Breaking News

ಕುಂಬ್ರ: ಎಂ.ಎ ಆರ್ಕೇಡ್ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

4 3 1

2 ma-arkade-kumbra

ಕುಂಬ್ರದ ಅಭಿವೃದ್ಧಿಗೆ ಎಂ.ಎ ಆರ್ಕೇಡ್ ಪೂರಕ-ಗಣ್ಯರ ಅಭಿಮತ

ಪುತ್ತೂರು: ಕುಂಬ್ರ ಹೃದಯಭಾಗದಲ್ಲಿ ತಲೆ ಎತ್ತಿರುವ ವಾಣಿಜ್ಯ ಮಳಿಗೆ ಹಾಗೂ ವಸತಿ ಸಮುಚ್ಚಯಗಳನ್ನೊಳಗೊಂಡ ‘ಎಂ.ಎ ಆರ್ಕೇಡ್‌’ನ ಉದ್ಘಾಟನಾ ಸಮಾರಂಭವು ಅ.24ರಂದು ನಡೆಯಿತು. ಅಸ್ಸಯ್ಯದ್ ಫಝಲ್ ಶಿಹಾಬ್ ತಂಙಳ್ ಮಲಪ್ಪುರಂ ಅವರು ಆರ್ಕೇಡ್‌ನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ದುವಾ ಮಾಡಿದರು.

ಅಭಿವೃದ್ಧಿಗೆ ಪೂರಕ: ಎಂ.ಎಸ್ ಮುಹಮ್ಮದ್: ಕೊಳ್ನಾಡು ಕ್ಷೇತ್ರದ ಜಿ.ಪಂ ಸದಸ್ಯ ಎಂ.ಎಸ್ ಮುಹಮ್ಮದ್ ಮಾತನಾಡಿ ಯಾವುದೇ ಒಂದು ಪ್ರದೇಶ ಅಭಿವೃದ್ದಿ ಹೊಂದಬೇಕಾದರೆ ಅಲ್ಲಿ ವಾಣಿಜ್ಯ ಮಳಿಗೆಗಳು ಅತ್ಯಾವಶ್ಯಕ, ಈ ನಿಟ್ಟಿನಲ್ಲಿ ಇಲ್ಲಿ ನಿರ್ಮಾಣಗೊಂಡಿರುವ ಎಂ.ಎ ಆರ್ಕೇಡ್ ಯಶಸ್ವಿಯಾಗಲಿದೆ ಎಂದರು. ಹೃದಯ ಶ್ರೀಮಂತಿಕೆಯಿರುವ ಜನರಿರುವ ಕುಂಬ್ರದಲ್ಲಿ ಇಂತಹ ಕಟ್ಟಡಗಳು ತಲೆ ಎತ್ತಿರುವುದರಿಂದ ಕುಂಬ್ರದ ಅಭಿವೃದ್ದಿಗೆ ಇದು ಪೂರಕವಾಗಿದೆ ಎಂದರು. ವ್ಯಾಪಾರ ವ್ಯವಹಾರದ ಜೊತೆಗೆ ಬಡವರ ಕಣ್ಣೀರೊರೆಸುವ ಕಾರ್ಯವನ್ನೂ ಇದರ ಮಾಲಕ ಮಮ್ಮಾಲಿ ಹಾಜಿ ಮಾಡುತ್ತಿದ್ದಾರೆ ಹಾಗಾಗಿಯೇ ಅವರು ಜನಪ್ರಿಯತೆ ಗಳಿಸಿದ್ದಾರೆ ಎಂದು ಹೇಳಿದರು.

