ಪುತ್ತೂರಿನಲ್ಲಿ ಸುವಿಚಾರ ಪ್ರಕಾಶನ ಸಂಸ್ಥೆ ರಚನೆ ; ಸಂಚಾಲಕರಾಗಿ ಹಕೀಂ ಪದಡ್ಕ ಆಯ್ಕೆ

Puttur_Advt_NewsUnder_1
Puttur_Advt_NewsUnder_1

hakeemಪುತ್ತೂರು: ಸಾಹಿತ್ಯ ಪ್ರೇಮಿಗಳು ಹಾಗೂ ಬರಹಗಾರರನ್ನೊಳಗೊಂಡ ೞಸುವಿಚಾರ ಪ್ರಕಾಶನ ಸಂಸ್ಥೆ’ಯನ್ನು ಪುತ್ತೂರಿನಲ್ಲಿ ರಚಿಸಲಾಗಿದ್ದು ಅದರ ಸಂಚಾಲಕರಾಗಿ ಲುಕುಮಾನುಲ್ ಹಕೀಂ ಪದಡ್ಕ ಆಯ್ಕೆಗೊಂಡಿದ್ದಾರೆ. ಅ.22ರಂದು ದಿನೇಶ ಭವನದ ಸುದ್ದಿ ಸಭಾಂಗಣದಲ್ಲಿ ನಡೆದ ಸುವಿಚಾರ ಪ್ರಕಾಶನ  ಸಭೆಯಲ್ಲಿ ಈ ಆಯ್ಕೆ ನಡೆಸಲಾಗಿದೆ. ಸಹ ಸಂಚಾಲಕರಾಗಿ ನಿಝಾಂ ಗೋಳಿಪಡ್ಪು, ಹಸನ್ ಸಫ್ವಾನ್ ಬಡಗನ್ನೂರು, ಹಸನ್ ಮಾಡೂರು, ಬಾಪು ಅಮ್ಮೆಂಬಳ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಗಝ್ಝಾಲಿ, ಇರ್ಝಾನ್ ಅಡ್ಡೂರು, ಕೀರ್ತನ್ ಮಯ್ಯಳ, ಸಫ್ವಾನ್ ಸವಣೂರು, ಲುಕುಮಾನ್ ಅಡ್ಕಾರ್ ಆಯ್ಕೆಗೊಂಡರು.

ಮುಂಬರುವ ಡಿಸೆಂಬರ್‌ನಲ್ಲಿ ಪ್ರಕಾಶನ ಸಂಸ್ಥೆಯ ಉದ್ಘಾಟನಾ ಸಮಾರಂಭ, ಪುಸ್ತಕ ಬಿಡುಗಡೆ, ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಮೊದಲಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.