Breaking News

ಮಂಗಳೂರು ಅರಣ್ಯ ಸಂಚಾರಿ ದಳದ ಯಶಸ್ವಿ ಕಾರ್ಯಾಚಾರಣೆ ಶಿಬಾಜೆಯಲ್ಲಿ ಮನೆಯೊಂದರಲ್ಲಿ ಬೀಟೆ ಸಹಿತ ಭಾರೀ ಮರ ದಾಸ್ತಾನು ಪತ್ತೆ

Puttur_Advt_NewsUnder_1
Puttur_Advt_NewsUnder_1

6-1 6-2 6-3

36 ದಿಮ್ಮಿ ಬೀಟೆ, 36 ಬೇಂಗ, 39 ಹಲಸು ದಿಮ್ಮಿ 10 ಲಕ್ಷಕ್ಕೂ ಅಧಿಕ ಮೌಲ್ಯದ ಮರ ವಶಕ್ಕೆ ಆರೋಪಿ ಸುಬ್ರಹ್ಮಣ್ಯ ಪಿಡಬ್ಲ್ಯುಡಿ ಚಾಲಕ ಅಣ್ಣು ಮುಗೇರ ಬಂಧನ
ಉಪ್ಪಿನಂಗಡಿ ಅರಣ್ಯ ಇಲಾಖೆ ವಿರುದ್ಧ ಸಂಶಯ..!! ಇಷ್ಟೊಂದು ಬೃಹತ್ ಮಟ್ಟದಲ್ಲಿ ಅರಣ್ಯ ಲೂಟಿ ಆಗುತ್ತಿದ್ದರೂ, ತನ್ನ ವ್ಯಾಪ್ತಿಯ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಮಾತ್ರ ಕೈಚೆಲ್ಲಿ ಕುಳಿತಂತಿದೆ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. 2ದಿನಗಳ ಹಿಂದೆ ಈ ಪ್ರಕರಣದ ಬಗ್ಗೆ ಸ್ಥಳೀಯ ಅರಣ್ಯ ಅಧಿಕಾರಿಗೆ ಮತ್ತು ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗೆ ಮಾಹಿತಿ ರವಾನೆ ಆಗಿತ್ತು ಎಂದು ಹೇಳಲಾಗಿದ್ದು, ಇವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಹೇಳಲಾಗಿದೆ. ಸ್ಥಳೀಯ ಅರಣ್ಯಾಧಿಕಾರಿಗಳ ವರ್ತನೆಯ ಬಗ್ಗೆಯೇ ಸ್ಥಳೀಯರಲ್ಲಿ ದಟ್ಟ ಸಂಶಯ ವ್ಯಕ್ತವಾಗಿದ್ದು, ಕಳೆದ ಹಲವು ಸಮಯಗಳಿಂದಲೂ ಇಲ್ಲಿ ಮರಗಳ ಅಕ್ರಮ ಸಾಗಾಟವು ಅರಣ್ಯ ಇಲಾಖೆಯ ನೇರ ಸಹಭಾಗಿತ್ವದಲ್ಲಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದ್ದು, ಈ ಪ್ರಕರಣ ಸಾಕ್ಷೀಕರಿಸುವಂತಿದೆ ಎಂದು ಸಾರ್ವಜನಿಕರಿಂದ ಅಭಿಪ್ರಾಯ ವ್ಯಕ್ತವಾಗಿದೆ.
ಇಲಾಖೆ ವಾಹನದಲ್ಲಿ ಮರ ಸಾಗಾಟ ನಡೆಯುತ್ತಿತ್ತು?