ಪರಿಶ್ರಮವಿದ್ದರೆ ಮಾತ್ರ ಯಶಸ್ಸು ಸಾಧ್ಯ: ಅಬ್ದುಲ್ ಲತೀಫ್: ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಮಾತನಾಡಿ ಪ್ರತಿಭೆ ಇದೆ ಎಂದ ಮಾತ್ರಕ್ಕೆ ಯಾರೂ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯವಿಲ್ಲ, ಪ್ರತಿಭೆಗಿಂತಲೂ ಮಿಗಿಲಾಗಿ ಪರಿಶ್ರಮವಿದ್ದರೆ ಮಾತ್ರ ಯಶಸ್ಸು ಗಳಿಸಬಹುದು, ಅದಕ್ಕೆ ಎಂ.ಎ ಆರ್ಕೇಡ್ ಮಾಲಕ ಮಮ್ಮಾಲಿ ಹಾಜಿ ಪ್ರತ್ಯಕ್ಷ ಸಾಕ್ಷಿ ಎಂದರು. ಯಾವುದೇ ಕ್ಷೇತ್ರದಲ್ಲಿ ಯಶಸ್ಸಿನ ಮೂಲ ಪರಿಶ್ರಮವೇ ಆಗಿದ್ದು ನಮ್ಮ ಪರಿಶ್ರಮದ ಮೇಲೆ ಯಶಸ್ಸು ಅಡಗಿರುತ್ತದೆ ಇದನ್ನು ನಾವು ಮೊದಲು ತಿಳಿದುಕೊಳ್ಳಬೇಕಾಗಿದೆ ಎಂದರು.

ಉತ್ತಮ ಸೇವೆ ಸಿಗಲಿ: ಎಸ್ಸೈ ಖಾದರ್: ಸಂಪ್ಯ ಠಾಣಾ ಉಪನಿರೀಕ್ಷಕ ಅಬ್ದುಲ್ ಖಾದರ್ ಮಾತನಾಡಿ ಎಂ.ಎ ಆರ್ಕೆಡ್‌ನಿಂದ ಎಲ್ಲರಿಗೂ ಉತ್ತಮ ಸೇವೆ ಸಿಗುವಂತಾಗಲಿ, ಸಂಸ್ಥೆ ಇನ್ನಷ್ಟು ಉತ್ತುಂಗಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಎಲ್ಲರಿಗೂ ಲಾಭ: ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ: ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದಿಶ್ ಶೆಟ್ಟಿ ಮಾತನಾಡಿ ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗುವುದರಿಂದ ಕೇವಲ ಅದರ ಮಾಲಕರಿಗೆ ಮಾತ್ರ ಲಾಭವಲ್ಲ ಬದಲಾಗಿ ಅಲ್ಲಿ ವ್ಯವಹಾರ ನಡೆಸುವವರಿಗೆ ಮತ್ತು ಕೆಲಸ ಮಾಡುವ ಹಲವರಿಗೆ ಲಾಭವಾಗುತ್ತದೆ ಇದು ಪ್ರದೇಶವೊಂದರ ಅಭಿವೃದ್ದಿಗೆ ಕಾರಣವಾಗುತ್ತದೆ ಎಂದರು. ಇತ್ತೀಚಿನ ವರ್ಷಗಳಲ್ಲಿ ಕುಂಬ್ರ ಪೇಟೆ ಅಭಿವೃದ್ದಿ ಹೊಂದುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಅಭಿವೃದ್ದಿಗೆ ಪೂರಕ: ಹೇಮನಾಥ ಶೆಟ್ಟಿ: ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಕುಂಬ್ರ ಮಾತ್ರವಲ್ಲದೇ ಈ ಭಾಗದ ಸರ್ವತೋಮುಖ ಅಭಿವೃದ್ದಿಗೆ ಎಂ.ಎ ಆರ್ಕೇಡ್ ಪೂರಕವಾಗಿದೆ ಎಂದರು. ಪ್ರದೇಶವೊಂದರ ಅಭಿವೃದ್ದಿಯಾಗಬೇಕಾದರೆ ಅಲ್ಲಿ ಎಲ್ಲ ವ್ಯವಸ್ಥೆಗಳು ಇರುಬೇಕಾಗಿರುವುದು ಅವಶ್ಯಕವಾಗಿದೆ ಎಂದು ಅವರು ಹೇಳಿದರು.

