ಕುಂಬ್ರದಲ್ಲಿ ಬಿ.ಕೆ ರೆಸಿಡೆನ್ಸಿ ಫ್ಯಾಮಿಲಿ ಅಪಾರ್ಟ್‌ಮೆಂಟ್ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

bk-residency

ಮಂಗಳೂರು ನಗರಕ್ಕೆ ಸರಿಸಾಟಿಯಾಗಬಲ್ಲ ರೆಸಿಡೆನ್ಸಿ-ಯು.ಟಿ ಖಾದರ್

ಪುತ್ತೂರು: ಗ್ರಾಮದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಳೆಯುತ್ತಿರುವ ಕುಂಬ್ರ ಪೇಟೆಯಲ್ಲಿ ಬಹಳ ಸುಸಜ್ಜಿತವಾದ ರೆಸಿಡೆನ್ಸಿ ನಿರ್ಮಾಣ ಮಾಡಿದ ಯುವಕ ಬಶೀರ್ ಇಂದ್ರಾಜೆಯವರು ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಸರಕಾರದಿಂದ ಎಲ್ಲರಿಗೂ ಸೂರು ಒದಗಿಸಲು ಕಷ್ಟ ಸಾಧ್ಯವಾಗಿರುವ ಇಂದಿನ ದಿನಗಳಲ್ಲಿ ಗ್ರಾಮಸ್ಥರ ಅನುಕೂಲಕ್ಕೆ ತಕ್ಕಂತೆ, ಮಂಗಳೂರು ನಗರಕ್ಕೆ ಸರಿಸಾಟಿಯಾಗಬಲ್ಲಂತಹ ರೆಸಿಡೆನ್ಸಿ ಬಿ.ಕೆ ರೆಸಿಡೆನ್ಸಿ ಫ್ಯಾಮಿಲಿ ಅಪಾರ್ಟ್‌ಮೆಂಟ್ ಆಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾದ ಯು.ಟಿ ಖಾದರ್‌ರವರು ಹೇಳಿದರು.

ಕುಂಬ್ರದಲ್ಲಿ ಬಶೀರ್ ಇಂದ್ರಾಜೆಯವರು ನಿರ್ಮಿಸಿರುವ 3 ಅಂತಸ್ತಿನ ಸುಸಜ್ಜಿತ ಬಿ.ಕೆ ರೆಸಿಡೆನ್ಸಿ ಪ್ಯಾಮಿಲಿ ಅಪಾರ್ಟ್‌ಮೆಂಟ್ ಅನ್ನು ಅ.24ರಂದು ರಿಬ್ಬನ್ ತುಂಡರಿಸುವ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು. ಯುವಕರು ಏನಾದರೂ ಒಳ್ಳೆಯ ಸಾಧನೆಯನ್ನು ಮಾಡಬೇಕು, ಸಮಾಜಕ್ಕೆ ತನ್ನಿಂದಾಗುವ ಕೊಡುಗೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಕೊಳ್ಳಬೇಕು ಎಂದ ಖಾದರ್‌ರವರು ಬಶೀರ್ ಇಂದ್ರಾಜೆಯವರಿಂದ ಇನ್ನಷ್ಟು ಸಮಾಜಮುಖಿ ಕೊಡುಗೆಗಳು ಮೂಡಿ ಬರಲಿ ಎಂದು ಹೇಳಿ ಶುಭ ಹಾರೈಸಿದರು. ಸಯ್ಯದ್ ನಝೀರ್ ಅಲ್-ಬುಖಾರಿ ಮಲಶೀಯಾರವರು ದುವಾ ನೆರವೇರಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಕುಂಬ್ರ ಈಗಾಗಲೇ ರಾಜ್ಯದಲ್ಲಿ ಗುರುತಿಸಿಕೊಂಡಿದೆ-ಎಂ.ಎಸ್.ಮಹಮ್ಮದ್: ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯತು ಸದಸ್ಯ ಎಂ.ಎಸ್ ಮಹಮ್ಮದ್‌ರವರು ಮಾತನಾಡಿ, ಈಗಾಗಗಲೇ ಶಿಕ್ಷಣ ಕ್ಷೇತ್ರದಲ್ಲಿ ಕುಂಬ್ರ ಇಡೀ ರಾಜ್ಯದಲ್ಲಿ ಗುರುತಿಸುವಂತಾಗಿದೆ. ಇದೀಗ ಒಂದೇ ದಿನ ಕಮರ್ಷಿಯಲ್ ವಾಣಿಜ್ಯ ಸಂಕೀರ್ಣ ಹಾಗೂ ರೆಸಿಡೆನ್ಸಿ ಉದ್ಘಾಟನೆಗೊಳ್ಳುವ ಮೂಲಕ ಕುಂಬ್ರ ಇನ್ನಷ್ಟು ಪ್ರಕಾಶಿಸುವಂತಾಗಿದೆ ಎಂದರು. ಸಮಾಜದ ಋಣ ತೀರಿಸುವ ಗುಣ ನಮ್ಮಲ್ಲಿರಬೇಕು ಎಂದ ಅವರು, ಸಮಾಜದಲ್ಲಿ ಒಳ್ಳೆಯ ಸಾಧನೆಯನ್ನು ಮಾಡುವ ಹಠ ಯುವಕರಲ್ಲಿ ಮೂಡಬೇಕು ಎಂದು ಹೇಳಿ ಶುಭ ಹಾರೈಸಿದರು.

