ಸ್ಫೋಟಕ ಸಿಡಿದು ದನ ಮೃತಪಟ್ಟ ಪ್ರಕರಣ ಪ್ರಮುಖ ಆರೋಪಿಗಳ ಬಂಧನ: ಮಾಂಸದ ಆಸೆಗೆ ಸ್ಪೋಟಕವಿರಿಸಿದ್ದೆವೆ: ತಪ್ಪೊಪ್ಪಿಗೆ ಹೇಳಿಕೆ

Puttur_Advt_NewsUnder_1
Puttur_Advt_NewsUnder_1

9ವಿಟ್ಲ: ಕರೋಪಾಡಿ ಗ್ರಾಮದ ಚೆಲ್ಲಂಗಾರಿನಲ್ಲಿ ಕಾಡು ಪ್ರಾಣಿಗಳ ಬೇಟೆಗೆಂದು ಇಟ್ಟಿದ್ದ ಸ್ಪೋಟಕ ಸಿಡಿದು ದನ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಿಬ್ಬರನ್ನು ವಿಟ್ಲ ಪೊಲೀಸರು ಅ.24ರಂದು ಮಾಣಿ ಜಂಕ್ಷನ್‌ನಿಂದ ಬಂಧಿಸಿದ್ದಾರೆ.
ಇರ್ದೆ ಗ್ರಾಮದ ದೂಮಡ್ಕ ಪೆಲತ್ತಾಜೆ ದಿ.ಐತಪ್ಪ ನಾಯ್ಕರವರ ಪುತ್ರ ಶೀನಪ್ಪ ನಾಯ್ಕ (48.ವ)ಹಾಗು ಹಾಸನ ಹಾಲೂರು ದಿ.ದೇರಪ್ಪ ಶೆಟ್ಟಿಯವರ ಪುತ್ರ ವಿನೋದ್ ಶೆಟ್ಟಿ (30.ವ) ಬಂಧಿತರು. ವಿನೋದ್ ಶೆಟ್ಟಿ ಮೂಲತಃ ಹಾಸನ ನಿವಾಸಿಯಾಗಿದ್ದು ಇರ್ದೆ ಗಂಡಿ ದರ್ಬೆಯಲ್ಲಿರುವ ಪತ್ನಿಯ ಮನೆಯಲ್ಲಿ ವಾಸವಾಗಿದ್ದು ಅಲ್ಲೇ ಕೂಲಿಕೆಲಸ ಮಾಡಿಕೊಂಡಿದ್ದಾರೆ. ಶೀನಪ್ಪ ನಾಯ್ಕರು ಕೃಷಿಕರಾಗಿದ್ದಾರೆ. ಶೀನಪ್ಪ ನಾಯ್ಕರವರು ಚೆಲ್ಲಂಗಾರು ನಿವಾಸಿ ಗೋವಿಂದ ನಾಯ್ಕರ ಸಂಬಂಧಿಯಾಗಿದ್ದು, ಈ ಹಿನ್ನೆಲೆಯಲ್ಲಿ ಇರ್ದೆಯಿಂದ ರಿಕ್ಷಾದಲ್ಲಿ ಇವರು ಕಾಡು ಹಂದಿಯ ಬೇಟೆಗಾಗಿ ತೆರಳುತ್ತಿದ್ದರು ಎನ್ನಲಾಗಿದೆ.
ಚೆಲ್ಲಂಗಾರು ನಿವಾಸಿ ರಾಧಾಕೃಷ್ಣ ಮೂಲ್ಯರವರು ಮೇವಿಗಾಗಿ ಗುಡ್ಡಕ್ಕೆ ತೆರಳಿದ್ದ ಹಸು ಸ್ಪೋಟಕ ಸಿಡಿದು ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಅವರು ನೀಡಿದ ದೂರಿನಂತೆ ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕರೋಪಾಡಿ ಗ್ರಾಮದ ಚೆಲ್ಲಂಗಾರು ನಿವಾಸಿ ಗೋವಿಂದ ನಾಯ್ಕರವರನ್ನು ಆರಂಭದಲ್ಲೇ ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಇರ್ದೆ ದೂಮಡ್ಕ ಪೆಲತ್ತಾಜೆ ನಿವಾಸಿ ಶೀನಪ್ಪ ನಾಯ್ಕ ಸ್ಪೋಟಕ ತಯಾರಿಸಿ ಗುಡ್ಡದಲ್ಲಿ ಇರಿಸುತ್ತಿದ್ದುದಾಗಿ ಮಾಹಿತಿ ತಿಳಿದು ಬಂತಲ್ಲದೆ ಇದಕ್ಕೆ ಹಾಸನ ಹಾಲೂರು ನಿವಾಸಿ ವಿನೋದ್ ಶೆಟ್ಟಿ ಸಹಕರಿಸುತ್ತಿದ್ದರು ಮಾತ್ರವಲ್ಲದೆ ವಿಜಯ ಜಾನ್‌ರವರು ತನ್ನ ರಿಕ್ಷಾದಲ್ಲಿ ಇವರನ್ನು ಇಲ್ಲಿಗೆ ಕರೆತರುತ್ತಿದ್ದರೆಂಬ ಮಾಹಿತಿಯನ್ನು ನೀಡಿದ್ದರು. ಅವರು ನೀಡಿದ ಮಾಹಿತಿಯ ಆಧಾರದಲ್ಲಿ ತನಿಖೆ ಆರಂಭಿಸಿದ ವಿಟ್ಲ ಪೊಲೀಸರು ಆರಂಭದಲ್ಲಿ ವಿಜಯ ಜಾನ್‌ರವರನ್ನು ಬಂಧಿಸಿದ್ದರು. ಇದೀಗ ಮತ್ತಿಬ್ಬರನ್ನು ಬಂಧಿಸಿದ್ದು ಪ್ರಕರಣದಲ್ಲಿ ಒಟ್ಟು ನಾಲ್ಕು ಮಂದಿ ಆರೋಪಿಗಳ ಬಂಧನವಾದಂತಾಗಿದೆ.