ಹಣವನ್ನು ಸಮಾಜಮುಖಿಯಾಗಿ ವ್ಯಯಿಸಬೇಕು: ದಾರಿಮಿ: ಕುಂಬ್ರ ಕೆಐಸಿ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ಶ್ರೀಮಂತರು ತಮ್ಮ ಹಣವನ್ನು ಬಚ್ಚಿಡದೆ ಅದನ್ನು ಸಮಾಜಮುಖಿಯಾಗಿ ವಿನಿಯೋಗಿಸಬೇಕು ಎಂದು ಹೇಳಿದರು. ವಾಣಿಜ್ಯ ಮಳಿಗೆಗಳಂತ ಸಂಸ್ಥೆಗಳು ಒಂದು ಊರಿನಲ್ಲಿ ನಿರ್ಮಾಣವಾದರೆ ಇಡೀ ಪ್ರದೇಶವೇ ಅಭಿವೃದ್ದಿಯಾಗುತ್ತದೆ ಎಂದು ಅವರು ಹೇಳಿದರು. ಜೆಸಿಐ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಪುರಂದರ ರೈ ಮುಕ್ರಂಪಾಡಿ ಮಾತನಾಡಿ ಕುಂಬ್ರ ಎಂಬ ಸಂಗಮ ಕ್ಷೇತ್ರಕ್ಕೆ ಎಂ.ಎ ಆರ್ಕೇಡ್ ಅತೀ ಅಗತ್ಯವಾಗಿತ್ತು ಎಂದು ಹೇಳಿ ಶುಭ ಹಾರೈಸಿದರು. ಇಂಜಿನಿಯರ್ ವೆಂಕಟರಾಜ್ ಬಿ.ಇ, ಸುಳ್ಯ ನಗರಪಂಚಾಯತ್ ಸದಸ್ಯ ಕೆ.ಎಸ್ ಉಮ್ಮರ್ ಸಮಯೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.ಅಧ್ಯಕ್ಷತೆಯನ್ನು ಎಂ.ಎ ಆರ್ಕೇಡ್‌ನ ಮಾಲಕ ಹಾಜಿ ಕೆ ಮಮ್ಮಾಲಿ ಬೆಳ್ಳಾರೆ ವಹಿಸಿದ್ದರು.

ವೇದಿಕೆಯಲ್ಲಿ ಸಯ್ಯದ್ ಅಹ್ಮದ್ ಕೋಯ ತಂಙಳ್ ಮಲಪ್ಪುರಂ, ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಖತೀಬ್ ತಾಜುದ್ದೀನ್ ರಹ್ಮಾನಿ, ಹಸನ್ ಅರ್ಶದಿ ಬೆಳ್ಳಾರೆ, ಇಸ್ಮಾಯಿಲ್ ಹಾಜಿ ನೆಟ್ಟಾರ್ ಒಳಮೊಗ್ರು ಗ್ರಾ.ಪಂ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ, ಇಸ್ಮಾಯಿಲ್ ಹಾಜಿ ಬೆಳ್ಳಾರೆ, ವಕ್ಫ್ ಬೊರ್ಡ್ ದ.ಕ ಜಿಲ್ಲಾ ಸದಸ್ಯ ಕೆ.ಎಂ ಮುಹಮ್ಮದ್ ಹಾಜಿ, ಮಾಜಿ ಜಿ.ಪಂ ಸದಸ್ಯ ಚಂದ್ರಶೇಖರ ಕಾಮತ್, ಹಾಜಿ ಪಿ ಇಸಾಕ್ ಸಾಹೇಬ್ ಪಾಜಪಳ್ಳ, ರಾಜ್ಯ ಕೌಶಲ್ಯ ಅಭಿವೃದಿ ನಿರ್ದೇಶಕರಾದ ರಾಜೀವಿ ಆರ್ ರೈ, ಬೆಳ್ಳಾರೆ ಗ್ರಾ.ಪಂ ಮಾಜಿ ಅಧ್ಯಕ್ಷ ಮಾಧವ ಗೌಡ, ಸುಳ್ಯ ತಾ.ಪಂ ಮಾಜಿ ಸದಸ್ಯ ಅನಿಲ್ ರೈ, ಕೆಯ್ಯೂರು ಗ್ರಾ.ಪಂ ಸದಸ್ಯ ಹಾಜಿ ಅಬ್ದುಲ್ ಖಾದರ್ ಮೇರ್ಲ, ಯು.ಎಚ್ ಅಬೂಬಕ್ಕರ್ ಬೆಳ್ಳಾರೆ, ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಂ ಮುಸ್ತಫಾ, ಸುಳ್ಯ ಜೆಡಿಎಸ್ ಅಧ್ಯಕ್ಷ ದಯಾಕರ ಆಳ್ವ ಕುಂಬ್ರ, ಬೆಳ್ಳಾರೆ ಹಿದಾಯ ಎಜುಕೇಶನ್  ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಒಳಮೊಗ್ರು ಗ್ರಾ.ಪಂ ಸದಸ್ಯ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಬೆಳ್ಳಾರೆ ವಾಣಿಜ್ಯ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಸದಸ್ಯ ರಾಜೇಶ್ ಶ್ಯಾನ್‌ಬಾಗ್, ಕುಂಬ್ರ ಎಸ್‌ಸಿಡಿಸಿಸಿ ಬ್ಯಾಂಕ್ ಮೆನೇಜರ್ ಹರೀಶ್ ರೈ,  ಸುರೇಶ್ ಕುಮಾರ್ ರೈ ಪನ್ನೆ, ಶಮ್ಮೂನ್ ಪರ್ಲಡ್ಕ, ಮಂಜಪ್ಪ ರೈ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸಿದ್ದಿಕ್ ಕೆ.ಎ, ಅಬ್ದುಲ್ ಹಮೀದ್ ದಾರಿಮಿ ಮತ್ತಿತರ ನೂರಾರು ಮಂದಿ ಉಪಸ್ಥಿತರಿದ್ದರು. ಅಬ್ದುಲ್ ಬಶೀರ್ ಬೆಳ್ಳಾರೆ ಅತಿಥಿಗಳನ್ನು ಸ್ವಾಗತಿಸಿದರು. ಖಲಂದರ್ ಶಾಫಿ ಎಂಬಿಎ ಕೃತಜ್ಞತೆ ಸಲ್ಲಿಸಿದರು. ಇಕ್ಬಾಲ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಬಿ.ಎ ಮುಹಮ್ಮದ್ ಶರೀಫ್ ಹಾಗೂ ಮುನೀರ್ ಬೆಳ್ಳಾರೆ ವಿವಿಧ ಸಹಕಾರ ನೀಡಿದರು.

