ಇಲ್ಲಿ ಸಂತೆ ವ್ಯಾಪಾರಕ್ಕಿಲ್ಲ ಅವಕಾಶ; ಕೋರ್ಟ್ ರಸ್ತೆ, ಮಾರ್ಕೆಟ್ ರಸ್ತೆ ಬದಿಯ ವ್ಯಾಪಾರ ತೆರವು- ನಗರಸಭೆ, ಪೊಲೀಸರ ಜಂಟಿ ಕಾರ‍್ಯಾಚರಣೆ ಪೊಲೀಸ್-ನಾಗರಿಕರ ಮಧ್ಯೆ ಚರ್ಚೆ, ಚಕಮಕಿ

Puttur_Advt_NewsUnder_1
Puttur_Advt_NewsUnder_1

santhe1 santhe2 santhe3ಪುತ್ತೂರು : ಅ.24ರಂದು ಕೋರ್ಟು ರಸ್ತೆ ಮತ್ತು ಮಾರ್ಕೆಟ್ ರಸ್ತೆಗಳ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದವರನ್ನು ನಗರಸಭೆ ಮತ್ತು ಪೊಲೀಸರು ಜಂಟಿಯಾಗಿ ತೆರವುಗೊಳಿಸಲು ಮುಂದಾದ ವೇಳೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿ ಮಾತಿನ ಚಕಮಕಿ ನಡೆಯಿತು. ಸ್ಥಳೀಯರು ವಿರೋಧ ವ್ಯಕ್ತಪಡಿಸಿದರೂ ಪೊಲೀಸರು ಸಂತೆ ವ್ಯಾಪಾರವನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ. ಕಿಲ್ಲೆ ಮೈದಾನ ಮತ್ತು ಅದರ ಸುತ್ತಮುತ್ತಲಿನ ರಸ್ತೆ ಬದಿಗಳಲ್ಲಿ ಸೋಮವಾರ ನಡೆಯುತ್ತಿದ್ದ ವಾರದ ಸಂತೆಯನ್ನು ಸಹಾಯಕ ಕಮೀಷನರ್‌ರವರ ಆದೇಶದಂತೆ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು. ಆದರೂ ಕೆಲವು ವ್ಯಾಪಾರಿಗಳು ಕಿಲ್ಲೆ ಮೈದಾನದ ಸುತ್ತಮುತ್ತಲಿನ ರಸ್ತೆ ಬದಿಗಳಲ್ಲಿ ವ್ಯಾಪಾರ ಮುಂದುವರಿಸಿದ್ದರು. ಈ ಹಿನ್ನಲೆಯಲ್ಲಿ ನಗರಸಭೆಯ ಅಧಿಕಾರಿಗಳು ಮತ್ತು ಪೊಲೀಸರು ತೆರವು ಕಾರ್ಯಾಚರಣೆ ನಡೆಸಿದರು.

