ಕಾಣಿಯೂರು – ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Puttur_Advt_NewsUnder_1
Puttur_Advt_NewsUnder_1

kaniyoor-photo-23-10-16_2

ಚಿತ್ರ: ಸುಧಾಕರ್ ಕಾಣಿಯೂರು

ಕಾಣಿಯೂರು: ನಮ್ಮಲ್ಲಿ ಕೋಟಿ ಕೋಟಿ ಆಸ್ತಿ, ಸಂಪತ್ತುಗಳಿದ್ದರೂ ನಾವು ಆರೋಗ್ಯವಂತರಾಗಿರದಿದ್ದರೆ ಅದೆಲ್ಲ ವ್ಯರ್ಥ. ಗ್ರಾಮೀಣ ಭಾಗದ ಜನರು ಅತ್ಯುನ್ನತ್ತವಾದ ವೈದ್ಯಕೀಯ ಚಿಕಿತ್ಸೆ ಪಡೆಯುವಲ್ಲಿ ಇಂದು ವಂಚಿತರಾಗುತ್ತಾ ಇದ್ದಾರೆ. ಇಂತಹ ವೈದ್ಯಕೀಯ ಶಿಬಿರ ನಡೆಸುವ ಮೂಲಕ ಈ ಭಾಗದ ಜನರಿಗೆ ಉಚಿತ ಸೇವೆ ಒದಗಿಸಲು ಮುಂದಾದ ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಮತ್ತು ಸಂಘಟಕರ ಕೆಲಸ ಶ್ಲಾಘನೀಯ ಎಂದು ಬೆಳಂದೂರು ಕ್ಷೇತ್ರದ ಜಿ.ಪಂ ಸದಸ್ಯೆ ಪ್ರಮೀಳಾ ಜನಾರ್ದನ ಹೇಳಿದರು.
ಅವರು ಕಾಣಿಯೂರು ಹಾಲು ಉತ್ಪಾದಕರ ಸಹಕಾರಿ ಸಂಘ ಮತ್ತು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಾಣಿಯೂರು ಇವರ ಜಂಟಿ ಆಶ್ರಯದಲ್ಲಿ ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೆ.ವಿ.ಜಿ ದಂತ ಮಹಾವಿದ್ಯಾಲಯ, ಕೆ.ವಿ.ಜಿ ಆಯುರ್ವೇದ ಮಹಾವಿದ್ಯಾಲಯ ಸುಳ್ಯ ಇವರಿಂದ ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.೨೩ರಂದು ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ನಾವು ಕ್ರಿಯಾಶೀಲರಾಗಿ ದೀನದಲಿತರ ಸೇವೆಯನ್ನು ನಿರಂತರವಾಗಿ ಮಾಡಿದಾಗ ನಮ್ಮ ಆರೋಗ್ಯವನ್ನೂ ಇನ್ನಷ್ಟೂ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಈ ಮೂಲಕ ನಾವು ಸುಖಮಯವಾಗಿರಲು ಸಾಧ್ಯ ಎಂದವರು ಹೇಳಿದರು.
ಸುಳ್ಯ ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ|| ಕೆ.ವಿ ಚಿದಾನಂದರವರು ಮಾತನಾಡಿ, ಜನರು ರೋಗ ಬರದ ಹಾಗೇ ಮುತುವರ್ಜಿವಹಿಸುವುದು ಮತ್ತು ರೋಗದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಚಿಕಿತ್ಸೆ ಪಡೆಯುವುದು ಉತ್ತಮ. ಎಷ್ಟೇ ದೊಡ್ಡ ರೋಗವಾದರೂ ಪ್ರಾರಂಭಿಕ ಹಂತದಲ್ಲಿ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆದುಕೊಂಡರೆ ಗುಣ ಪಡಿಸಲು ಸಾಧ್ಯ ಎಂದರು. ಕಾಣಿಯೂರು ಗ್ರಾ.ಪಂ ಅಧ್ಯಕ್ಷೆ ಸೀತಮ್ಮ ಖಂಡಿಗರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಸುಳ್ಯ ಕೆ.ವಿ.ಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಸ್ ಶೆಟ್ಟರ್, ಕೆ.ವಿ.ಜಿ ದಂತ ಮಹಾವಿದ್ಯಾಲಯದ ಡಾ.ಮನೋಹರ್ ಭಟ್, ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು, ಕಾಣಿಯೂರು ಶಾಲಾ ಶಿಕ್ಷಕಿ ಮೋಹಿನಿ, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅನಂತರಾಮ ಉಪಾಧ್ಯಾಯ, ಉಪಾಧ್ಯಕ್ಷ ಶೇಷಪ್ಪ ಬೆದ್ರಂಗಳ, ಕಾರ್ಯದರ್ಶಿ ಜಗದೀಶ್ ಗೌಡರವರು ಉಪಸ್ಥಿತರಿದ್ದರು. ರತ್ನಾವತಿ ಅಬೀರ, ಜಲಜಾ ಅನಿಲ, ರಾಮಣ್ಣ ಗೌಡ ನಾವೂರು, ಪದ್ಮಯ್ಯ ಗೌಡ ಅನಿಲ, ಶೇಷಪ್ಪ ಬೆದ್ರಂಗಳರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಕಾಣಿಯೂರು ಶಾಲಾ ವಿದ್ಯಾರ್ಥಿಗಳಾದ ಭವ್ಯಶ್ರೀ ಮತ್ತು ಅಖಿಲಾ ಪ್ರಾರ್ಥಿಸಿದರು. ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಚಾರ್ವಾಕರವರು ಪ್ರಸ್ತಾವನೆಗೈದು, ಸ್ವಾಗತಿಸಿದರು. ಚಾರ್ವಾಕ ಸಿ.ಎ ಬ್ಯಾಂಕ್ ನಿರ್ದೇಶಕ ಪದ್ಮಯ್ಯ ಗೌಡ ಅನಿಲ ವಂದಿಸಿದರು. ಕಾಣಿಯೂರು ಸಿಆರ್‌ಪಿ ಜಯಂತ್ ವೈ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.