ಉಪ್ಪಿನಂಗಡಿ: ಮೇಲ್ಸೇತುವೆಗೆ ಪೂರ್ವತಯಾರಿ

Puttur_Advt_NewsUnder_1
Puttur_Advt_NewsUnder_1

1ಉಪ್ಪಿನಂಗಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಳ್ಳಲಿದ್ದು, ಈ ಸಂದರ್ಭ ಉಪ್ಪಿನಂಗಡಿಯಲ್ಲಿ ಫ್ಲೈಓವರ್ (ಮೇಲ್ಸೇತುವೆ) ನಿರ್ಮಾಣವಾಗಲಿದೆ. ಇದಕ್ಕಾಗಿ ಈಗಾಗಲೇ ಪೂರ್ವತಯಾರಿ ಆರಂಭವಾಗಿದೆ.
ಮೇಲ್ಸೇತುವೆ ನಿರ್ಮಾಣಕ್ಕೆ ಖ್ಯಾತ ಎಲ್‌ಎನ್‌ಟಿ ಕಂಪೆನಿ ಗುತ್ತಿಗೆ ಪಡೆದುಕೊಂಡಿದ್ದು, ಸೇತುವೆಯ ನಿರ್ಮಾಣಕ್ಕೆ ಸಂಬಂಧಿಸಿ ಭೂಮಿಯ ಧಾರಣ ಸಾಮರ್ಥ್ಯದ ಅಧ್ಯಯನ ಕಾರ್ಯ ಇದೀಗ ಬಹುಸ್ತರದಲ್ಲಿ ನಡೆಯುತ್ತಿದೆ. ಉಪ್ಪಿನಂಗಡಿ ಪೇಟೆಯ ಹಿತಾಸಕ್ತಿಯನ್ನಾಧರಿಸಿ ನಿರ್ಮಾಣಗೊಳ್ಳುತ್ತಿರುವ ಮೇಲ್ಸೇತುವೆ ಸುಮಾರು 300 ಮೀಟರ್ ಉದ್ದವಿದ್ದು, ಉಪ್ಪಿನಂಗಡಿಯ ಹೃದಯ ಭಾಗದಲ್ಲಿರುವ ೧೮೦ ವರ್ಷದ ಹಳೆಯದಾದ ಸರಕಾರಿ ಮಾದರಿ ಶಾಲೆಯು ಇದರಿಂದಾಗಿ ರಕ್ಷಿಸಲ್ಪಡುತ್ತದೆ.
ಉಪ್ಪಿನಂಗಡಿಯ ಕುಮಾರಧಾರಾ ಸೇತುವೆಯಿಂದ ಪ್ರಾರಂಭಗೊಳ್ಳುವ ಈ ಮೇಲ್ಸೇತುವೆಯು ಹಲವಾರು ಅನುಕೂಲತೆಯನ್ನು ಒದಗಿಸಲಿದೆ. ಮಾತ್ರವಲ್ಲದೆ ಸೇತುವೆಯ ನಿರ್ಮಾಣದಿಂದಾಗಿ ಪೇಟೆಯೊಳಗೆ ಸಂಪರ್ಕ ಸಾಧಿಸುವ ಸರ್ವಿಸ್ ರಸ್ತೆಯ ನಿರ್ಮಾಣದಿಂದಾಗಿ ಸೇತುವೆಯ ಕೆಳಗಡೆ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲು ಸಾಧ್ಯವಿದ್ದು, ಉಪ್ಪಿನಂಗಡಿಯಲ್ಲಿ ಕಾಡುತ್ತಿರುವ ಪಾರ್ಕಿಂಗ್ ಸಮಸ್ಯೆಯನ್ನು ಪರಿಹರಿಸಲು ಅವಕಾಶ ದೊರೆಯಲಿದೆ. ಹೆದ್ದಾರಿಯು ಚತುಷ್ಪಥಗೊಳ್ಳುವ ಸಂಧರ್ಭದಲ್ಲಿ ಉಪ್ಪಿನಂಗಡಿ ಪೇಟೆಯಿಂದ ಹಾದು ಹೋಗುವ ಭಾಗದಲ್ಲಿನ ವಾಣಿಜ್ಯ ಕಟ್ಟಡಗಳು ಒಂದಷ್ಟು ತೆರವು ಕಾರ್ಯಾಚರಣೆಗೆ ತುತ್ತಾಗಲಿದ್ದು, ಹೆದ್ದಾರಿಯಲ್ಲಿನ ವಾಹನಗಳ ವೇಗಕ್ಕೆ ತಡೆಯುಂಟಾಗದಂತೆ ಮೇಲ್ಸೇತುವೆಯು ಅನುಕೂಲಕರವಾಗಲಿದೆ.
ಈಗಾಗಾಲೇ ವಾಹನ ನಿಭಿಡವಾದ ಬ್ಯಾಂಕ್ ರಸ್ತೆಯನ್ನು ಬಳಸುತ್ತಿರುವ ವಿದ್ಯಾರ್ಥಿ ಸಮೂಹಕ್ಕೆ ಮೇಲ್ಸೇತುವೆಯ ಕೆಳಭಾಗದ ಸರ್ವಿಸ್ ರಸ್ತೆಯನ್ನು ಬಳಸಿ ಕಾಲೇಜಿನಿಂದ ಬಸ್ ನಿಲ್ದಾಣಕ್ಕೆ ಬರಲು ಅವಕಾಶ ಲಭಿಸುವುದು. ಈ ಮೂಲಕ ವಾಹನ ಹಾಗೂ ಜನ ನಿಬಿಡ ರಸ್ತೆಯಲ್ಲಿ ನಡೆದಾಡುವ ಕಿರಿಕಿರಿ ತಪ್ಪಿದಂತಾಗುವುದು.
ಒಟ್ಟಾರೆ ಉಪ್ಪಿನಂಗಡಿಯ ಪಾಲಿಗೆ ಅನುಕೂಲತೆಯನ್ನು ಒದಗಿಸಲಿದೆ ಎಂಬ ಆಶಾಭಾವನೆಯನ್ನು ಮೂಡಿಸಿರುವ ಮೇಲ್ಸೆತುವೆಯ ನಿರ್ಮಾಣಕ್ಕೆ ಸಂಬಂಧಿಸಿ ಭೂಮಿಯ ಧಾರಣಾ ಸಾಮರ್ಥ್ಯದ ಅಧ್ಯಯನ ಕಾರ್ಯ ಹಲವು ತಂಡಗಳಿಂದ ಬಿರುಸಿನಿಂದ ನಡೆಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.