯಕ ಸಭಾಭವನದಲ್ಲಿ ಅಧಿಕ ಆದಾಯಕ್ಕಾಗಿ ಅಡಿಕೆ ಮತ್ತು ತೆಂಗು ಬೆಳೆಗಳಲ್ಲಿ ಮಿಶ್ರಬೆಳೆ ಪದ್ದತಿ ಹಾಗೂ ರಾಸುಗಳಿಗೆ ಕೃತಕ ಗರ್ಭಧಾರಣಾ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿಚಾರ ಸಂಕಿರಣ ನಡೆಯಲಿದೆ.

ಕಾರ್ಯಕ್ರಮವನ್ನು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಉದ್ಘಾಟಿಸುವರು. ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್ ಅಧ್ಯಕ್ಷತೆ ವಹಿಸುವರು.

ವಿಚಾರ ಸಂಕಿರಣ: ನಂತರ ನಡೆಯುವ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮನೋಜ್ ಮಿನೇಜಸ್, ವಿಟ್ಲ ಸಿಪಿಸಿಆರ್‌ಐನ ವಿಷಯ ತಜ್ಞ ಡಾ.ನಾಗರಾಜ್, ಕೆಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಚಂದ್ರಹಾಸ ರೈ ಮಾಹಿತಿ ನೀಡುವರು.

ವಿಶೇಷ ಮಳಿಗೆಗಳು : ಕೃಷಿಗೆ ಸಂಬಂಧಿಸಿದ ವಸ್ತು ಪ್ರದರ್ಶನಗಳು, ಅಣಬೆ ಕೃಷಿ ಮಾಡುವ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿಯ ಪ್ರದರ್ಶನ,ಕೃಷಿ ಉತ್ಪನ್ನಗಳ ಪ್ರದರ್ಶನ, ಸೋಲಾರ್ ಹಾಗೂ ವಾಟರ್ ಹೀಟರ್ ಘಟಕಗಳ ಪ್ರದರ್ಶನ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.