ಬಂಧಿತ ಆರೋಪಿಯ ಮನೆಯಂಗಳದಲ್ಲಿ ಇಲಾಖಾ ವಾಹನವನ್ನು ರಜೆ ದಿನಗಳಲ್ಲೂ ನಿಲ್ಲಿಸಲಾಗುತ್ತಿತ್ತು. ಈ ಹಿಂದಿನಿಂದಲೂ ಹಲವು ಬಾರಿ ಮರದ ವ್ಯವಹಾರ ನಡೆಸಿದ್ದರೆನ್ನಲಾಗಿದ್ದು, ಮರದ ದಿಮ್ಮಿಗಳನ್ನು ಇಲಾಖೆಯ ಜೀಪಿನಲ್ಲಿ ಸಾಗಿಸುತ್ತಿದ್ದ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದು, ಇದರ ಸಲುವಾಗಿಯೇ ಇಲಾಖೆಯ ವಾಹನ ಮನೆ ಅಂಗಳದಲ್ಲಿ ನಿಲ್ಲಿಸುತ್ತಿದ್ದರಬೇಕು ಎಂಬ ಮಾತುಗಳು ವ್ಯಕ್ತವಾಗಿದೆ.
ಉಪ್ಪಿನಂಗಡಿ: ಮಂಗಳೂರು ಸಂಚಾರಿ ದಳ ಪೊಲೀಸರು ನಡೆಸಿದ ಯಶಸ್ವಿ ಕಾರ್‍ಯಾಚರಣೆಯಲ್ಲಿ ಸರ್ಕಾರಿ ರಕ್ಷಿತಾರಣ್ಯದಿಂದ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಬೀಟೆ ಸಹಿತ ಉತ್ತಮ ಜಾತಿಯ ಮರಗಳನ್ನು ಕಡಿದು ಸೈಜು ಮಾಡಿ ಮನೆಯಲ್ಲಿ ದಾಸ್ತಾನು ಇರಿಸಿಕೊಂಡಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿ ಸೊತ್ತು ವಶಕ್ಕೆ ತೆಗೆದುಕೊಂಡು ಆರೋಪಿಯನ್ನು ಬಂಧಿಸಿ ಕೇಸು ದಾಖಲಿಸಿದ್ದಾರೆ.
ಶಿಬಾಜೆ ಗ್ರಾಮದ ಬಂಗೇರಡ್ಕ ಎಂಬಲ್ಲಿ ಸರ್ಕಾರಿ ರಕ್ಷಿತಾರಣ್ಯದಿಂದ ಬೃಹತ್ ಗಾತ್ರದ ಬೀಟೆ ಮರ, ಬೇಂಗ ಮತ್ತು ಹಲಸು ಜಾತಿಯ ಹಲವಾರು ಮರಗಳನ್ನು ಅಕ್ರಮವಾಗಿ ಕಡಿದು ಹಲಗೆ, ತುಂಡುಗಳನ್ನಾಗಿ ಮಾಡಿ ಮನೆಯಲ್ಲಿ ದಾಸ್ತಾನು ಇರಿಸಿ, ಸಾಗಾಟಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದ ಪ್ರಕರಣ ಇದಾಗಿದ್ದು, ಮಂಗಳೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸದಾಶಿವ ಭಟ್ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ 111 ಸೈಜು ಮರಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದೆ.
ಪ್ರಕರಣದ ಬಂಧಿತ ಆರೋಪಿ ಸುಬ್ರಹ್ಮಣ್ಯ ಲೋಕೋಪಯೋಗಿ ಇಲಾಖೆ ಜೀಪು ಚಾಲಕ, ಶಿಬಾಜೆ ಗ್ರಾಮದ ಬಂಗೇರಡ್ಕ ನಿವಾಸಿ ಚಂರ್ಬ ಮುಗೇರರ ಎಂಬವರ ಪುತ್ರ ಅಣ್ಣು ಮುಗೇರ ಯಾನೆ ಶೀನ ಮುಗೇರ ಎಂಬಾತನಾಗಿರುತ್ತಾನೆ.
