ಈಶ್ವರಮಂಗಲದಲ್ಲೊಂದು ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ನಿವೃತ್ತಿ ಅಂಚಿನಲ್ಲಿರುವ ಗುರುವಿನ ಗುರುಗಳಿಗೆ ‘ಗುರುವಂದನೆ’ 

Puttur_Advt_NewsUnder_1
Puttur_Advt_NewsUnder_1

1 12ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕ ಎಂ.ಎಸ್.ಕಡಂಬಳಿತ್ತಾಯ, ಫಿಲೋಮಿನಾ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕರಾದ ಮುತ್ತು ಶೆಟ್ಟಿ, ರವೀಂದ್ರ, ಚಂದ್ರಶೇಖರ್ ಕುಂಜತ್ತಾಯ,ರತ್ನಾಕರ ಗೌಡ ,ಪದ್ಮನಾಭ ನಾಯಕ್ ಎಸ್, ಸುರೇಶ್ ಶೆಟ್ಟಿ, ಕೇಶವ ಭಟ್, ಲೂಯಿಸ್ ಮಸ್ಕರೇನ್ಹಸ್, ನಿಡ್ಪಳ್ಳಿ ಮುಂಡೂರು ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಾದ ನರಸಿಂಹ ಭಟ್ (ನೆಂಪು) ಮತ್ತು ಎಸ್.ಶಂಕರನಾರಾಯಣ ರಾವ್ ಅವರನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು.
ಪುತ್ತೂರು: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ 36 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಡಿ. 31ರಂದು ನಿವೃತ್ತಿ ಹೊಂದಲಿರುವ ಬಿ.ಸರ್ವೋತ್ತಮ ಬೋರ್ಕರ್ ಅವರು ಅವರ 11 ಮಂದಿ ಹಿರಿಯ ಗುರುಗಳಿಗೆ ಗುರುವಂದನೆ ಹಾಗೂ ಸ್ನೇಹ ಮಿಲನ ಕಾರ್ಯಕ್ರಮ ಅ.23ರಂದು ಪಂಚಲಿಂಗೇಶ್ವರ ಪ್ರೌಢ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಮುತ್ಸದ್ಧಿ ಗುರುಗಳಿಗೆ ಮಾತ್ರ ವೇದಿಕೆ ಸೀಮಿತವಾಗಿದೆ.
ವೃತ್ತಿ ನಿವೃತ್ತಿಯ ಬದುಕು ಸಾಗಿಸುತ್ತಿರುವ ವಯೋವೃದ್ಧರಾದ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕ ಎಂ.ಎಲ್.ಕಡಂಬಳಿತ್ತಾಯ, ಫಿಲೋಮಿನಾ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ, ರವೀಂದ್ರ, ಚಂದ್ರಶೇಖರ್ ಕುಂಜತ್ತಾಯ,ರತ್ನಾಕರ ಗೌಡ ,ಪದ್ಮನಾಭ ನಾಯಕ್ ಎಸ್, ಸುರೇಶ್ ಶೆಟ್ಟಿ, ಕೇಶವ ಭಟ್, ಲೂಯಿಸ್ ಮಸ್ಕರೇನ್ಹಸ್, ನಿಡ್ಪಳ್ಳಿ ಮುಂಡೂರು ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಾದ ನರಸಿಂಹ ಭಟ್ (ನೆಂಪು) ಮತ್ತು ಎಸ್.ಶಂಕರನಾರಾಯಣ ರಾವ್ ಅವರನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು.
ಪಂಚಲಿಂಗೇಶ್ವರ ಪ್ರೌಢ ಶಾಲೆಯ ಸಂಚಾಲಕ ರವಿಚಂದ್ರ ಆಳ್ವ ಮೇನಾಲ, ಶಾಲಾ ಆಡಳಿತ ಮಂಡಳಿಯ ಹಿರಿಯ ನಿರ್ದೇಶಕ ರಾಧಾಕೃಷ್ಣ ಭಂಡಾರಿ ಸರ್ವತ್ತೋಡಿ, ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀಧರ್ ರೈ, ಸುಳ್ಯಪದವು ಸರ್ವೋದಯ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಚ್.ಡಿ.ಶಿವರಾಂ, ಸಹಕಾರಿ ಧುರೀಣ ಪದ್ಮನಾಭ ಬೋರ್ಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯ ಚಂದ್ರ ಮೊದಲಾದವರ ಉಪಸ್ಥಿತಿಯಲ್ಲಿ ತಮ್ಮ ಕುಟುಂಬ ಸದಸ್ಯರ ಹಾಗೂ ನಿಕಟವರ್ತಿಗಳ ಸಮ್ಮುಖದಲ್ಲಿ ಸರ್ವೋತ್ತಮ ಬೋರ್ಕರ್ ಅವರು ತಮ್ಮ ಗುರುಗಳಿಗೆ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವ ಪೂರ್ವಕವಾಗಿ ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು. ನಿವೃತ್ತಿಯ ಅಂಚಿನಲ್ಲಿರುವ ಗುರುಗಳೇ ತಮ್ಮ ಗುರುಗಳನ್ನು ಸನ್ಮಾನಿಸಿ ಗೌರವಿಸಿದ ಈ ಕ್ಷಣ ವೈಶಿಷ್ಟ್ಯ ಪೂರ್ಣವಾಗಿತ್ತು.