ಕುಂಬ್ರ ಕೂಡಲೇ ನಗರಪಂಚಾಯತು ಆಗಬೇಕು-ಕಾವು ಹೇಮನಾಥ ಶೆಟ್ಟಿ: ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ಬೆಳೆಯುತ್ತಿರುವ ಕುಂಬ್ರ ಪೇಟೆಯನ್ನು ನೋಡಿದರೆ ಕುಂಬ್ರ ನಗರ ಪಂಚಾಯತು ಆಗುವುದಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಹೊಂದಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕುಂಬ್ರ ನಗರ ಪಂಚಾಯತು ಆಗಲಿ ಎಂದು ಹೇಳಿದ ಅವರು, ಹೊರಗಿನ ಮಂದಿಯೇ ಕುಂಬ್ರದಲ್ಲಿ ಅತೀ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಊರಿನ ಬೆಳವಣಿಗೆಯಲ್ಲಿ ಕೈಜೋಡಿಸುತ್ತಿರುವ ಪ್ರತಿಯೊಬ್ಬರನ್ನು ಕೂಡ ನಾವು ಪ್ರೋತ್ಸಾಹಿಸಬೇಕಾಗಿದೆ ಎಂದರು.

ಸನ್ಮಾನ: ಬಿ.ಕೆ ರೆಸಿಡೆನ್ಸಿಯ ನೀಲ ನಕ್ಷೆ ತಯಾರಿಸಿ ರೂಪುರೇಷೆ ಹಾಕಿಕೊಟ್ಟ ಆರ್ಕಿಟೆಕ್, ಇಂಜಿನಿಯರ್ ಅಬ್ದುಲ್ ಮಜೀದ್ ಎಚ್.ಸಾಮೆತ್ತಡ್ಕರವರನ್ನು ಈ ಸಂದರ್ಭದಲ್ಲಿ ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅಬ್ದುಲ್ ಮಜೀದ್‌ರವರು, ಜನರ ಅಭಿರುಚಿಗೆ ತಕ್ಕಂತೆ ವಿನ್ಯಾಸ ಮಾಡಲಾಗಿದೆ. ಮಂಗಳೂರು ಶೈಲಿಯಲ್ಲಿದೆ. ಮಾಲಕ ಬಶೀರ್ ಇಂದ್ರಾಜೆ ಮತ್ತು ಎಲ್ಲರ ಸಹಕಾರದಿಂದ ಇಂತಹ ರೆಸಿಡೆನ್ಸಿ ಮೂಡಿಬಂದಿದೆ. ಬಿ.ಕೆ ರೆಸಿಡೆನ್ಸಿಯಲ್ಲಿ ೧೨ ಮನೆಗಳಿವೆ. ೩ ಬೆಡ್ ರೂಮ್‌ನ ೩ ಮನೆ ಮತ್ತು ೨ ಬೆಡ್ ರೂಮ್‌ನ ೯ ಮನೆಗಳಿವೆ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕೆಲಸಗಳನ್ನು ನಿರ್ವಹಿಸಿದ ಹಸನ್ ಕುಂಞ್ ಇಂದ್ರಾಜೆ,ಉಮ್ಮರ್, ಎಸ್.ಎಂ.ಮೊಹಮ್ಮದ್ ಸುಳ್ಯರವರುಗಳನು ಕೂಡ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮನೆ, ಮನದಲ್ಲಿ ದೇವರು ಇರ‍್ತಾರೆ- ಕುಂಬ್ರ ದುರ್ಗಾಪ್ರಸಾದ ರೈ: ತಾಲೂಕು ವಕೀಲರ ಸಂಘದ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ, ಬಿ.ಕೆ ರೆಸಿಡೆನ್ಸಿ ನಿರ್ಮಾಣಗೊಂಡಿರುವ ಜಾಗವೇ ನಿಜವಾದ ಕುಂಬ್ರ ಆಗಿದೆ. ಪ್ರಸ್ತುತ ಕುಂಬ್ರ ಪೇಟೆ ಇರುವ ಜಾಗಕ್ಕೆ ಬಾಂದಲಪ್ಪು ಎಂದು ಕರೆಯುತ್ತಾರೆ.ಗ್ರಾಮದ ಅಭಿವೃದ್ಧಿಯಲ್ಲಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಮಾನವರಾಗುವ ಮೂಲಕ ಸಮಾಜವನ್ನು ಬೆಳೆಸುವ ಆ ಮೂಲಕ ನಾವು ಕೂಡ ಬೆಳೆಯೋಣ. ಮನೆ ಮತ್ತು ಮನದಲ್ಲಿ ಸದಾ ದೇವರು ನೆಲೆಸಿರುತ್ತಾನೆ ಎಂದು ಹೇಳಿ ಶುಭ ಹಾರೈಸಿದರು.

