ವಿಟ್ಲ ಟೌನ್ ಮಸೀದಿಯಲ್ಲಿ  ರೇಂಜ್ ಕಾನ್ಫರೆನ್ಸ್, ಎಸ್‌ಬಿಎಸ್ ಬಾಲ ಮುನ್ನಡೆಯ ಸಮಾರೋಪ

Puttur_Advt_NewsUnder_1
Puttur_Advt_NewsUnder_1

vittla

ವಿಟ್ಲ: ಎಸ್‌ಇಡಿಸಿ ಸ್ಪಟಿಕ ಸಂಭ್ರಮದ ಪ್ರಯುಕ್ತ ವಿಟ್ಲ ಟೌನ್ ಮಸೀದಿ ವಠಾರದಲ್ಲಿ ಅ.22ರಂದು ವಿಟ್ಲ ರೇಂಜ್ ಕಾನ್ಫರೆನ್ಸ್ ಹಾಗೂ ಎಸ್‌ಬಿಎಸ್ ಬಾಲ ಮುನ್ನಡೆಯ ಸಮಾರೋಪ ಸಮಾರಂಭ ನಡೆಯಿತು.

ಬಂಟ್ವಾಳ ತಾಲ್ಲೂಕು ಎಸ್‌ಜೆಯು ಪ್ರಧಾನ ಕಾರ್ಯದರ್ಶಿ ಜಿ.ಎಂ ಅಬೂಬಕ್ಕರ್ ಸುನ್ನೀ ಫೈಝಿ ದುವಾ ಆಶೀರ್ವಚನ ನೀಡಿದರು. ಬಂಟ್ವಾಳ ತಾಲ್ಲೂಕು ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಶೈಖುನಾ ಮಹಮೂದುಲ್ ಫೈಝಿ ಓಲೆಮುಂಡೋವ್  ಉದ್ಘಾಟಿಸಿದರು. ಸ್ವಾಗತ ಸಮಿತಿ ಗೌರವಾಧ್ಯಕ್ಷ ಸಯ್ಯಿದ್ ಮುಹಮ್ಮದ್ ಹಬೀಬ್ ಪೂಕೋಯ ತಂಙಳ್ ಪೆರುವಾಯಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಸ್‌ಎಫ್ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್,ಮುಹ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ ಉಪಸ್ಥಿತರಿದ್ದರು.

ಉಮರ್ ಸಖಾಫಿ ಕಂಬಳಬೆಟ್ಟು, ಮುಹಮ್ಮದಾಲಿ ಫೈಝಿ ಬಾಳೆಪುಣಿ, ಇಬ್ರಾಹಿಂ ಫೈಝಿ ಕನ್ಯಾನ, ಅಹ್ಮದ್ ಶರೀಫ್ ಕಾಮಿಲ್ ಸಖಾಫಿ, ಅಬ್ದುಲ್ ಮಜೀದ್ ಮದನಿ, ವಿ.ಎಂ ಅಬೂಬಕ್ಕರ್ ಸಖಾಫಿ, ಕೆ.ಎಂ ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ, ಅಬ್ದುರ್ರಹ್ಮಾನ್ ಸಅದಿ ಕೋಲ್ಪೆ, ಅಬ್ದುಲ್ ಖಾದರ್ ಫೈಝಿ, ರಶೀದ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯ ಅಬ್ದುರ್ರಹ್ಮಾನ್ ನೆಲ್ಲಿಗುಡ್ಡೆ ಉಪಸ್ಥಿತರಿದ್ದರು.ಬೆಳಿಗ್ಗೆ ಮುಅಲ್ಲಿಂ ಮುಲಾಖಾತ್, ಮ್ಯಾನೇಜ್‌ಮೆಂಟ್ ಮೀಟ್, ಬಾಲಮುನ್ನಡೆ ಬಳಿಕ ವಿದ್ಯಾರ್ಥಿಗಳಿಂದ ರ‍್ಯಾಲಿ ನಡೆಯಿತು. ಇಸ್ಮಾಯಿಲ್ ಮಾಸ್ಟರ್ ಮಂಗಳಪದವು ಸ್ವಾಗತಿಸಿದರು. ಅಬ್ದುಲ್ ಸಲೀಂ ಹಾಜಿ ವಂದಿಸಿದರು. ರಿಯಾಜ್ ಬೈರಿಕಟ್ಟೆ, ಹನೀಫ್ ಸಖಾಫಿ ಪೆರುವಾಯಿ, ಅಬ್ದುಲ್ ಸಲಾಂ ಅಳಿಕೆ  ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.