ಖಾಸಗಿ ಜಮೀನಿನಲ್ಲಿ ತರಕಾರಿ ಸಂತೆ ಜಾಗದ ಮಾಲಕರೊಂದಿಗೆ ನಗರಸಭೆ ಮಾತುಕತೆ

Puttur_Advt_NewsUnder_1
Puttur_Advt_NewsUnder_1

18

8ವರ್ಷಕ್ಕೆ ರೂ.1.50 ಲಕ್ಷ ನೀಡಲು ನಗರಸಭೆ ನಿರ್ಧಾರ 8ತಿಂಗಳಿಗೆ ರೂ. 50ಸಾವಿರ ನೀಡಬೇಕೆಂದು ಮಾಲಕರ ಬೇಡಿಕೆ
ಪುತ್ತೂರು: ಪುತ್ತೂರು ತರಕಾರಿ ಸಂತೆ ನಡೆಸಲೆಂದು ಈ ಹಿಂದೆ ನಗರಸಭೆ ಮಾತುಕತೆ ನಡೆಸಿ ಕೈಬಿಟ್ಟಿದ್ದ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯ ಕೊನೆಯ ಭಾಗದಲ್ಲಿರುವ 96 ಸೆಂಟ್ಸ್ ಖಾಸಗಿ ಸ್ಥಳವನ್ನು ಲೀಸ್‌ಗೆ ಪಡೆಯಲು ನಗರಸಭೆ ಮುಂದಾಗಿದ್ದು, ಜಾಗದ ಮಾಲಿಕ ನೋಬರ್ಟ್ ತಾವ್ರೋರವರೊಂದಿಗೆ ಅ.24ರಂದು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಮತ್ತು ಸದಸ್ಯರು ಮಾತುಕತೆ ನಡೆಸಿದ್ದಾರೆ.
ಮೂಲತಃ ಪುತ್ತೂರಿನವರಾಗಿದ್ದು ಶಿರ್ವ ಶಂಕರಾಪುರದಲ್ಲಿ ಕೃಷಿಕರಾಗಿರುವ ನೋಬರ್ಟ್ ತಾವ್ರೋರವರನ್ನು ನಗರಸಭೆ ಅಧ್ಯಕ್ಷರು ಸಂಪರ್ಕಿಸಿದ್ದರು. ಹಾಗಾಗಿ ನಗರಸಭೆ ಕಚೇರಿಗೆ ಬಂದ ನೋಬರ್ಟ್ ತಾವ್ರೋರವರು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯರಾದ ಹೆಚ್.ಮಹಮ್ಮದ್ ಆಲಿ, ಶಕ್ತಿ ಸಿನ್ಹ ಮತ್ತು ಅನ್ವರ್ ಖಾಸಿಂರವರೊಂದಿಗೆ ಮಾತುಕತೆ ನಡೆಸಿದ್ದಾರೆ.
ವರ್ಷಕ್ಕೆ ರೂ. 1.50 ಲಕ್ಷ ನೀಡಲು ನಗರಸಭೆ ನಿರ್ಧಾರ
ತಿಂಗಳಿಗೆ ರೂ. 50ಸಾವಿರ ನೀಡಬೇಕೆಂದು ಮಾಲಕರ ಭೇಡಿಕೆ
ಜಾಗದ ಕುರಿತು ಖರೀದಿ ಮಾಡುವಷ್ಟು ನಗರಸಭೆಯಲ್ಲಿ ಅನುದಾನವಿಲ್ಲವಾದ್ದರಿಂದ ಜಾಗವನ್ನು ಲೀಸಿಗೆ ಪಡೆಯಲು ನಾವು ಮುಂದಾಗಿದ್ದು, ವರ್ಷಕ್ಕೆ ರೂ. 1.50ಲಕ್ಷ ನೀಡುವ ಕುರಿತು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ತಿಳಿಸಿದರು. ಈ ವೇಳೆ ಮಾತನಾಡಿದ ನೊಬರ್ಟ್ ತಾವ್ರೋರವರು ನಾನು ಜಾಗ ಲೀಸಿಗೆ ಕೊಡುವ ಬದಲು ಮಾರಾಟ ಮಾಡುವ ಉದ್ದೇಶ ಇಟ್ಟು ಕೊಂಡಿದ್ದೆನೆ. ಈ ಹಿಂದೆ ನಗರಸಭೆಯಲ್ಲಿ ಜೀವಂಧರ್ ಜೈನ್ ಮತ್ತು ಪೌರಾಯುಕ್ತೆ ರೇಖಾ ಶೆಟ್ಟಿಯವರು ಇರುವಾಗ ಮಾತುಕತೆ ನಡೆಸಿ ರೂ. 1.80 ಕೋಟಿಗೆ ಖರೀದಿ ಮಾಡುವುದೆಂದು ನಿರ್ಣಯಿಸಲಾಗಿತ್ತು. ಬಳಿಕ ಅದನ್ನು ಕೈ ಬಿಡಲಾಗಿತ್ತು. ಇದೀಗ ಮತ್ತೆ ಜಾಗವನ್ನು ಖರೀದಿ ಮಾಡುವುದಾದರೆ ಉತ್ತಮ. ಇಲ್ಲವಾದಲ್ಲಿ ಲೀಸ್‌ಗೆ ಬೇಕಾದರೆ ತಿಂಗಳಿಗೆ ರೂ. 50ಸಾವಿರ ನೀಡ ಬೇಕು. ಆದರೂ ಈ ಕುರಿತು ನಾನು ನನ್ನ ಮನೆಯವರಲ್ಲಿ ನನ್ನ ವಕೀಲರಲ್ಲಿ ಸಲಹೆ ಪಡೆದು ಉತ್ತರಿಸುತ್ತೇನೆ ಎಂದು ಹೇಳಿದರು. ಹೆಚ್. ಮಹಮ್ಮದ್ ಆಲಿಯವರು ಮಾತನಾಡಿ ಸಂತೆಯಿಂದ ಹೆಚ್ಚಿನ ಆದಾಯವಿಲ್ಲ. ಯಾವುದಕ್ಕೂ ಮುಂದೆ ಕೌನ್ಸಿಲ್ ಮೀಟಿಂಗ್‌ನಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.