ಸಂಪತ್ತಿನ ಒಂದಂಶವನ್ನು ಸಮಾಜಕ್ಕೆ ನೀಡೋಣ-ಪಿ.ಎಂ ಅಬ್ದುಲ್ ರಹೀಮಾನ್ ಅರಿಯಡ್ಕ: ಮರ್ಕಝುಲ್ ಹುದಾ ಕುಂಬ್ರ ಇದರ ಅಧ್ಯಕ್ಷ, ಒಳಮೊಗ್ರು ಗ್ರಾ.ಪಂ ಸದಸ್ಯ ಅಬ್ದುಲ್ ರಹೀಮಾನ್ ಅರಿಯಡ್ಕರವರು ಮಾತನಾಡಿ, ನಾವು ಗಳಿಸಿದ ಸಂಪತ್ತಿನಲ್ಲಿ ಒಂದಂಶವನ್ನು ಸಮಾಜಕ್ಕೆ ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸುವ ಮೂಲಕ ಸಮಾಜವನ್ನು ಅಭಿವೃದ್ಧಿ ಮಾಡಬೇಕಾಗಿದೆ. ಆ ಮೂಲಕ ನಾವು ಕೂಡ ಅಭಿವೃದ್ಧಿ ಹೊಂದಬೇಕು. ಬಶೀರ್ ಇಂದ್ರಾಜೆಯವರು ಕೆಲಸ ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.

ಸೌಹಾರ್ದತೆಯಿಂದ ಮಾನವರಾಗಿ ಬದುಕು ನಡೆಸೋಣ-ಎಂ.ಎಸ್.ಎಂ ಅಬ್ದುಲ್ ರಶೀದ್ ಝೈನಿ: ಸ್ವಾಗತಿಸಿದ ಕೆ.ಸಿ.ಎಫ್ ಇಂಟರ್‌ನ್ಯಾಷನಲ್ ಕೌನ್ಸಿಲ್‌ನ ಉಪಾಧ್ಯಕ್ಷ ಎಂ.ಎಸ್.ಎಂ ಅಬ್ದುಲ್ ರಶೀದ್ ಝೈನಿಯವರು ಮಾತನಾಡಿ,ಜಾತಿ, ಧರ್ಮ, ಮತ ಕೋಮು ಮರೆತು ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಇಂತಹ ಒಂದು ಸುಂದರ ಕಟ್ಟಡವನ್ನು ನಿರ್ಮಿಸಿದ್ದಾರೆ. ಅದೇ ರೀತಿ ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ದೇಶವನ್ನು ಭದ್ರಪಡಿಸಬೇಕಾಗಿದೆ ಎಂದರು.ಸೌಹಾರ್ದತೆಯ ವಾತಾವರಣವನ್ನು ಸೃಷ್ಟಿ ಮಾಡುವ ಮೂಲಕ ಮಾನವರಾಗಿ ಬದುಕನ್ನು ನಡೆಸಿದರೆ ದೇಶದಲ್ಲಿ ಶಾಂತಿ ಸೌಹಾರ್ದತೆ ನೆಲೆಗೊಳ್ಳಲು ಸಾಧ್ಯವಿದೆ. ಇಂತಹ ಮನಸ್ಸು ನಮ್ಮದಾಗಬೇಕು, ಯುವಕ ಬಶೀರ್ ಇಂದ್ರಾಜೆಯವರು ಕುಂಬ್ರದಲ್ಲಿ ಇಂತಹ ಸುಂದರ ರೆಸಿಡೆನ್ಸಿಯನ್ನು ನಿರ್ಮಾಣ ಮಾಡುವ ಮೂಲಕ ಇಡೀ ಯುವ ಜನಾಂಗಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ. ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೇಳಿ ಶುಭ ಹಾರೈಸಿದರು.