ಎಸ್‌ಪಿ ಭೂಷಣ್ ಜಿ ಬೊರಸೆ, ಬಂಟ್ವಾಳ ಡಿವೈಎಸ್‌ಪಿ ರವೀಶ್ ಮಾರ್ಗದರ್ಶನದಲ್ಲಿ, ಬಂಟ್ವಾಳ ವೃತ್ತ ನಿರೀಕ್ಷಕ ಬಿ.ಕೆ ಮಂಜಯ್ಯರವರ ನಿರ್ದೇಶನದಲ್ಲಿ ವಿಟ್ಲ ಠಾಣಾ ಎಎಸ್‌ಐ ಕೊರಗಪ್ಪ ನಾಯ್ಕ, ಆನಂದ ಪೂಜಾರಿ, ಸಿಬ್ಬಂದಿಗಳಾದ ಜಯಕುಮಾರ್, ಬಾಲಕೃಷ್ಣ, ಪ್ರವೀಣ್ ರೈ, ರಮೇಶ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಂಸದ ಆಸೆಗೆ ಸ್ಪೋಟಕವಿರಿಸುತ್ತಿದ್ದರು
ಆರೋಪಿಗಳು ಮಾಂಸದ ಆಸೆಗಾಗಿ ಕಾಡು ಹಂದಿಯನ್ನು ಬೇಟೆಯಾಡುವ ಇರಾದೆಯಿಂದ ಸ್ಪೋಟಕಗಳನ್ನು ಬಳಸಿ ಅವುಗಳನ್ನು ಹಿಡಿಯುತ್ತಿದ್ದರು. ಶೀನಪ್ಪರವರು ಇತರರೊಂದಿಗೆ ತೆರಳಿ ಗರ್ನಾಲ್, ಕೇಪು ಪಟಾಕಿಯನ್ನು ಸೇರಿಸಿ ಕಲ್ಲಿನ ನಡುವೆ ಕಟ್ಟಿ ಮಾಂಸ ತ್ಯಾಜ್ಯದಲ್ಲಿ ಇಟ್ಟು ಕಾಡ ಹಂದಿ ಬೇಟೆಗೆ ರಾತ್ರಿ ವೇಳೆಯಲ್ಲಿ ಗುಡ್ಡದಲ್ಲಿ ಇರಿಸಿ ಬೆಳಗಾಗುತ್ತಿದ್ದಂತೆ ತೆಗೆದುಬಿಡುತ್ತಿದ್ದರು. ಕಳೆದ ಕೆಲ ತಿಂಗಳುಗಳ ಹಿಂದಿನಿಂದ ಹಲವಾರು ಬಾರಿ ಸ್ಪೋಟಕಗಳನ್ನು ಇರಿಸಿದ್ದರು. ಎರಡು ಬಾರಿ ಹಂದಿ ಸಿಕ್ಕಿದೆ. ಮೊನ್ನೆ ರಾತ್ರಿಯೂ ಇದೇ ರೀತಿ ಸ್ಪೋಟಕವನ್ನಿರಿಸಿ ತೆರಳಿದ್ದರು ಆದರೆ ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಸ್ಪೋಟಕವು ನಾವು ಇಟ್ಟ ಜಾಗದಲ್ಲಿರದೆ ದನ ಅದನ್ನು ತಿಂದು ಅನಾಹುತ ಸಂಭವಿಸಿತ್ತು ಎಂದು ಶೀನಪ್ಪರವರು ವಿಚಾರಣೆ ವೇಳೆ ತಪ್ಪೊಪ್ಪಿಗೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.