ಉಪ್ಪಿನಂಗಡಿ ಸಂಚಾರಿ ಅವ್ಯವಸ್ಥೆ: ಪೊಲೀಸ್-ಪಂಚಾಯಿತಿ ಕಾರ್ಯಾಚರಣೆ

Puttur_Advt_NewsUnder_1
Puttur_Advt_NewsUnder_1

8-1 8-2

* ವಾಹನ ನಿಲುಗಡೆ ನಿಯಮ ಉಲ್ಲಂಸಿದರೆ ಕೇಸು, ಮುಟ್ಟುಗೋಲು * ಫುಟ್‌ಪಾತ್‌ನಲ್ಲಿ ಸರಕು ಇಡದಂತೆ ವರ್ತಕರಿಗೆ ಸೂಚನೆ
ಉಪ್ಪಿನಂಗಡಿ: ಇಲ್ಲಿನ ಪೇಟೆಯಲ್ಲಿ ವಾಹನಗಳ ಅಡ್ಡಾದಿಡ್ಡಿ ನಿಲುಗಡೆ, ನಿಯಮ ಉಲ್ಲಂಘನೆಯಿಂದಾಗಿ ಸಂಚಾರಿ ವ್ಯವಸ್ಥೆ ಅಸ್ತವ್ಯಸ್ತಗೊಂಡಿರುವ ಬಗೆಗಿನ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಈಚೆಗೆ ಪುತ್ತೂರು ಸಹಾಯಕ ಕಮೀಷನರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಉಪ್ಪಿನಂಗಡಿ ಪೊಲೀಸರು ಪೇಟೆಯಲ್ಲಿ ಸಂಚಾರಿ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಅ. 24ರಿಂದ ಕಾರ್ಯಾಚರಣೆ ಆರಂಭಿಸಿದರು.
ಉಪ್ಪಿನಂಗಡಿ ಬೇಂಕ್ ರಸ್ತೆಯಲ್ಲಿ ಈಗಾಗಲೇ ಸೂಚಿಸಿರುವಂತೆ ಗಾಂಧಿಪಾರ್ಕು ಕಡೆಯಿಂದ ಡಬ್ಬಲ್ ಸ್ಟೋರ್ ಅಂಗಡಿಯಿಂದ ನೇತ್ರಾವತಿ ಗ್ರಾಮೀಣ ವಿಕಾಸ ಬೇಂಕ್
ತನಕ ಎಡ ಬದಿಯಲ್ಲಿ ಮತ್ತು ಅಲ್ಲಿಂದ ಮುಂದೆ ಬಲ ಬದಿಯಲ್ಲಿ ನಿರಂಜನ ರೈ ಕ್ಲಿನಿಕ್, ಕಾಮತ್ ಕೋಲ್ಡ್ ಹೌಸ್ ಬದಿಯಲ್ಲಿ ವಾಹನಗಳ ನಿಲುಗಡೆಗೆ ಸೂಚಿಸಲಾಗಿದ್ದು ಹಾಗೂ ಪೇಟೆಯಾದ್ಯಂತ ಈಗಾಗಲೇ ಸೂಚಿಸಿರುವಂತೆ ವಾಹನ ನಿಲುಗಡೆ ಮಾಡಬೇಕು, ಈ ನಿಯಮ ಉಲ್ಲಂಸಿದವರ ವಾಹನಗಳನ್ನು ತೆರವುಗೊಳಿಸಿ ಮುಂದೆ ಮತ್ತೆ ಇದೇ ರೀತಿ ಮುಂದುವರಿದಲ್ಲಿ ಮುಟ್ಟುಗೋಲು ಮೊದಲಾದ ಪ್ರಕರಣ ದಾಖಲಿಸುವ ಕುರಿತು ಕಾರ್‍ಯಾಚರಣೆ ಸಂದರ್ಭ ಸೂಚನೆ ನೀಡಿದರು.
ಫುಟ್‌ಪಾತ್‌ನಲ್ಲಿ ಸರಕು ಇಡದಂತೆ ಸೂಚನೆ: ಕೆಲವೊಂದು ಅಂಗಡಿಗಳವರು ಫುಟ್‌ಪಾತ್‌ನಲ್ಲಿ ತಮ್ಮ ಸರಂಜಾಮುಗಳನ್ನು ಇರಿಸುವುದು ಮುಂದುವರಿಸಿದ್ದು, ಈ ಬಗ್ಗೆ ತೆರವಿಗೆ ಸೂಚನೆ ನೀಡಿದ ಪೊಲೀಸರು ಮತ್ತೆ ಇದರ ಪುನರಾವರ್ತನೆ ಆದಲ್ಲಿ ಸರಂಜಾಮುಗಳನ್ನು ಮುಟ್ಟುಗೋಲು ಹಾಕುವುದಾಗಿ ವರ್ತಕರಿಗೆ ಎಚ್ಚರಿಕೆ ನೀಡಿದರು. ಕಾರ್‍ಯಾಚರಣೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಸಿಬ್ಬಂದಿಗಳ ಜೊತೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್, ಕಾರ್‍ಯದರ್ಶಿ ರೋಹಿತ್ ಮತ್ತು ಸಿಬ್ಬಂದಿಗಳು ಭಾಗವಹಿಸಿ ಸೂಚನೆ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.