ಪೌರಾಯುಕ್ತರ ಕೆಲಸಕ್ಕೆ ಅಡ್ಡಿಪಡಿಸಿದ ದಿನೇಶ್ ಜೈನ್‌ಗೆ ಎಚ್ಚರಿಕೆ: ಪುತ್ತೂರು ತರಕಾರಿ ಬಝಾರ್ ಬಳಿ ರಸ್ತೆ ಬದಿಯಲ್ಲಿದ್ದ ತರಕಾರಿ ವ್ಯಾಪಾರಸ್ಥರನ್ನು ತೆರವುಗೊಳಿಸಿದ ನಗರಸಭೆ ಅಧಿಕಾರಿಗಳು ಬಳಿಕ ಕೋರ್ಟ್‌ರಸ್ತೆಯ ಬದಿಯಲ್ಲಿರುವ ವ್ಯಾಪಾರಸ್ಥರನ್ನೂ ತೆರವುಗೊಳಿಸಲು ಮುಂದಾದರು ಈ ವೇಳೆ ದಿನೇಶ್ ಜೈನ್‌ರವರು ಪೌರಾಯುಕ್ತೆ ರೂಪಾ ಶೆಟ್ಟಿಯವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದರು. ಇದನ್ನು ಗಮನಿಸಿದ ಪುತ್ತೂರು ನಗರ ಠಾಣೆ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್‌ರವರು ಮುಂದೆ ಬಂದು ದಿನೇಶ್ ಜೈನ್‌ಗೆ ಎಚ್ಚರಿಕೆ ನೀಡಲು ಬಂದಾಗ ಅಲ್ಲೇ ಇದ್ದ ಉದ್ಯಮಿ ಭಾಮಿ ಜಗದೀಶ್ ಶೆಣೈಯವರು ದಿನೇಶ್ ಜೈನ್‌ರನ್ನು ಅಲ್ಲಿಂದ ಹೋಗಲು ಹೇಳಿದರು. ಇದಕ್ಕೆ ಮಹೇಶ್ ಪ್ರಸಾದ್‌ರವರು ಅವರ‍್ಯಾರು ಎಂದು ದಿನೇಶ್ ಜೈನ್‌ನಲ್ಲಿ ಪ್ರಶ್ನಿಸಿದರು. ಜಗದೀಶ್ ಶೆಣೈಯವರು ತಕ್ಷಣ ಅವ ನಮ್ಮ ಹುಡುಗ ಎಂದಾಗ ನಿಮ್ಮ ಹುಡುಗನಾದರೆ ಮನೆಯಲ್ಲಿಟ್ಟುಕೊಳ್ಳಿ ಎಂದು ಮಹೇಶ್ ಪ್ರಸಾದ್ ಹೇಳಿದರಲ್ಲದೆ ಇದು ಪಬ್ಲಿಕ್ ಪ್ರಾಪರ್ಟಿ, ನಾನು   ಇನ್ಸ್ಸ್‌ಪೆಕ್ಟರ್. ನಾನು ಮಾತನಾಡುವಾಗ ನಿಮಗೇನು ಕೆಲಸ ಎಂದರು. ಬಳಿಕ ಅವರೀರ್ವರ ನಡುವೆ ಮಾತಿನ ಚರ್ಚೆ ನಡೆಯಿತು. ಆಗ ನಗರಸಭೆ ಸದಸ್ಯ ರಾಜೇಶ್ ಬನ್ನೂರುರವರು ಜಗದೀಶ್ ಶೆಣೈಯವರನ್ನು ಸಮಾಧಾನ ಪಡಿಸಿದರು. ಈ ಸಂದರ್ಭದಲ್ಲಿ ನಗರಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ, ಮಾಜಿ ಪುರಸಭಾ ಸದಸ್ಯ ಇಸಾಕ್ ಸಾಲ್ಮರ, ತರಕಾರಿ ಬಝಾರ್‌ನ ಜಯರಾಮ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ವಿಷಯ ತಿಳಿದ ಎ.ಎಸ್ಪಿ ರಿಷ್ಯಂತ್ ಸಿ.ಬಿಯವರು ಸಂತೆ ವಿಚಾರ ತಿಳಿಯಲು ಅಲ್ಲಿಗೆ ಬಂದು ಪರಿಶೀಲನೆ ನಡೆಸಿ ತೆರಳಿದರು.  ಬಳಿಕ ಪೊಲೀಸರು ಕಿಲ್ಲೆ ಮೈದಾನದ ಸುತ್ತ ಮುತ್ತ ಕಾರ್ಯಾಚರಣೆ ನಡೆಸಿ ಕೆಲವೊಂದು ಕಡೆಗಳಲ್ಲಿ ನಡೆಯುತ್ತಿದ್ದ ಸಂತೆ ವ್ಯಾಪಾರವನ್ನು ತೆರವುಗೊಳಿಸಿದರು. ಪುತ್ತೂರು ಸಂಚಾರ ಠಾಣಾ ಎಸ್.ಐ ನಾಗರಾಜ್, ಪುತ್ತೂರು ನಗರಸಭೆಯ ಆಯುಕ್ತೆ ರೂಪಾ ಶೆಟ್ಟಿ, ಇಂಜಿನಿಯರ್ ತುಳಸೀದಾಸ್, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಕಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.