36 ದಿಮ್ಮಿ ಬೀಟೆ, 36 ಬೇಂಗ, 39 ಹಲಸು ದಿಮ್ಮಿ: ಆರೋಪಿ ಸರ್ಕಾರಿ ರಕ್ಷಿತಾರಣ್ಯದಿಂದ ಮರಗಳನ್ನು ಕಡಿದು ಸೈಜುಗಳನ್ನಾಗಿ ಮಾಡಿಸಿ ತನ್ನ ಮನೆಯಲ್ಲಿ ಅಕ್ರಮವಾಗಿ ಇರಿಸಿಕೊಂಡಿದ್ದು, ಈ ಪೈಕಿ 36ದಿಮ್ಮಿ ಬೀಟೆ ಮರ, 36 ದಿಮ್ಮಿ ಬೇಂಗದ ಮರ, 39 ದಿಮ್ಮಿ ಹಲಸು ಜಾತಿಯ ಮರದ ದಿಮ್ಮಿಗಳು ಸೇರಿದಂತೆ ಇತರೆ ಹಲವಾರು ಜಾತಿಯ ಮರದ ಹಲಗೆಗಳು ಪತ್ತೆ ಆಗಿದ್ದು, ಇವೆಲ್ಲವನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಎಲ್ಲ ಮರಗಳ ಒಟ್ಟು ಮೌಲ್ಯ ಸುಮಾರು 10 ಲಕ್ಷಕ್ಕೂ ಅಧಿಕ ಎಂದು ಮಂಗಳೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸದಾಶಿವ ಭಟ್ ಸುದ್ದಿಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಹಲ್ಲೆಗೆ ಯತ್ನ, ಪೊಲೀಸ್ ಸಹಾಯದಿಂದ ಬಂಧನ: ಆರೋಪಿ ತನ್ನ ಮನೆಯಲ್ಲಿ ಸರ್ಕಾರಿ ರಕ್ಷಿತಾರಣ್ಯದಿಂದ ಮರಗಳನ್ನು ಕಡಿದು ದಾಸ್ತಾನು ಇರಿಸಿದ್ದಾನೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಆದರೆ ಅಧಿಕಾರಿ ತಂಡ ಧಾಳಿಗೆ ಮುಂದಾದಾಗ ಆರೋಪಿ ಕತ್ತಿ ಹಿಡಿದು ಹಲ್ಲೆಗೆ ಯತ್ನಿಸಿದ್ದು, ಅದಾಗ್ಯೂ ನಾನು ದಲಿತ, ನಿಮ್ಮನ್ನೆಲ್ಲರ ಮೇಲೆ ದಲಿತ ದೌರ್ಜನ್ಯ ಕೇಸು ನೀಡುತ್ತೇನೆ ಎಂದು ಬೆದರಿಸಿದ್ದು, ಬಳಿಕ ಧರ್ಮಸ್ಥಳ ಪೊಲೀಸರ ಸಹಕಾರ ಪಡೆದುಕೊಂಡು ಆರೋಪಿಯನ್ನು ಬಂಧಿಸಿರುವುದಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಸಂಚಾರಿ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸದಾಶಿವ ಭಟ್ ನೇತೃತ್ವದಲ್ಲಿ ನಡೆದ ಕಾರ್‍ಯಾಚರಣೆಯಲ್ಲಿ ಸಂಚಾರಿ ದಳದ ವಲಯ
ಅರಣ್ಯಾಧಿಕಾರಿ ಬಾಲಕೃಷ್ಣ ಆಚಾರ್, ಎಸ್. ವಿನೋದ್ ಗೌಡ, ಅಶ್ವಿತ್ ಗಟ್ಟಿ, ಪ್ರಮೋದ್, ಸೀತಾರಾಮ್, ಸಂದೀಪ್ ಸಿ.ಕೆ., ಪ್ರಶಾಂತ್, ಸಂಚಾರಿ ದಳದ ಚಾಲಕ
ಜಯಪ್ರಕಾಶ್, ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ಸಂಧ್ಯಾ, ಸಿಬ್ಬಂದಿಗಳಾದ ಪ್ರಶಾಂತ್, ಜಯಕುಮಾರ್ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.