ಕುಂಬ್ರ ಕರ್ನಾಟಕ ಇಸ್ಲಾಮಿಕ್ ಸೆಂಟರ್‌ನ ಮೆನೇಜರ್ ಕೆ.ಆರ್.ಹುಸೈನ್ ದಾರಿಮಿ ರೆಂಜಿಲಾಡಿ ಮತ್ತು ಎಸ್.ಡಿ.ಪಿ.ಐ ರಾಜ್ಯ ಕಾರ‍್ಯದರ್ಶಿ ಎಲ್.ಕೆ ಲತೀಫ್‌ರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರುರವರು ಭೇಟಿ ನೀqಡಿ ಶುಭಕೋರಿದರು.

ಇವರೆಲ್ಲರೂ ವೇದಿಕೆಯಲ್ಲಿದ್ದರು : ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಮಾನ್, ಕಾಂಗ್ರೆಸ್ ಮುಖಂಡ, ಹಿರಿಯ ರಾಜಕಾರಣಿ ಕುಂಬ್ರ ಬಾಲಕೃಷ್ಣ ರೈ, ಕರ್ನಾಟಕ ಕೆ.ಎಂ.ಜೆ.ಸಿ ಉಪಾಧ್ಯಕ್ಷ ಕೆ.ಎಂ. ರಶೀದ್ ಹಾಜಿ ಬೆಳ್ಳಾರೆ, ಪುತ್ತೂರು ಯೂತ್ ಕಾಂಗ್ರೆಸ್ ಅಧ್ಯಕ್ಷ ಅರ್ಷದ್ ದರ್ಬೆ, ಕೆಯ್ಯೂರು ಗ್ರಾಮ ಪಂಚಾಯತು ಸದಸ್ಯ ಕೆ.ಎಂ. ಹನೀಪ್ ಮಾಡಾವು, ಎ.ಎಚ್.ಇಸ್ಮಾಯಿಲ್ ಮುಸ್ಲಿಯಾರ್ ನೆಕ್ಕಿತಡ್ಕ, ಕೆ.ಎಚ್.ಅಬ್ದುಲ್ ಜಲೀಲ್ ಕುಂಬ್ರ, ಆದಂ ಅಸ್ಸ್‌ಹಾನಿ, ಇಬ್ರಾಹಿಂ ಮದನಿ ಮತ್ತಿತರರು ಉಪಸ್ಥಿತರಿದ್ದರು. ನೌಫಲ್ ಕುಡ್ತಮುಗೇರು ಕಾರ‍್ಯಕ್ರಮ ನಿರೂಪಿಸಿದರು. ಬಿ.ಕೆ ರೆಸಿಡೆನ್ಸಿ ಪ್ಯಾಮಿಲಿ ಅಪಾರ್ಟ್‌ಮೆಂಟ್ ಮಾಲಕ ಎಂ.ಬಶೀರ್ ಇಂದ್ರಾಜೆಯವರು ಎಲ್ಲಾ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಕುಂಬ್ರದಲ್ಲಿ ಮಹಡಿ ಮನೆಯಲ್ಲಿ ವಾಸಿಸುವವರಿಗೆ ದೋಷ ಇದೆ-ಹೀಗೊಂದು ವಾಟ್ಸಪ್ ಮೇಸೇಜ್

ಎರಡು ಅಂತಸ್ತಿಗಿಂತ ಎತ್ತರಕ್ಕೆ ಒಳಮೊಗ್ರು ಗ್ರಾಮದಲ್ಲಿ ಮನೆ ನಿರ್ಮಿಸಿದರೆ ಅಂತಹ ಮನೆಯಲ್ಲಿ ವಾಸ ಮಾಡುವ ಮಂದಿಗೆ ದೋಷ, ಅಪಾಯ ಬರುತ್ತದೆ ಎಂಬ ಮೆಸೇಜ್‌ವೊಂದು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣ ವಾಟ್ಸಪ್‌ನಲ್ಲಿ ಹರಿದಾಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾವು ಹೇಮನಾಥ ಶೆಟ್ಟಿಯವರು, ಇಂತಹ ಮೆಸೇಜ್‌ಗಳು ವಾಟ್ಸಪ್‌ನಲ್ಲಿ ಹರಿದಾಡುತ್ತಿರುವುದು ದುರಂತ. ದೋಷ ಇರುವುದು ಮನೆಯಲ್ಲಿ ವಾಸ ಮಾಡುವವರಿಗೆ ಅಲ್ಲ, ಈ ರೀತಿಯ ಮೆಸೇಜ್‌ಗಳನ್ನು ಸೃಷ್ಟಿಸಿ ಹರಿಯಬಿಡುವವರಿಗೆ ಎಂದು ಹೇಳಿದರು.ದೇವರ ದಯೆ ಇರುವವರೆಗೆ ಯಾವುದೇ ದೋಷ ಬರುವುದಿಲ್ಲ, ಇಂತಹ ಮೆಸೇಜ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.