ಪರರ ಹೊಗಳಿಕೆಯೇ ಪರಿಪೂರ್ಣ ವ್ಯಕ್ತಿಯ ಗುಣ: ತನ್ನ ಸಾಧನೆ ಏನು ಎಂಬುವುದನ್ನು ಹೇಳಿಕೊಳ್ಳದೆ ಇತರರ ಸಾಧನೆಗಳನ್ನು ಹೊಗಳುವುದೇ ಪರಿಪೂರ್ಣ ವ್ಯಕ್ತಿಯ ಗುಣ. ವಿದ್ಯಾರ್ಥಿಗಳು ಗುರುತಿಸಿದರೆ ಅದಕ್ಕಿಂತ ಹೆಚ್ಚಿನ ಸಂತೋಷದ ವಿಚಾರ ಶಿಕ್ಷಕನೊಬ್ಬನಿಗೆ ಇನ್ನೊಂದಿಲ್ಲ ಎಂದು ಗುರುವಂದನೆ ಸ್ವೀಕರಿಸಿದ ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ ಅವರು ಅಭಿಪ್ರಾಯಪಟ್ಟರು.
ಹೃದಯ ಶ್ರೀಮಂತಿಕೆ ಎಲ್ಲಕ್ಕಿಂತ ಮುಖ್ಯ:ನರಸಿಂಹ ಭಟ್- ಗುರುವಂದನೆ ಸ್ವೀಕರಿಸಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ .ಸಾಹಿತಿ ನರಸಿಂಹ ಭಟ್ ಅವರು ಮಾತನಾಡಿ, ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಕಾಣುವ ಸಂದರ್ಭದಲ್ಲಿ ಅಧ್ಯಾಪಕರು ಉತ್ಸಾಹ ಕಳೆದುಕೊಳ್ಳುವುದು ಸಹಜ. ಆದರೆ ಸರ್ವೋತ್ತಮ ಬೋರ್ಕರ್ ಅವರು ನಿವೃತ್ತಿಯ ಸಂದರ್ಭದಲ್ಲೂ ಉತ್ಸಾಹ ಕಳೆದುಕೊಳ್ಳದೆ ಆದರ್ಶ ಪರಂಪರೆಯನ್ನು ಎತ್ತಿ ತೋರಿಸಿದ್ದಾರೆ. ವೈeನಿಕ ಪ್ರಜ್ಞೆ ಮೂಡಿಸುವ ಮೂಲಕ ಈ ಪರಿಸರವನ್ನೇ ಜಾಗೃತಿಗೊಳಿಸುವ ಕೆಲಸ ಮಾಡಿದ್ದಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ ಎಂದರು.
ನಿವೃತ್ತ ಪ್ರೊಫೆಸರ್ ಎಂ.ಎಲ್.ಕಡಂಬಳಿತ್ತಾಯ ಅವರು ಮಾತನಾಡಿ ಸೇವಾ ನಿವೃತ್ತಿ ಎಂದರೆ ಒಂದು ಕಡೆ ಇದ್ದ ಸಸಿಯನ್ನು ಕಿತ್ತು ಬೇರೆ ಕಡೆ ಇಟ್ಟಂತೆ. ಅದು ಮತ್ತೆ ಚಿಗುರು ಸ್ವಲ್ಪ ಕಾಲ ಬೇಕಾಗುತ್ತದೆ ಎಂದರು. ಪೆರ್ನಾಜೆ ಸೀತರಾಘವ ಪ.ಪೂ.ಕಾಲೇಜಿನ ಪ್ರಾಂಶುಪಾಲ ಕೆ.ಆರ್.ಗೋಪಾಲಕೃಷ್ಣ ಮತ್ತು ಬಳಗದವರಿಂದ ಭಾವಗೀತೆಗಳ ಭಾವಸಂಗಮ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ರುವಾರಿಯಾಗಿದ್ದ ಬಿ.ಸರ್ವೋತ್ತಮ ಬೋರ್ಕರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ಗುರುಗಳನ್ನು ಪರಿಚಯಿಸಿ ಕೊನೆಯಲ್ಲಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.