ಸನ್ಮಾನ: ಎಂ.ಎ ಆರ್ಕೇಡ್‌ನ ವಿವಿಧ ಕಾಮಗಾರಿಯನ್ನು ನಿಭಾಯಿಸಿದ ಇಂಜಿನಿಯರ್ ವೆಂಕಟರಾಜ್, ಉಮ್ಮರ್, ದಿವಾಕರ, ಇಸಾಕ್ ಹಾಗೂ ಪದ್ಮನಾಭ ರೈ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಎಂ.ಎ ಆರ್ಕೇಡ್‌ನ ಮಾಲಕ ಹಾಜಿ ಕೆ ಮಮ್ಮಾಲಿ ಬೆಳ್ಳಾರೆ ಸನ್ಮಾನಿಸಿದರು.

ನೆಲ ಅಂತಸ್ತಿನಲ್ಲಿರುವ ಎಲ್ಲ ಕೋಣೆಗಳು ಬಾಡಿಗೆ ರೂಪದಲ್ಲಿ ಕೊಡಲಾಗಿದೆ. ಮೊದಲ ಅಂತಸ್ತಿನಲ್ಲಿ ಕೆಲವು ಕೋಣೆಗಳು ಮಾತ್ರ ಬಾಕಿ ಇದೆ. ಎರಡನೇ ಅಂತಸ್ತಿನಲ್ಲಿರುವ ವಸತಿ ಸಮುಚ್ಚಯ ಪೈಕಿ ಕೆಲವು ಮಾತ್ರ ಬಾಕಿ ಇದೆ. ಅರ್ಹ ಆಸಕ್ತರು ಪಡೆದುಕೊಳ್ಳಬಹುದು

ಹಾಜಿ ಕೆ ಮಮ್ಮಾಲಿ ಬೆಳ್ಳಾರೆ, ಮಾಲಕರು ಎಂ.ಎ ಆರ್ಕೇಡ್ ಕುಂಬ್ರ

ಎಂ.ಎ ಆರ್ಕೇಡ್ ವಿಶೇಷತೆಗಳು

* ನೆಲ ಅಂತಸ್ತು ಹಾಗೂ ಮೊದಲ ಮಹಡಿ ವಾಣಿಜ್ಯ ಮಳಿಗೆ

* ಎರಡನೇ ಮಹಡಿಯಲ್ಲಿ ಸುಸಜ್ಜಿತ ವಸತಿ ಸಮುಚ್ಚಯ

* ವಿಶಾಲ ವಾಹನ ಪಾರ್ಕಿಂಗ್ ವ್ಯವಸ್ಥೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.